Dinesh Karthik RCB: ದಿನೇಶ್ ಕಾರ್ತಿಕ್ ಬಗ್ಗೆ ಅಸಮಾಧಾನ ಹೊರಹಾಕಿದ ಆರ್ಸಿಬಿ ಕೋಚ್. ಹೇಳಿದ್ದೇನು ಗೊತ್ತೇ??

Dinesh Karthik RCB: ದಿನೇಶ್ ಕಾರ್ತಿಕ್ ಬಗ್ಗೆ ಅಸಮಾಧಾನ ಹೊರಹಾಕಿದ ಆರ್ಸಿಬಿ ಕೋಚ್. ಹೇಳಿದ್ದೇನು ಗೊತ್ತೇ??

Dinesh Karthik RCB: ದಿನೇಶ್ ಕಾರ್ತಿಕ್ (Dinesh Karthik) ಅವರು 15 ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ (Team India) ಸಕ್ರಿಯರಾಗಿದ್ದಾರೆ. ಇವರು 2019ರ ನಂತರ ಕಳಪೆ ಫಾರ್ಮ್ ಇಂದಾಗಿ ಭಾರತ ತಂಡದಿಂದ ಹೊರಗುಳಿದಿದ್ದರು, ದಿನೇಶ್ ಕಾರ್ತಿಕ್ ಅವರ ಇಂಟರ್ನ್ಯಾಷನಲ್ ಕ್ರಿಕೆಟ್ ಕೆರಿಯರ್ ಅಲ್ಲಿಗೆ ಮುಗಿಯಿತು ಎಂದೇ ಎಲ್ಲರು ಭಾವಿಸಿದ್ದರು, ಆದರೆ 2022ರ ಐಪಿಎಲ್ ನಲ್ಲಿ (IPL) ಆರ್.ಸಿ.ಬಿ (RCB) ಪರವಾಗಿ ಫಿನಿಷರ್ ಆಗಿ ಅದ್ಭುತ ಪ್ರದರ್ಶನ ನೀಡುವ ಮೂಲಕ, ಟೀಮ್ ಇಂಡಿಯಾಗೆ ವಾಪಸ್ ಆಗಿದ್ದು ಎಲ್ಲರಿಗೂ ಆಶ್ಚರ್ಯ ಆಗಿತ್ತು. ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್, ಫಿನಿಷರ್ ಸ್ಥಾನವನ್ನು ಪಡೆದುಕೊಂಡ ದಿನೇಶ್ ಕಾರ್ತಿಕ್ ಅವರು, ಉತ್ತಮ ಪ್ರದರ್ಶನ ನೀಡುವ ಮೂಲಕ ಟಿ20 ವಿಶ್ವಕಪ್ (T20 World Cup) ತಂಡಕ್ಕೂ ಆಯ್ಕೆಯಾದರು.

ಆದರೆ ವಿಶ್ವಕಪ್ ನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸುವ ಮೂಲಕ ಎಡವಿದ್ದಾರೆ, ಭಾರತ ವರ್ಸಸ್ ಪಾಕಿಸ್ತಾನ್ (India vs Pakistan) ಪಂದ್ಯದಲ್ಲಿ ಒತ್ತಡವಿದ್ದಾಗ, ಕೊನೆಯ ಘಳಿಗೆಯಲ್ಲಿ ಬಂದ ಕಾರ್ತಿಕ್ ಅವರು ಔಟ್ ಆಗಿ, ತಂಡದ ಮೇಲೆ ಇನ್ನಷ್ಟು ಒತ್ತಡ ಹೇರಿದರು. ಬಳಿಕ, ಭಾರತ ವರ್ಸಸ್ ಸೌತ್ ಆಫ್ರಿಕಾ (India vs South Africa) ಮೂರನೇ ಪಂದ್ಯದಲ್ಲಿ ಪ್ರಮುಖ ವಿಕೆಟ್ಸ್ ಗಳನ್ನು ಕಳೆದುಕೊಂಡಿದ್ದಾಗ ಬಂದ ಕಾರ್ತಿಕ್ ಅವರು, ರನ್ ಗಳಿಸಲು ಕಷ್ಟಪಟ್ಟರು, 15 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ, ಔಟ್ ಆದರು. ಯುವ ಆಟಗಾರ ರಿಷಬ್ ಪಂತ್ (Rishab Pant) ಅವರ ಬದಲಾಗಿ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಲಾಗಿಯ್ತು. ಆದರೆ, ಕಾರ್ತಿಕ್ ಅವರು ತಮಗೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಇದನ್ನು ಓದಿ.. Cricket News: ವಿಶ್ವಕಪ್ ಮುಗಿದ ಮೇಲೆ ರೋಹಿತ್ ನಾಯಕತ್ವ ಕಸಿದುಕೊಳ್ಳುವುದು ಪಕ್ಕ. ಭಾರತದ ಭವಿಷ್ಯದ ನಾಯಕ ಆತನೊಬ್ಬನೇ. ಯಾರು ಗೊತ್ತೇ??

