ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಟಿ 20 ವಿಶ್ವಕಪ್ ನಲ್ಲಿ ಹೊಸ ನಿಯಮ ಅಳವಡಿಸಿದ ಐಸಿಸಿ: ಈ ಬಾರಿ ಪಂದ್ಯಗಳು ಮತ್ತಷ್ಟು ರೋಚಕ. ಯಾವ್ಯಾವ ರೂಲ್ಸ್ ನಿಂದ ಯಾರಿಗೆ ಹಬ್ಬ ಗೊತ್ತೇ??

ಟಿ 20 ವಿಶ್ವಕಪ್ ನಲ್ಲಿ ಹೊಸ ನಿಯಮ ಅಳವಡಿಸಿದ ಐಸಿಸಿ: ಈ ಬಾರಿ ಪಂದ್ಯಗಳು ಮತ್ತಷ್ಟು ರೋಚಕ. ಯಾವ್ಯಾವ ರೂಲ್ಸ್ ನಿಂದ ಯಾರಿಗೆ ಹಬ್ಬ ಗೊತ್ತೇ??

715

ಟಿ20 ವರ್ಲ್ಡ್ ಕಪ್ ಗೆ ಐಸಿಸಿ ಈಗ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳು ಅಕ್ಟೋಬರ್ 1 ರಿಂದ ಜಾರಿಗೆ ಬಂದಿದ್ದು, ಹೊಸ ನಿಯಮಗಳು ಟಿ20 ಕ್ರಿಕೆಟ್ ಪಂದ್ಯಗಳನ್ನು ಮತ್ತಷ್ಟು ರೋಚಕಗೊಳಿಸಿದೆ. ಈ ಹೊಸ ನಿಯಮಗಳ ಪ್ರಕಾರ, ಪಂದ್ಯಗಳು ಯಾವ ಸಮಯದಲ್ಲಿ ಬೇಕಾದರೂ ಬದಲಾಗಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ನಿಯಮಗಳು ಜಾರಿಗೆ ಬಂದಿವೆ. ಆ ಐದು ನಿಯಮಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

Follow us on Google News

1.90 ಸೆಕೆಂಡ್ಸ್ ಟೈಮ್ :- ಟಿ20 ವಿಶ್ವಕಪ್ ನಲ್ಲಿ ಒಬ್ಬ ಬ್ಯಾಟ್ಸ್ಮನ್ ಔಟ್ ಆದಾಗ ಹೊಸ ಬ್ಯಾಟ್ಸ್ಮನ್ ಬರಲು ತಂಡಕ್ಕೆ 90 ಸೆಕೆಂಡ್ ಗಳ ಅವಕಾಶ ಮಾತ್ರ ಇರುತ್ತದೆ, 90 ಸೆಕೆಂಡ್ ಗಳ ಒಳಗೆ ಹೊಸ ಬ್ಯಾಟ್ಸ್ಮನ್ ಸಿದ್ಧವಾಗಿ ಕ್ರೀಸ್ ಗೆ ಬರಬೇಕು. ಕ್ರೀಸ್ ಗೆ 90 ಸೆಕೆಂಡ್ ಗಳ ಒಳಗೆ ಬರದೆ ಹೋದರೆ, ಸಿದ್ಧವಾಗದೆ ಇದ್ದರೆ ಔಟ್ ಎಂದು ಪರಿಗಣಿಸಲಾಗುತ್ತದೆ.
2.ಫೀಲ್ಡರ್ ಚಲನೆ ನಿಯಮ :- ಒಬ್ಬ ಬೌಲರ್ ರನ್ ಅಪ್ ಆಗುವಾಗ ಫೀಲ್ಡರ್ ಗಳು ಬೇಕು ಎಂದೇ ಸ್ಥಳದಿಂದ ಚಲಿಸಿದರೆ, ಫೀಲ್ಡಿಂಗ್ ಮಾಡುತ್ತಿರುವ ತಂಡಕ್ಕೆ 5 ರನ್ ಗಳ ದಂಡ ವಿಧಿಸಲಾಗುತ್ತದೆ. ಇದರ ಅರ್ಥ, ಬೌಲರ್ ರನ್ ಅಪ್ ಮಾಡುವಾಗ ಬೇಕೆಂದೇ ಫೀಲ್ಡರ್ ಚಲಿಸಿದರೆ, ಅಪೋಸಿಟ್ ತಂಡಕ್ಕೆ 5 ರನ್ ಗಳು ಹೆಚ್ಚುವರಿಯಾಗಿ ಸಿಗುತ್ತದೆ.

