ಭಾರತಕ್ಕೆ ಎರಡನೇ ಅಭ್ಯಾಸ ಪಂದ್ಯದಲ್ಲಿಯೇ ಬಿಗ್ ಶಾಕ್: ಎರಡನೇ ಪಂದ್ಯದಲ್ಲಿ ಭಾರತದ ಕಥೆ ಏನಾಗಿದೆ ಗೊತ್ತೇ??

ಭಾರತಕ್ಕೆ ಎರಡನೇ ಅಭ್ಯಾಸ ಪಂದ್ಯದಲ್ಲಿಯೇ ಬಿಗ್ ಶಾಕ್: ಎರಡನೇ ಪಂದ್ಯದಲ್ಲಿ ಭಾರತದ ಕಥೆ ಏನಾಗಿದೆ ಗೊತ್ತೇ??

ಟಿ20 ವಿಶ್ವಕಪ್ ನ ಅಭ್ಯಾಸ ಪಂದ್ಯವಾಗಿ ಇಂದು ವೆಸ್ಟರ್ನ್ ಅಸ್ಟ್ರೇಲಿಯಾ ಮತ್ತು ಭಾರತದ ನಡುವೆ ಎರಡನೇ ಅಭ್ಯಾಸ ಪಂದ್ಯ ನಡೆದಿದ್ದು, ಇದರಲ್ಲಿ ಭಾರತ ತಂಡ ಸೋಲು ಕಂಡಿದೆ. ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆರಿಸಿಕೊಂಡಿತು. ಆರಂಭದಲ್ಲೇ ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ಡಿ ಆರ್ಸಿ ಶಾರ್ಟ್ಸ್ ಒಳ್ಳೆಯ ಆರಂಭ ಮಾಡಿದರು, ಆದರೆ 2ನೇ ಓವರ್ ನಲ್ಲಿ ಇವರ ಜೊತೆಗಿದ್ದ ಬ್ಯಾಟ್ಸ್ಮನ್ ಅನ್ನು ಔಟ್ ಮಾಡುವ ಮೂಲಕ ಭುವನೇಶ್ವರ್ ಕುಮಾರ್ ಅವರು ಭಾರತಕ್ಕೆ ಮೊದಲ ವಿಕೆಟ್ ತಂದುಕೊಟ್ಟರು. ನಂತರ ಬಂದ ಬ್ಯಾಟ್ಸ್ಮನ್ ಹಾಬ್ಸನ್ ಅವರು ಶಾರ್ಟ್ ಅವರೊಡನೆ ಉತ್ತಮ ಪಾರ್ಟ್ನ್ಸರ್ಶಿಪ್ ಬೆಳೆಸಿ 110 ರನ್ ಭಾರಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡದ ರನ್ ಮೊತ್ತ ದೊಡ್ಡದಾಯಿತು. 64 ರನ್ ಗಳಿಸಿದ ಹಾಬ್ಸನ್ ಅವರನ್ನು ಹರ್ಷಲ್ ಪಟೇಲ್ ಔಟ್ ಮಾಡಿದರು.

52 ರನ್ ಗಳಿಸಿದ ಶಾರ್ಟ್ ಅವರು ರನ್ ಔಟ್ ಆದರು. ಇಲ್ಲಿಂದ ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ರನ್ ಗಳನ್ನು ನಿಯಂತ್ರಿಸಿರು ಟೀಮ್ ಇಂಡಿಯಾ. 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 168 ರನ್ ಗಳಿಸಿತು ವೆಸ್ಟರ್ನ್ ಆಸ್ಟೇಲಿಯಾ. ಇಲ್ಲಿ, ಅಶ್ವಿನ್ ಅವರು 3 ವಿಕೆಟ್ಸ್, ಹರ್ಷಲ್ ಪಟೇಲ್ ಅವರು 2 ವಿಕೆಟ್ಸ್, ಮತ್ತು ಅರ್ಷದೀಪ್ ಸಿಂಗ್ 1 ವಿಕೆಟ್ ಪಡೆದರು..ಈ ಮೊತ್ತವನ್ನು ಭಾರತ ತಂಡ ಚೇಸ್ ಮಾಡಲು ಶುರು ಮಾಡಿತು, ಓಪನರ್ಸ್ ಆಗಿ ಬಂದ ಕೆ.ಎಲ್.ರಾಹುಲ್ ಮತ್ತು ರಿಷಬ್ ಪಂತ್ ಮಂದಗತಿಯಲ್ಲಿ ರನ್ಸ್ ಗಳಿಸುತ್ತಿದ್ದರು, ಪವರ್ ಪ್ಲೇ ಓವರ್ ಗಳಲ್ಲಿ ಬಂದಿದ್ದು ಕೇವಲ 29 ರನ್ ಗಳು. ರಿಷಬ್ ಪಂತ್ ಅವರು 11 ಎಸೆತಗಳಲ್ಲಿ 9 ರನ್ ಗಳಿಸಿ ಔಟ್ ಆದರು, ಆದರೆ ಕೆ.ಎಲ್.ರಾಹುಲ್ ಅವರು ನಿಧಾನವಾಗಿ ರನ್ ಗಳಿಸುತ್ತಾ ಹೋದರು, 3ನೇ ಕ್ರಮಾಂಕಕ್ಕೆ ಬಂದ ದೀಪಕ್ ಹೂಡಾ ಅವರು 6 ರನ್ ಗಳಿಸಿ ಔಟ್ ಆದರು. ನಂತರ ಬಂದ ಹಾರ್ದಿಕ್ ಪಾಂಡ್ಯ ಅವರು, 19 ಎಸೆತಗಳಲ್ಲಿ 17 ರನ್ಸ್ ಗಳಿಸಿ ಔಟ್ ಆದರು.

