ಭಾರತಕ್ಕೆ ಮೂವರೇ ಆಧಾರ, ಒತ್ತಡ ಜಾಸ್ತಿ ಆದರೆ ಮೂವರು ಪಿಲ್ಲರ್ ಗಳೇ ನಿಂತು ಆಡುತ್ತಾರೆ, ಭಾರತಕ್ಕೆ ಇರುವ ಏಕೈಕ ನಂಬಿಕೆ ಆ ಮೂವರು.
ಭಾರತಕ್ಕೆ ಮೂವರೇ ಆಧಾರ, ಒತ್ತಡ ಜಾಸ್ತಿ ಆದರೆ ಮೂವರು ಪಿಲ್ಲರ್ ಗಳೇ ನಿಂತು ಆಡುತ್ತಾರೆ, ಭಾರತಕ್ಕೆ ಇರುವ ಏಕೈಕ ನಂಬಿಕೆ ಆ ಮೂವರು.
ಟಿ20 ವಿಶ್ವಕಪ್ ಶುರುವಾಗಲು ಇನ್ನುಳಿದಿರುವುದು ಕೆಲವೇ ಕೆಲವು ದಿನಗಳು. 2007ರಲ್ಲಿ ಧೋನಿ ಅವರ ನೇತೃತ್ವದಲ್ಲಿ ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡವು ಈ ವರ್ಷ ವಿಶ್ವಕಪ್ ಗೆಲ್ಲಲೇಬೇಕು ಎಂದು ತಯಾರಿ ನಡೆಸಿ, ಆಸ್ಟ್ರೇಲಿಯಾ ಗೆ ಎರಡು ವಾರಗಳ ಮುಂಚೆಯೇ ತಲುಪಿದೆ. ಬಿರುಸಿನಿಂದ ಅಭ್ಯಾಸ ಮಾಡುತ್ತಿದ್ದು, ಈಗಾಗಲೇ ನಡೆದ ಒಂದು ಅಭ್ಯಾಸ ಪಂದ್ಯದಲ್ಲಿ, ಗೆದ್ದು ಮುಂದಿನ ಅಭ್ಯಾಸ ಪಂದ್ಯಕ್ಕೆ ತಂಡ ತಯಾರಿ ನಡೆಸುತ್ತಿದೆ. ತಮ್ಮ ತಂಡದ ಬ್ಯಾಟ್ಸ್ಮನ್ ಗಳಂತು ಅದ್ಭುತವಾದ ಫಾರ್ಮ್ ನಲ್ಲಿದ್ದಾರೆ.
ಆದರೆ ಭಾರತ ತಂಡಕ್ಕೆ ಡೆತ್ ಓವರ್ ನಲ್ಲಿ ಬೌಲಿಂಗ್ ಸಮಸ್ಯೆ ಅಂತು ಇದ್ದೆ ಇದೆ. ಇದೊಂದು ಸಮಸ್ಯೆ ಇಂದ ಭಾರತ ತಂಡ ಹೊರಬರುವುದು ಬಹಳ ಮುಖ್ಯವಾದ, ಕೆಲಸ, ಬುಮ್ರ ಅವರು ಮತ್ತು ರವೀಂದ್ರ ಜಡೇಜಾ ಅವರು ಇಂಜುರಿ ಕಾರಣಗಳಿಂದ ತಂಡದಿಂದ ಹೊರಬಂದಿದ್ದಾರೆ. ದೇಪಕ್ ಚಹರ್ ಅವರು ಸಹ ಆಂಕಲ್ ಟ್ವಿಸ್ಟ್ ಆಗಿ ವಿಶ್ವಕಪ್ ಮಿಸ್ ಮಾಡಿಕೊಳ್ಳುತ್ತಾರೆ. ಇವರ ಸ್ಥಾನಕ್ಕೆ ಬರುವ ಆಟಗಾರ ಯಾರು ಎನ್ನುವ ಪ್ರಶ್ನೆಗೆ ಬಿಸಿಸಿಐ ಇನ್ನು ಉತ್ತರ ಕೊಟ್ಟಿಲ್ಲ.