ಹಾಗಾಗಿ ಇಂದು ನಡೆಯಲಿರುವ ಭಾರತ ವರ್ಸಸ್ ಬಾಂಗ್ಲಾದೇಶ್ (India vs Bangladesh) ಪಂದ್ಯಗಳಲ್ಲಿ ಕಾರ್ತಿಕ್ ಅವರ ಬದಲಾಗಿ ರಿಷಬ್ ಪಂತ್ ಅವರು ಆಡುವ ಸಾಧ್ಯತೆ ಹೆಚ್ಚಿದೆ. ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ (Dinesh Karthik) ಅವರಿಗೆ ಪಂದ್ಯದ ಮಧ್ಯದಲ್ಲೇ ಬೆನ್ನು ನೋವು ಉಂಟಾಗಿ, ಮೈದಾನದಿಂದ ಹೊರನಡೆದಿದ್ದರು. ಆಗ ರಿಷಬ್ ಪಂತ್ (Rishab Pant) ಅವರು ಬಂದು ಕಾರ್ತಿಕ್ ಅವರ ಬದಲಾಗಿ ವಿಕೆಟ್ ಕೀಪಿಂಗ್ ಮಾಡಿದ್ದರು. ದಿನೇಶ್ ಕಾರ್ತಿಕ್ ಅವರಿಗೆ ಬೆನ್ನು ನೋವು ಕಡಿಮೆ ಆಗಿದ್ದರು, ಅವರ ಬದಲಾಗಿ, ರಿಷಬ್ ಪಂತ್ ಅವರೇ ಆಡುವ ಸಾಧ್ಯತೆ ಹೆಚ್ಚಿದೆ. ದಿನೇಶ್ ಕಾರ್ತಿಕ್ ಅವರ ಈ ನೀರಸ ಪ್ರದರ್ಶನದ ಬಗ್ಗೆ, ಆರ್.ಸಿ.ಬಿ ಕೋಚ್ ಸಂಜಯ್ ಬಂಗಾರ್ (Sanjay Bangar) ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಇದನ್ನು ಓದಿ.. Kohli: ರನ್ ಗಳಿಸಲು ಪರದಾಡುತ್ತಿರುವ ರಾಹುಲ್ ರವರಿಗೆ ಇಂದು ಕೊಹ್ಲಿ ಮಾಡಿದ್ದೇನು ಗೊತ್ತೇ?? ನಾಯಕನಲ್ಲ, ಆದರೆ ಲೀಡರ್ ಕೊಹ್ಲಿ ನೇ.

“ವಿಶ್ವಕಪ್ ನಲ್ಲಿ ಎರಡು ಅತ್ಯುತ್ತಮ ಅವಕಾಶಗಳು ದಿನೇಶ್ ಕಾರ್ತಿಕ್ ಅವರಿಗೆ ಸಿಕ್ಕಿತು, ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಸಮಯ ಕಡಿಮೆ ಇದ್ದರು ಸಹ ಅಶ್ವಿನ್ (Ravichandran Ashwin) ಅವರು ಮಾಡಿದ ಕೆಲಸವನ್ನು ದಿನೇಶ್ ಕಾರ್ತಿಕ್ ಅವರು ಮಾಡಬಹುದಿತ್ತು. ದಿನೇಶ್ ಕಾರ್ತಿಕ್ (Dinesh Karthik) ಅವರಿಗೆ ಮತ್ತೊಮ್ಮೆ ಇಂಡಿಯಾ ವರ್ಸಸ್ ಸೌತ್ ಆಫ್ರಿಕಾ ಪಂದ್ಯದಲ್ಲಿ ಅವಕಾಶ ಸಿಕ್ಕಿತು, ಆದರೆ ಆ ಪಂದ್ಯದಲ್ಲಿ ರನ್ ಗಳಿಸಿ, ಉತ್ತಮ ಪ್ರದರ್ಶನ ನೀಡದೆ ವಿಫಲರಾದರು. ಈ ರೀತಿ ಮಾಡುವ ಮೂಲಕ ತಮಗೆ ಸಿಕ್ಕ ಎರಡು ಪ್ರಮುಖ ಅವಕಾಶಗಳನ್ನು ಕೈಚಲ್ಲಿದ್ದಾರೆ, ಇದರಿಂದ ದಿನೇಶ್ ಕಾರ್ತಿಕ್ ಅವರು ಈ ಟೂರ್ನಿಗೆ ಅನರ್ಹರಾಗಿ, ರಿಷಬ್ ಪಂತ್ (Rishab Pant) ಅವರಿಗೆ ವಿಶ್ವಕಪ್ ಆಡಲು ಪ್ರಬಲ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಿದೆ..” ಎಂದಿದ್ದಾರೆ ಸಂಜಯ್ ಬಂಗಾರ್. ಇದನ್ನು ಓದಿ.. Cricket news: ದಿನೇಶ್ ಕಾರ್ತಿಕ್ ರವರನ್ನು ನೇರವಾಗಿ ತೆಗೆದು ಹಾಕಿ ಎಂದ ಸೆಹ್ವಾಗ್: ಆತನ ಬದಲು ಯಾರು ಆಡಬೇಕಂತೆ ಗೊತ್ತೇ??