ನಂತರ ಬಂದ ಅಕ್ಷರ್ ಪಟೇಲ್ ಅವರು 2 ರನ್ ಗಳಿಸಿ ಔಟ್ ಆದರು, ದಿನೇಶ್ ಕಾರ್ತಿಕ್ ಅವರು 10 ರನ್ ಗಳಿಸಿ ಔಟ್ ಆದರು. ಕೆ.ಎಲ್.ರಾಹುಲ್ ಅವರು ನಿಧಾನವಾಗಿ 43 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರ್ತಿ ಮಾಡಿಕೊಂಡು ತಂಡದ ಜೊತೆಗೆ ಇದ್ದರು, ಅಂತ್ಯದ ಮೂರು ಓವರ್ ಗಳಲ್ಲಿ ಭಾರತ ತಂಡಕ್ಕೆ 55 ರನ್ ಹಳ ಅವಶ್ಯಕತೆ ಇತ್ತು, ಆಗ ರಾಹುಲ್ ಅವರು ಒಂದರ ಹಿಂದೆ ಒಂದರಂತೆ ಎರಡು ಸಿಕ್ಸರ್ ಭಾರಿಸಿ ತಂಡಕ್ಕೆ ನೆರವಾದರು. ಕೊನೆಯ 12 ಎಸೆತಗಳಿದ್ದಾಗ ಭಾರತಕ್ಕೆ ಬೇಕಿದ್ದದ್ದು 35 ರನ್ ಗಳು, ಹೀಗಿದ್ದಾಗ, ರಾಹುಲ್ ಅವರು 74 ರನ್ ಗಳಿಸಿ ಔಟ್ ಆದರು. 20 ಓವರ್ ಗಳಲ್ಲಿ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 132 ರನ್ ಗಳನ್ನು ಗಳಿಸಿತು. ಕೆ.ಎಲ್.ರಾಹುಲ್ ಅವರು 9 ಬೌಂಡರಿ ಮತ್ತು 4 ಸಿಕ್ಸರ್ ಮೂಲಕ 74 ರನ್ ಗಳಿಸಿದರು.

ಈ ಮೂಲಕ ಭಾರತ ತಂಡವು ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾದ ಸೋಲು ಕಂಡಿತು. ಭಾರತದ ಪ್ಲೇಯಿಂಗ್ 11 ನಲ್ಲಿ ರೋಹಿತ್ ಶರ್ಮಾ , ಕೆಎಲ್ ರಾಹುಲ್ , ದೀಪಕ್ ಹೂಡಾ , ರಿಷಭ್ ಪಂತ್ , ಹಾರ್ದಿಕ್ ಪಾಂಡ್ಯ , ದಿನೇಶ್ ಕಾರ್ತಿಕ್ , ಅಕ್ಷರ್ ಪಟೇಲ್ , ಹರ್ಷಲ್ ಪಟೇಲ್ , ರವಿಚಂದ್ರನ್ ಅಶ್ವಿನ್ , ಭುವನೇಶ್ವರ್ ಕುಮಾರ್ , ಅರ್ಷದೀಪ್ ಸಿಂಗ್ ಇವರೆಲ್ಲರು ಇದ್ದರು ಸಹ ಆವರೇಜ್ ತಂಡ ಎನ್ನಿಸಿಕೊಂಡಿರುವ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವನ್ನು ಸೋಲಿಸಲು ಆಗಲಿಲ್ಲ, ಇದರಿಂದ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯೇ ಆಗಿದೆ. ಅಭ್ಯಾಸ ಪಂದ್ಯದಲ್ಲೇ ಹೀಗಾದರೆ ಮುಂದಿನ ಪಂದ್ಯಗಳ ಗತಿ ಏನು? ಎನ್ನುತ್ತಿದ್ದಾರೆ ಅಭಿಮಾನಿಗಳು.