ಎಂ.ಎಸ್.ಧೋನಿ ಅವರು ಕ್ರಿಕೆಟ್ ಇಂದ ರಿಟೈರ್ಮೆಂಟ್ ತೆಗೆದುಕೊಂಡ ನಂತರ ಭಾರತ ತಂಡಕ್ಕೆ ಒಬ್ಬ ಸರಿಯಾದ ಫಿನಿಷರ್ ಇಲ್ಲ ಎನ್ನುವ ಕೊರತೆ ಕಾಡುತ್ತಿತ್ತು ಆದರೆ ಈಗ ಫಿನಿಷರ್ ಸ್ಥಾನಕ್ಕೆ ಬಹಳಷ್ಟು ಆಯ್ಕೆಗಳಿವೆ. ಡೆತ್ ಓವರ್ ಗಳಲ್ಲಿ ಬೌಲಿಂಗ್ ಸಮಸ್ಯೆ ಇದ್ದರು ಬ್ಯಾಟಿಂಗ್ ಸಮಸ್ಯೆ ಮಾತ್ರ ನಮ್ಮ ತಂಡದಲ್ಲಿ ಇಲ್ಲ. ಅದೊಂದು ಬಹಳ ಸಂತೋಷದ ವಿಚಾರ. ಡೆತ್ ಓವರ್ ಗಳಲ್ಲಿ ತಂಡವನ್ಮು ಗೆಲ್ಲಿಸುವುದಂಥ, ಅದ್ಭುತವಾದ ಫಿನಿಷರ್ ಗಳ ದಂಡೇ ತಮ್ಮ ತಂಡದಲ್ಲಿದೆ. ಆ ಮೂವರು ಆಟಗಾರರು ಇದ್ದರೆ ಭಾರತ ತಂಡ ಕಪ್ ಗೆಲ್ಲುವುದಂತೂ ಪಕ್ಕಾ ಆಗಿದೆ. ಹಾಗಿದ್ದರೆ ಭಾರತ ತಂಡವನ್ಮು ಗೆಲ್ಲಿಸುವ ಸಾಮಾರ್ಥ್ಯ ಇರುವ ಆ ಮೂವರು ಆಟಗಾರರು ಯಾರ್ಯಾರು ಎಂದು ಇಂದು ನಿಮಗೆ ತಿಳಿಸುತ್ತೇವೆ ನೋಡಿ..
ಹಾರ್ದಿಕ್ ಪಾಂಡ್ಯ :- ಇವರು ಪ್ರಸ್ತುತ ವಿಶ್ವಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಆಲ್ ರೌಂಡರ್. ಪಾಂಡ್ಯ ಅವರು ಕ್ರೀಸ್ ನಲ್ಲಿದ್ದಾರೆ ಎಂದರೆ ಭಾರತ ತಂಡ ಗೆಲ್ಲುವುದು ಪಕ್ಕಾ, ಟಾರ್ಗೆಟ್ ಎಷ್ಟೇ ಇರಲಿ, ಎಂಥಹ ಕಷ್ಟದ ಪರಿಸ್ಥಿತಿಯೇ ಇರಲಿ, ಎದುರಾಳಿ ತಂಡ ಯಾವುದೇ ಇರಲಿ, ಸಿಕ್ಸರ್, ಬೌಂಡರಿ ಭಾರಿಸಿ ತಂಡವನ್ನು ಗೆಲ್ಲಿಸುತ್ತಾರೆ ಹಾರ್ದಿಕ್ ಪಾಂಡ್ಯ. ಡೆತ್ ಓವರ್ ಗಳಲ್ಲಿ ಇವರ ಸ್ಟ್ರೈಕ್ ರೇಟ್ 192 ಇರುತ್ತದೆ. ಟಿ20 ಕ್ರಿಕೆಟ್ ನಲ್ಲಿ ಪಾಂಡ್ಯ ಅವರು ಡೆತ್ ಓವರ್ ನಲ್ಲಿ ಇದುವರೆಗೂ 300 ಎಸೆತಗಳಲ್ಲಿ ಬ್ಯಾಟ್ ಬೀಸಿದ್ದುಜ್ ಬರೊಬ್ಬರಿ 578 ರನ್ಸ್ ಭಾರಿಸಿದ್ದಾರೆ. ಇವುಗಳಲ್ಲಿ 40 ಸಿಕ್ಸರ್ ಗಳು ಮತ್ತು 43 ಬೌಂಡರಿ ಗಳು ಸೇರಿವೆ. ಹಲವಾರು ಕ್ರಿಕೆಟ್ ತಜ್ಞರು ಇವರ ಆಟದ ಶೈಲಿಯನ್ನು ಹಾಡಿ ಹೊಗಳುತ್ತಾರೆ.
