ಭಾರತಕ್ಕೆ ಎಷ್ಟೇ ಸವಾಲುಗಳು ಇದ್ದರೂ ಆಟವಾಡುವ ಹನ್ನೊಂದರ ಬಳಗ ಹೀಗಿದ್ದರೆ ಗೆಲುವು ಪಕ್ಕ. ಯಾರ್ಯಾರು ಯಾವ ಸ್ಥಾನದಲ್ಲಿ ಆಡಬೇಕು ಗೊತ್ತೇ??

ಭಾರತಕ್ಕೆ ಎಷ್ಟೇ ಸವಾಲುಗಳು ಇದ್ದರೂ ಆಟವಾಡುವ ಹನ್ನೊಂದರ ಬಳಗ ಹೀಗಿದ್ದರೆ ಗೆಲುವು ಪಕ್ಕ. ಯಾರ್ಯಾರು ಯಾವ ಸ್ಥಾನದಲ್ಲಿ ಆಡಬೇಕು ಗೊತ್ತೇ??

2022ರ ಟಿ20 ವಿಶ್ವಕಪ್ ಅಕ್ಟೋಬರ್ 16ರಂದು ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಭಾರತದ ಮೊದಲ ಪಂದ್ಯ ನಡೆಯುವುದು ಅಕ್ಟೋಬರ್ 23 ರಂದ ಬದ್ಧವೈರಿ ಪಾಕಿಸ್ತಾನ್ ವಿರುದ್ಧ. ಈಗಾಗಲೇ ಭಾರತ ತಂಡ ಆಸ್ಟ್ರೇಲಿಯಾಗೆ ಎಂಟ್ರಿ ಕೊಟ್ಟು ಅಭ್ಯಾಸ ನಡೆಸುತ್ತಿದೆ. ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಕೆಲವು ಸಮಸ್ಯೆಗಳು ಇದ್ದರು ಸಹ, ಬ್ಯಾಟಿಂಗ್ ವಿಭಾಗ ಚೆನ್ನಾಗಿದೆ. ಜೊತೆಗೆ ವಿಶ್ವಕಪ್ ಪಂದ್ಯಗಳ ಪ್ಲೇಯಿಂಗ್ 11 ನಲ್ಲಿ ಯಾರೆಲ್ಲಾ ಆಟಗಾರರು ಇರುತ್ತಾರೆ ಎನ್ನುವ ಕುತೂಹಲ ಇದೆ. ಈ ಆಟಗಾರರು ಪ್ಲೇಯಿಂಗ್ 11ನಲ್ಲಿದ್ದರೆ ಭಾರತ ತಂಡ ಪಂದ್ಯಗಳಲ್ಲಿ ಗೆಲ್ಲುವುದು ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ಹಾಗಿದ್ದರೆ ಭಾರತ ತಂಡದ ಪ್ಲೇಯಿಂಗ್ 11 ನಲ್ಲಿ ಯಾರೆಲ್ಲಾ ಇರಬೇಕು ಎಂದು ತಿಳಿಸುತ್ತೇವೆ ನೋಡಿ..