3.ಬ್ಯಾಟ್ಸ್ಮನ್ ಪಿಚ್ ನಲ್ಲಿರಬೇಕು :- ಇನ್ನುಮುಂದೆ ಬ್ಯಾಟ್ಸ್ಮನ್ ಗಳು ಪಿಚ್ ನಲ್ಲಿ ಇದ್ದುಕೊಂಡೇ ಎಸೆತಗಳನ್ನು ಭಾರಿಸಬೇಕು. ಒಂದು ವೇಳೆ ಪಿಚ್ ಇಂದ ಹೊರಬಂದು ಭಾರಿಸಿದರೆ, ಅದನ್ನು ರನ್ ಎಂದು ಪರಿಗಣಿಸಲಾಗುವುದಿಲ್ಲ, ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ. ಯಾವುದೇ ರನ್ ಗಳು ಬ್ಯಾಟ್ಸ್ಮನ್ ಗಳು ಸಿಗುವುದಿಲ್ಲ. ಈಗಿನಿಂದ ಪಿಚ್ ಇಂದ ಹೊರ ಹೋಗಿ ರನ್ಸ್ ಭಾರಿಸುವ ಹಾಗಿಲ್ಲ.
4.ಸ್ಲೋ ಓವರ್ ರೇಟ್ ನಿಯಮ :- ಫೀಲ್ಡಿಂಗ್ ಮತ್ತು ಬೌಲಿಂಗ್ ಮಾಡುತ್ತಿರುವ ತಂಡವು ನಿರ್ಧಿಷ್ಟ ಸಮಯದ ನಡುವೆ ಓವರ್ ಮುಗಿಸಬೇಕು. ಒಂದು ವೇಳೆ ತಡವಾಗಿ ನಿಗದಿ ಮಾಡಿರುವ ಸುಮಯದ ಒಳಗೆ ಓವರ್ ಮುಗಿಸದೆ ಹೋದರೆ ಫೀಲ್ಡಿಂಗ್ ಮಾಡುತ್ತಿರುವ ತಂಡದಿಂದ ಒಬ್ಬ ಫೀಲ್ಡರ್ ಅನ್ನು ಬೌಂಡರಿ ಲೈನ್ ಇಂದ ತೆಗೆದು ಆತನನ್ನು ಒಳಗಡೆ 30 ಯಾರ್ಡ್ ಸರ್ಕಲ್ ನಲ್ಲಿ ನಿಲ್ಲಿಸಬೇಕಾಗುತ್ತದೆ.

5.ಮಂಕಡ್ ರನ್ ಔಟ್ :- ಬೌಲರ್ ಬೌಲಿಂಗ್ ಮಾಡುವುದಕ್ಕಿಂತ ಮೊದಲೇ ನಾನ್ ಸ್ಟ್ರೈಕ್ ನಲ್ಲಿರುವ ಬ್ಯಾಟ್ಸ್ಮನ್ ಕ್ರೀಸ್ ಇಂದ ಹೊರಗಿದ್ದರೆ ಅವರನ್ನು ರನ್ ಔಟ್ ಮಾಡಬಹುದು. ಬೌಲರ್ ಚೆಂಡನ್ನು ಎಸೆಯುವ ಮೊದಲು ಬ್ಯಾಟ್ಸ್ಮನ್ ಲೈನ್ ಇಂದ ಹೊರ ಬರುವ ಹಾಗಿಲ್ಲ. ಹೀಗೆ ಮಾಡುವಾಗ ಬ್ಯಾಟ್ಸ್ಮನ್ ಗೆ ವಾರ್ನಿಂಗ್ ಕೊಡುವ ಅವಶ್ಯಕತೆ ಇರುವುದಿಲ್ಲ.
ಈ ನಿಗಮಗಳನ್ನು ಪಂದ್ಯ ನಡೆಯುವಾಗ ಯಾವಾಗಲಾದರೂ ಬಳಸಬಹುದು. ಬಹಳ ರೋಚಕವಾಗಿ ಮ್ಯಾಚ್ ನಡೆಯುತ್ತಿರುವಾಗ ಈ ನಿಯಮಗಳನ್ನು ಬಳಸಿದರೆ, ಪಂದ್ಯದ ಸ್ಥಿತಿ ಗತಿಯೇ ಬದಲಾಗಬಹುದು. ಹಾಗಾಗಿ ಇನ್ನುಮುಂದೆ ಟಿ20 ಮ್ಯಾಚ್ ಗಳು ಭಾರಿ ಪೈಪೋಟಿ ನೀಡಲಿವೆ.