Cricket News: ವಿಶ್ವಕಪ್ ಮುಗಿದ ಮೇಲೆ ರೋಹಿತ್ ನಾಯಕತ್ವ ಕಸಿದುಕೊಳ್ಳುವುದು ಪಕ್ಕ. ಭಾರತದ ಭವಿಷ್ಯದ ನಾಯಕ ಆತನೊಬ್ಬನೇ. ಯಾರು ಗೊತ್ತೇ??
Cricket News: ವಿಶ್ವಕಪ್ ಮುಗಿದ ಮೇಲೆ ರೋಹಿತ್ ನಾಯಕತ್ವ ಕಸಿದುಕೊಳ್ಳುವುದು ಪಕ್ಕ. ಭಾರತದ ಭವಿಷ್ಯದ ನಾಯಕ ಆತನೊಬ್ಬನೇ. ಯಾರು ಗೊತ್ತೇ??
Cricket News: ನವೆಂಬರ್ 13ರಂದು ಟಿ20 ವಿಶ್ವಕಪ್ (T20 World Cup) ಮುಗಿಯಲಿದ್ದು, ಮುಂದಿನ ಟಿ20 ವಿಶ್ವಕಪ್ ನಡೆಯುವುದು 2024ಕ್ಕೆ . ಅಲ್ಲಿಯವರೆಗೂ ರೋಹಿತ್ ಶರ್ಮಾ (Rohit Sharma) ಅವರು ಕ್ಯಾಪ್ಟನ್ ಆಗಿ ಮುಂದುವರೆಯುವುದು ಕಷ್ಟ ಎಂದು ಹೇಳಲಾಗುತ್ತಿದೆ. 2023ರ ಏಕದಿನ ವಿಶ್ವಕಪ್ ಸರಣಿ ವರೆಗು ರೋಹಿತ್ ಶರ್ಮಾ ಅವರು ಕ್ಯಾಪ್ಟನ್ ಆಗಿ ಮುನ್ನಡೆಸುತ್ತಾರೆ. ಅದಾದ ಬಳಿಕ, ತಂಡದ ಪ್ರಮುಖ ಆಟಗಾರರಾದ ಕೆ.ಎಲ್.ರಾಹುಲ್ (K L Rahul), ಹಾರ್ದಿಕ್ ಪಾಂಡ್ಯ (Hardik Pandya), ರಿಷಬ್ ಪಂತ್ (Rishab Pant) ಈ ಮೂವರಲ್ಲಿ ಯಾರು ನಾಯಕತ್ವಕ್ಕೆ ಸೂಕ್ತ ಎನ್ನಿಸುತ್ತಾರೋ, ಅವರನ್ನು ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ. ರೋಹಿತ್ ಶರ್ಮಾ ಅವರಿಗೆ ಈಗ 35 ವರ್ಷ, ವಿರಾಟ್ ಕೋಹ್ಲಿ (Virat Kohli) ಅವರಿಗೆ 34 ವರ್ಷ. ಇನ್ನು ಹೆಚ್ಚು ವರ್ಷಗಳ ಕಾಲ ಇವರಿಬ್ಬರು ತಂಡದಲ್ಲಿ ಆಡಲು ಆಗುವುದಿಲ್ಲ.
ಟಿ20 ವಿಶ್ವಕಪ್ ಬಳಿಕ ವಿರಾಟ್ ಕೋಹ್ಲಿ (Virat Kohli) ಅವರಿಗೆ, ಏಕದಿನ ಸರಣಿ ಮತ್ತು ಟೆಸ್ಟ್ ಪಂದ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಲು ಹೇಳಲಿದ್ದಾರಂತೆ, ಪ್ರಮುಖವಾದ ಟಿ20 ಸರಣಿಗಳಲ್ಲಿ ಮಾತ್ರ ಅವರನ್ನು ಆಡಿಸಲು ಪ್ಲಾನ್ ಮಾಡಿದೆ ಬಿಸಿಸಿಐ, ರೋಹಿತ್ ಶರ್ಮಾ (Rohit Sharma) ಅವರ ವಿಷಯದಲ್ಲಿ ಸಹ ಇದೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಯಲ್ಲಿ ಹಲವು ಟಿ20 ಸರಣಿಗಳನ್ನು ಭಾರತ ತಂಡ ಗೆದ್ದಿದೆ, ಈ ವರ್ಷ ಟಿ20 ವಿಶ್ವಕಪ್ (T20 World Cup) ಅನ್ನು ಸಹ ಗೆಲ್ಲುವ ವಿಶ್ವಾಸ ಹೊಂದಿದೆ. ಬಿಸಿಸಿಐ ಹೊಸ ನಾಯಕನನ್ನು ಆಯ್ಕೆಮಾಡಲು, ಸಿದ್ಧತೆ ನಡೆಸುತ್ತಿದೆ. ಇದರ ಬಗ್ಗೆ ಬಿಸಿಸಿಐ ಅಧಿಕಾರಿ ಮಾತನಾಡಿದ್ದು, “ಭಾರತ ತಂಡಕ್ಕೆ (Team India) ಅವರಿಬ್ಬರು ನಿರ್ಣಾಯಕ ಆಟಗಾರರು, ಅವರಿಬ್ಬರು