ಕರುನಾಡ ವಾಣಿ
ಇದು ನಿಮ್ಮ ಧ್ವನಿ

ತವರು ನೆಲದಲ್ಲಿ ವಿಶ್ವಕಪ್ ಗೆಲ್ಲುವ ಕನಸು ಹೊತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಚಿಂತೆ ತಂದಿಟ್ಟ ಮ್ಯಾಕ್ಸ್ವೆಲ್.

102

Get real time updates directly on you device, subscribe now.

ಟಿ20 ವಿಶ್ವಕಪ್ ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಅಕ್ಟೋಬರ್ 16ರಿಂದ ವಿಶ್ವಕಪ್ ಪಂದ್ಯಗಳು ಶುರುವಾಗಲಿದ್ದು, ಈಗಾಗಲೇ ಎಲ್ಲಾ ತಂಡಗಳು ತಯಾರಿ ನಡೆಸಿದೆ. ಪ್ರತಿಯೊಂದು ಗೆಲ್ಲಬೇಕು ಎನ್ನುವ ನಂಬಿಕೆಯಲ್ಲಿ ಕಣಕ್ಕೆ ಇಳಿಯುತ್ತಿದೆ. ವಿಶೇಷವಾಗಿ ಆಸ್ಟ್ರೇಲಿಯಾ ತಂಡವು ತವರುನೆಲದಲ್ಲಿ ವಿಶ್ವಕಪ್ ಗೆಲ್ಲಲು ಇದು ಸೂಕ್ತವಾದ ಸಮಯ ಎಂದು ವಿಶ್ವಕಪ್ ಗೆಲ್ಲಬೇಕು ಎಂದುಕೊಂಡಿದ್ದಾರೆ. ಆದರೆ ಅಸ್ಟ್ರೇಲಿಯಾ ತಂಡಕ್ಕೆ ಈಗ ಒಂದು ತಲೆನೋವು ಎದುರಾಗಿದೆ.

ಆಸ್ಟ್ರೇಲಿಯಾ ತಂಡದ ಪ್ರಮುಖ ಆಲ್ ರೌಂಡರ್, ಪ್ಲೇಯಿಂಗ್ 11 ನ ಖಾಯಂ ಸದಸ್ಯರಾಗಿರುವ ಗ್ಲೆನ್ ಮ್ಯಾಕ್ಸ್ವೆಲ್ ಅವರು ಈಗ ಫಾರ್ಮ್ ಕಳೆದುಕೊಂಡಿದ್ದು, ಇದು ಆಸ್ಟ್ರೇಲಿಯಾ ತಂಡದ ಟೆನ್ಷನ್ ಹೆಚ್ಚಿದೆ. ಪ್ರಸ್ತುತ ಆಸ್ಟ್ರೇಲಿಯಾ ವರ್ಸಸ್ ಇಂಗ್ಲೆಂಡ್ ಸರಣಿ ಪಂದ್ಯಗಳು ನಡೆಯುತ್ತಿದ್ದು, ಬೇರೆ ಆಟಗಾರರು ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಆದರೆ ಮ್ಯಾಕ್ಸ್ವೆಲ್ ಅವರು ಉತ್ತಮ ಪ್ರದರ್ಶನ ನೀಡಿಲ್ಲ, ಕಳೆದ ಬಾರಿ ಭಾರತದ ವಿರುದ್ಧದ ಸರಣಿಯಲ್ಲಿ ಸಹ ಮೂರು ಪಂದ್ಯಗಳಲ್ಲಿ 1, 0, 6 ರನ್ ಗಳಿಸಿ ಔಟ್ ಆಗಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 0, 1 , 8 ರನ್ ಗಳಿಸಿ ಔಟ್ ಆಗಿದ್ದಾರೆ. ಕಳೆದ 6 ಪಂದ್ಯಗಳನ್ನು ನೋಡಿದರೆ, 2 ಬಾರಿ ಡಗೌಟ್ ಆಗಿದ್ದಾರೆ ಮ್ಯಾಕ್ಸ್ವೆಲ್.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 2-0 ಹಿನ್ನೆಡೆಯಲ್ಲಿದೆ. ಇನ್ನು ಒಂದು ಪಂದ್ಯವಷ್ಟೇ ಉಳಿದಿದ್ದು, ಆ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಅವರು ಫ್ಯಾರ್ಮ್ ಗೆ ಮರಳಿ ಬರುವುದು ಬಹಳ ಮುಖ್ಯವಾಗಿದೆ.. ಪ್ರಸ್ತುಯ ಮ್ಯಾಕ್ಸ್ವೆಲ್ ಅವರು ಡಬಲ್ ಡಿಜಿತ್ ರನ್ ಸ್ಕೋರ್ ಮಾಡಲು ಸಹ ಈಗ ಕಷ್ಟಪಡುತ್ತಿದ್ದಾರೆ. ಹಾಗಾಗಿ ಇವರನ್ನು ಆಸ್ಟ್ರೇಲಿಯಾ ಸ್ಕ್ವಾಡ್ ನಲ್ಲಿ ಇರಿಸಿಕೊಳ್ಳಬೇಕಾ ಅಥವಾ ಎನ್ನುವ ಗೊಂದಲ ಸಹ ಇದೆ. ಅಕ್ಟೋಬರ್ 22ರಂದು ಆಸ್ಟ್ರೇಲಿಯಾ ತಂಡದ ಮೊದಲ ಟಿ20 ವಿಶ್ವಕಪ್ ನಡೆಯಲಿದ್ದು, ಅಷ್ಟರ ಒಳಗೆ ಆಸ್ಟ್ರೇಲಿಯಾ ತಂಡ ವಿಶೇಷವಾಗಿ ಮ್ಯಾಕ್ಸ್ವೆಲ್ ಅವರು ತಮ್ಮ ಲಯ ಕಂಡುಕೊಳ್ಳುವುದರಿಂದ ತಂಡಕ್ಕೆ ಬಹಳ ಸಹಾಯ ಆಗುತ್ತದೆ.

Get real time updates directly on you device, subscribe now.