ವಿರಾಟ್ ಕೋಹ್ಲಿ :- ನಮ್ಮ ಬ್ಯಾಟಿಂಗ್ ಲೈನಪ್ ನಲ್ಲಿ ವಿರಾಟ್ ಕೋಹ್ಲಿ ಅವರದ್ದು ಮೂರನೇ ಸ್ಥಾನ, ಆದರೆ ಕೊನೆಯವರೆಗೂ ವಿಕೆಟ್ ಕಳೆದುಕೊಳ್ಳದೇ, ಹಲವು ಪಂದ್ಯಗಳನ್ನು ಗೆಲ್ಲಿಸಿರುವ ಉದಾಹರಣೆಗಳು ಸಾಕಷ್ಟಿವೆ. ವಿರಾಟ್ ಕೋಹ್ಲಿ ಅವರನ್ನು ರನ್ ಮಷಿನ್ ಎಂದೇ ಎಲ್ಲರೂ ಕರೆಯುತ್ತಾರೆ, ತಂಡಕ್ಕಾಗಿ ಅದೆಷ್ಟೋ ಸಾರಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ ವಿರಾಟ್ ಕೋಹ್ಲಿ. ಡೆತ್ ಓವರ್ ಗಳಲ್ಲಿ ವಿರಾಟ್ ಅವರ ಬ್ಯಾಟಿಂಗ್ ಅದ್ಭುತ ಎಂದು ಹೇಳಬಹುದು. ಇದುವರೆಗೂ ಡೆತ್ ಓವರ್ ನಲ್ಲಿ 341 ಎಸೆತಗಳನ್ನು ವಿರಾಟ್ ಕೋಹ್ಲಿ ಅವರು 665 ರನ್ಸ್ ಭಾರಿಸಿದ್ದಾರೆ. ಡೆತ್ ಓವರ್ ನಲ್ಲಿ ಇವರ ಸ್ಟ್ರೈಕ್ ರೇಟ್ 195.01 ಇರುತ್ತದೆ. ಇದರಲ್ಲಿ 34 ಸಿಕ್ಸರ್ ಗಳು ಮತ್ತು 60 ಬೌಂಡರಿ ಸೇರಿದೆ.
ದಿನೇಶ್ ಕಾರ್ತಿಕ್ :- ಇವರು ಎಂಥಹ ಅದ್ಭುತವಾದ ಫಿನಿಷರ್ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ತಮ್ಮ ಫಿನಿಶರ್ ಸ್ಕಿಲ್ಸ್ ಇಂದಲೇ ಮೂರು ವರ್ಷಗಳ ನಂತರ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ದಿನೇಶ್ ಕಾರ್ತಿಕ್ ಅವರು ಕ್ರೀಸ್ ನಲ್ಲಿದ್ದಾರೆ ಎಂದರೆ, ಟೆನ್ಷನ್ ತೆಗೆದುಕೊಳ್ಳುವುದೇ ಬೇಡ ಎಂದು ಹೇಳುತ್ತಾರೆ. ಪಂದ್ಯದಲ್ಲಿ ಎಷ್ಟೇ ಒತ್ತಡ ಇದ್ದರು ಸಹ, ಯಾವುದನ್ನು ತೋರಿಸಿಕೊಳ್ಳದೆ ರನ್ಸ್ ಸಿಡಿಸುತ್ತಾರೆ ದಿನೇಶ್ ಕಾರ್ತಿಮ್. ಡೆತ್ ಓವರ್ ಗಳಲ್ಲಿ ಇದುವರೆಗೂ ದಿನೇಶ್ ಕಾರ್ತಿಕ್ ಅವರು 184 ಎಸೆತಗಳಿಗೆ ಬ್ಯಾಟ್ ಬೀಸಿದ್ದು, 342 ರನ್ಸ್ ಭಾರಿಸಿದ್ದಾರೆ. ಇದರಲ್ಲಿ 17 ಸಿಕ್ಸರ್, 37 ಬೌಂಡರಿ ಸೇರಿದೆ, ಡೆತ್ ಓವರ್ ನಲ್ಲಿ ಇವರ ಸ್ಟ್ರೈಕ್ ರೇಟ್ 185.6 ಆಗಿದೆ..