ಭಾರತ ತಂಡದ ಆರಂಭಿಕ ಆಟಗಾರನಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಬಹಳ ಮುಖ್ಯವಾದ ಪಾತ್ರ ವಹಿಸುತ್ತಾರೆ. ಇದುವರೆಗೂ ರೋಹಿತ್ ಅವರು ಆಡಿರುವ 33 ಟಿ20 ವಿಶ್ವಕಪ್ ಪಂದ್ಯಗಳಲ್ಲಿ 38.50 ಆವರೇಜ್ ನಲ್ಲಿ, 847 ರನ್ ಗಳಿಸಿದ್ದಾರೆ. ಔಟ್ ಆಗದೆ 79 ರನ್ ಗಳಿಸಿದ್ದಾರೆ. ಫಾರ್ಮ್ ಗೆ ಮರಳಿರುವ ಕೆ.ಎಲ್.ರಾಹುಲ್ ಅವರು ರೋಹಿತ್ ಅವರಿಗೆ ಒಳ್ಳೆಯ ಜೊತೆಯಾಟ ನೀಡುತ್ತಾರೆ. ಫಾರ್ಮ್ ಗೆ ಬಂದಿರುವ ವಿರಾಟ್ ಕೋಹ್ಲಿ ಅವರ ಮೇಲೆ ಹೆಚ್ಚಿನ ಭರವಸೆ ಇದೆ, ಟಿ20 ವಿಶ್ವಕಪ್ ನಲ್ಲಿ ಅತಿಹೆಚ್ಚು ರನ್ಸ್ ಗಳಿಸಿರುವವರು ಕೋಹ್ಲಿ, 21 ಪಂದ್ಯಗಳಲ್ಲಿ 76.81 ಆವರೇಜ್ ನಲ್ಲಿ 845 ರನ್ಸ್ ಭಾರಿಸಿದ್ದಾರೆ. 3ನೇ ಸ್ಥಾನಕ್ಕೆ ಇವರು ಉತ್ತಮ ಆಯ್ಕೆ. ಮೊದಲ ಆಯ್ಕೆಯಾಗುವ ಸೂರ್ಯಕುಮಾರ್ ಯಾದವ್ ಅವರು, ಮಧ್ಯಮ ಓವರ್ ನಲ್ಲಿ 200 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡುತ್ತಾರೆ, ಪ್ರಸ್ತುತ ಅದ್ಭುತವಾದ ಫಾರ್ಮ್ ನಲ್ಲಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ, ವರ್ಲ್ಡ್ ಕ್ಲಾಸ್ ಆಲ್ ರೌಂಡರ್ ಇವರು, ದಿನೇಶ್ ಕಾರ್ತಿಕ್ ಅವರೊಡನೆ ಫಿನಿಷರ್ ಪಾತ್ರಕ್ಕೆ ಅಚ್ಚುಕಟ್ಟಾಗಿ ನಿಲ್ಲುತ್ತಾರೆ.

ಸೂರ್ಯಕುಮಾರ್ ಅವರ ನಂತರ ಅತಿಹೆಚ್ಚು ಭರವಸೆ ಇರುವುದು ದಿನೇಶ್ ಕಾರ್ತಿಕ್ ಅವರ ಬಗ್ಗೆ, ಕೊನೆಯ ಓವರ್ ಗಳಲ್ಲಿ ಅದ್ಭುತವಾದ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಈ ಮೂಲಕ ತಂಡದ ಗೆಲುವಿಗೆ ಸಹಾಯ ಮಾಡುತ್ತಾರೆ. ರವೀಂದ್ರ ಜಡೇಜಾ ಅವರ ಬದಲಾಗಿ ಅಚಾನಕ್ ಆಗಿ ತಂಡಕ್ಕೆ ಬಂದ ಬೌಲರ್ ಅಕ್ಷರ್ ಪಟೇಲ್ ಆಕ್ರಮಣಕಾರಿ ಬೌಲಿಂಗ್ ಮಾಡಿ ವಿಕೆಟ್ಸ್ ಪಡೆಯುತ್ತಿದ್ದಾರೆ. ಇವರ ಬೌಲಿಂಗ್ ದಾಳಿಯನ್ನು ಬಲಗೈ ಬೌಲರ್ ಗಳು ಎದುರಿಸುವುದು ಬಹಳ ಕಷ್ಟ. ಅನುಭವಿ ಆಟಗಾರ ಅಶ್ವಿನ್ ಅವರು ಆಸ್ಟ್ರೇಲಿಯಾದಲ್ಲಿ ಉತ್ತಮ ಬೌಲಿಂಗ್ ಮಾಡಬಲ್ಲರು, ವಿಕೆಟ್ಸ್ ಪಡೆಯುವ ಜೊತೆಗೆ ರನ್ಸ್ ನಿಯಂತ್ರಣ ಮಾಡುತ್ತಾರೆ. ಆಫ್ ಸ್ಪಿನ್ ಬೌಲಿಂಗ್ ಇಂದ ಎದುರಾಳಿ ತಂಡಕ್ಕೆ ಸವಾಲು ಹಾಕುತ್ತಾರೆ.
ಜಸ್ಪ್ರೀತ್ ಬುಮ್ರ ಅವರ ಅನುಪಸ್ಥಿತಿಯಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಬೌಲಿಂಗ್ ಲೀಡ್ ಮಾಡಲಿದ್ದಾರೆ, ಪವರ್ ಪ್ಲೇ ನಲ್ಲಿ ಭುವನೇಶ್ವರ್ ಕುಮಾರ್ ಅವರು ಆಕ್ರಮಣಕಾರಿ ಬೌಲಿಂಗ್ ಮಾಡುತ್ತಾರೆ. ಜೊತೆಗೆ ಇವರಿಗೆ ಇರುವ ಅನುಭವ ತಂಡಕ್ಕೆ ಸಹಾಯ ಮಾಡುತ್ತದೆ.