ಮುಖ್ಯ ಸರಣಿಗಳಲ್ಲಿ ಮತ್ತು ಐಸಿಸಿ (ICC) ಪಂದ್ಯಗಳಲ್ಲಿ ನಿರಂತರವಾಗಿ ಆಡಿಸಬೇಕು ಹಾಗೆಯೇ ವಿಶ್ರಾಂತಿ ಕೊಡಬೇಕು. ಒಬ್ಬರೇ ನಾಯಕ ಎಲ್ಲಾ ಪಂದ್ಯಗಳಲ್ಲೂ ಆಡಲು ಆಗುವುದಿಲ್ಲ. ಹಾಗಾಗಿ ಹಾರ್ದಿಕ್ ಪಾಂಡ್ಯ (Hardik Pandya) ಅಥವಾ ರಿಷಬ್ ಪಂತ್ (Rishab Pant) ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಾದಾಗ ಕ್ರಮೇಣ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗುತ್ತದೆ…” ಎಂದು ಹೇಳಿದ್ದಾರೆ. ಇದನ್ನು ಓದಿ.. Kohli: ರನ್ ಗಳಿಸಲು ಪರದಾಡುತ್ತಿರುವ ರಾಹುಲ್ ರವರಿಗೆ ಇಂದು ಕೊಹ್ಲಿ ಮಾಡಿದ್ದೇನು ಗೊತ್ತೇ?? ನಾಯಕನಲ್ಲ, ಆದರೆ ಲೀಡರ್ ಕೊಹ್ಲಿ ನೇ.
2023ರ ಏಕದಿನ ವಿಶ್ವಕಪ್ ವರೆಗು ರೋಹಿತ್ ಶರ್ಮಾ ಅವರೇ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು, ಅದಾದ ಬಳಿಕ ಅವರ ಜೊತೆಗೆ, ವಿಶ್ವಕಪ್ ನಾಯಕತ್ವದ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಹಾಗೂ ರೋಹಿತ್ ಶರ್ಮಾ (Rohit Sharma) ಅವರಿಗೆ ಏಕದಿನ ಮತ್ತು ಟೆಸ್ಟ್ ಪಂದ್ಯಗಳ ಮೇಲೆ ಹೆಚ್ಚು ಗಮನ ಹರಿಸಲು ಹೇಳಲಾಗುತ್ತದೆ ಎಂದು ತಿಳಿದುಬಂದಿದೆ. ಇನ್ನು ಮುಂದಿನ ನಾಯಕತ್ವದ ಬಗ್ಗೆ ಬಿಸಿಸಿಐ (BCCI) ಅಧಿಕಾರಿಗಳು ಮಾತನಾಡಿ, “ಉತ್ತಮ ಪ್ರದರ್ಶನ ನೀಡಿರುವ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ರಿಷಬ್ ಪಂತ್ (Rishab Pant) ಇಬ್ಬರು ಕೂಡ ಐಪಿಎಲ್ ನಲ್ಲಿ ತಂಡದ ನಾಯಕರಾಗಿದ್ದಾರೆ. ಐಪಿಎಲ್ (IPL) ನಲ್ಲಿ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರು ಈಗಾಗಲೇ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಕೆ.ಎಲ್.ರಾಹುಲ್ (K L Rahul) ಅವರು ಕೂಡ ಇದ್ದು, ರೋಹಿತ್ ಮತ್ತು ವಿರಾಟ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ನಾಯಕತ್ವದ ಬಗ್ಗೆ 2023ರ ಏಕದಿನ ವಿಶ್ವಕಪ್ (ODI World Cup) ನಂತರ ಚರ್ಚೆ ಮಾಡಲಾಗುತ್ತದೆ..” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ.. Cricket news: ದಿನೇಶ್ ಕಾರ್ತಿಕ್ ರವರನ್ನು ನೇರವಾಗಿ ತೆಗೆದು ಹಾಕಿ ಎಂದ ಸೆಹ್ವಾಗ್: ಆತನ ಬದಲು ಯಾರು ಆಡಬೇಕಂತೆ ಗೊತ್ತೇ??