ಚಾಹಲ್ ಅವರು ಆಸ್ಟ್ರೇಲಿಯಾ ಪಿಚ್ ನಲ್ಲಿ ಅದ್ಭುತ ಪ್ರದರ್ಶನ ನೀಡಬಹುದು. ಇವರ ರೀತಿಯ ಬೌಲಿಂಗ್ ನಲ್ಲಿ ಬಿಗ್ ಹಿಟ್ಸ್ ಹೊಡೆಯುವುದು ಕಷ್ಟದ ಕೆಲಸ ಆಗಿರುತ್ತದೆ. ಆಸ್ಟ್ರೇಲಿಯಾ ಗ್ರೌಂಡ್ ನಲ್ಲಿ ಬೌಂಡರಿ ಗಳು ದೊಡ್ಡದಾಗಿರುವುದರಿಂದ ಬ್ಯಾಟ್ಸ್ಮನ್ ಗಳಿಗೆ ಮಿಸ್ ಫೈರ್ ಆಗಬಹುದು. ಹಾಗಾಗಿ ಚಾಹಲ್ ಅವರ ಮೇಲೆ ಹೆಚ್ಚು ನಿರೀಕ್ಷೆ ಇದೆ. ಅರ್ಷದೀಪ್ ಸಿಂಗ್ ಅವರ ಮೇಲು ಹೆಚ್ಚಿನ ನಿರೀಕ್ಷೆ ಇದೆ, ಉತ್ತಮ ಬೌಲಿಂಗ್ ಮಾಡಿ ಎಲ್ಲರನ್ನು ಮೆಚ್ಚಿಸಿದ್ದಾರೆ, ಈಗಾಗಲೇ ಅಭ್ಯಾಸ ಪಂದ್ಯಗಳಲ್ಲಿ ವಿಕೆಟ್ಸ್ ಪಡೆದಿದ್ದಾರೆ, ಇವರು ಎತ್ತರ ಇರುವುದರಿಂದ ಆಸ್ಟ್ರೇಲಿಯಾ ಪಿಚ್ ನಲ್ಲಿ, ಬೌನ್ಸರ್ ಹಾಕಲು ಸಹಾಯವಾಗುತ್ತದೆ. ಅಶ್ವಿನ್ ಅವರನ್ನು ತೆಗೆದುಕೊಳ್ಳದೆ ಹೋದರೆ ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಶಮಿ ಅವರು ಇರುತ್ತಾರೆ, ಆದರೆ ಹರ್ಷಲ್ ಪಟೇಲ್ ಅವರು ಉತ್ತಮ ಫಾರ್ಮ್ ನಲ್ಲಿಲ್ಲ, ಶಮಿ ಅವರು ಕೋವಿಡ್ ಇಂದ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ರೋಹಿತ್ ಅವರಿಗೆ ಇರುವ ಮತ್ತೊಂದು ಆಯ್ಕೆ ಮೊಹಮ್ಮದ್ ಸಿರಾಜ್. ಈ ಮೂವರಲ್ಲಿ ರೋಹಿತ್ ಅವರು ಯಾರನ್ನು ಆಯ್ಕೆ ಮಾಡುತ್ತಾರೆ ಎಂದು ನೋಡಬೇಕಿದೆ.