ವಿಶ್ವಕಪ್ ಗೆ ಅಭ್ಯಾಸ ಪಂದ್ಯಗಳನ್ನು ಆಡುತ್ತಿರುವ ಭಾರತಕ್ಕೆ ಮತ್ತೊಂದು ಶಾಕ್: ಪ್ರಮುಖ ಆಟಗಾರ ಔಟ್. ಟೂರ್ನಿಗೂ ಮುನ್ನವೇ ಹೊರಬಿದ್ದ ಆಟಗಾರ.

ವಿಶ್ವಕಪ್ ಗೆ ಅಭ್ಯಾಸ ಪಂದ್ಯಗಳನ್ನು ಆಡುತ್ತಿರುವ ಭಾರತಕ್ಕೆ ಮತ್ತೊಂದು ಶಾಕ್: ಪ್ರಮುಖ ಆಟಗಾರ ಔಟ್. ಟೂರ್ನಿಗೂ ಮುನ್ನವೇ ಹೊರಬಿದ್ದ ಆಟಗಾರ.

ಭಾರತ ಕ್ರಿಕೆಟ್ ತಂಡಕ್ಕೆ ಒಂದಾದ ಮೇಲೊಂದು ಸಮಸ್ಯೆಗಳು ಬರುತ್ತಲೇ ಇದೆ. ಟಿ20 ವಿಶ್ವಕಪ್ ಗಾಗಿ ಭಾರತ ತಂಡ ಆಸ್ಟ್ರೇಲಿಯಾ ತಲುಪಿದೆ. ಆಸ್ಟ್ರೇಲಿಯಾದಲ್ಲಿ ಅಭ್ಯಾಸ ಪಂದ್ಯಗಳು ನಡೆಯುತ್ತಿದ್ದು, ಈಗಾಗಲೇ ಒಂದು ಪಂದ್ಯವನ್ನಾಡಿ ಗೆದ್ದಿದೆ ಭಾರತ ತಂಡ. ಪ್ರಸ್ತುತ ಭಾರತ ತಂಡದ ಪ್ರಮುಖ ಆಟಗಾಗರು ಆರೋಗ್ಯದ ಕಾರಣದಿಂದ ವಿಶ್ವಕಪ್ ಇಂದ ಹೊರಗಿದ್ದಾರೆ. ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನ ಕಾರಣದಿಂದ ದಕ್ಷಿಣ ಆಫ್ರಿಕಾ ಸರಣಿ ಇಂದ ಹೊರಗುಳಿದರು, 4 ರಿಂದ 6 ತಿಂಗಳ ರೆಸ್ಟ್ ಅವಶ್ಯಕತೆ ಇರುವ ಕಾರಣ, ಬುಮ್ರ ಅವರು ವಿಶ್ವಕಪ್ ಇಂದ ಹೊರಗುಳಿದಿದ್ದಾರೆ.

ಇನ್ನು ರವೀಂದ್ರ ಜಡೇಜಾ ಅವರು ಸಹ ಇಂಜುರಿ ಕಾರಣದಿಂದ ವಿಶ್ವಕಪ್ ಇಂದ ಹೊರಗಿದ್ದಾರೆ. ಹೀಗಿರುವಾಗ ಭಾರತದ ಮತ್ತೊಬ್ಬ ಆಟಗಾರ, ಇಂಡಿಯಾ ಸ್ಕ್ವಾಡ್ ಮತ್ತು ಸ್ಟ್ಯಾಂಡ್ ಬೈ ಆಟಗಾರನಾಗಿದ್ದ ದೀಪಕ್ ಚಹರ್ ಅವರನ್ನು ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಚಹರ್ ಅವರು ದಕ್ಷಿಣ ಭಾರತದ ವಿರುದ್ಧ ಆಡಿದ ಪಂದ್ಯದಲ್ಲಿ ದುಬಾರಿಯಾಗಿದ್ದರು. ಬಳಿಕ ಇವರಿಗೆ ಬೆನ್ನು ನೋವು ಕಾಣಿಸಿಕೊಂಡಿತು, ಜೊತೆಗೆ ಆಂಕಲ್ ಸಹ ಟ್ವಿಸ್ಟ್ ಆದ ಕಾರಣ ಚಹರ್ ಅವರು ಬೆಂಗಳೂರಿನ ಎನ್.ಸಿ.ಎ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದರು. ಆದರೆ ಇವರಿಗೆ 4 ವಾರಗಳ ಕಾಲ ವಿಶ್ರಾಂತಿ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಕಾರಣದಿಂದ ದೀಪಕ್ ಚಹರ್ ಅವರನ್ನು ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ. ಇವರ ಬದಲಾಗಿ ತಂಡದ ಇನ್ನೊಬ್ಬ ಖ್ಯಾತ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅವರಿಗೆ ಅವಕಾಶ ನೀಡಬಹುದು ಎನ್ನಲಾಗುತ್ತಿದೆ. ಅಕ್ಟೋಬರ್ 16ರಂದು ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಆಸ್ಟ್ರೇಲಿಯಾಗೆ ಹಾರಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಮೊಹಮ್ಮದ್ ಶಮಿ ಅವರ ಆರೋಗ್ಯ ಹೇಗಿದೆ ಎನ್ನುವ ಬಗ್ಗೆ ಇನ್ನೂ ಪೂರ್ತಿ ಮಾಹಿತಿ ಸಿಕ್ಕಿಲ್ಲ. ಆದರೆ ಇವರು ಆಸ್ಟ್ರೇಲಿಯಾಗೆ ಹೋಗುತ್ತಾರೆ ಎನ್ನಲಾಗಿದ್ದು, ಈ ಮೂವರಲ್ಲಿ ಪ್ಲೇಯಿಂಗ್ 11 ಗೆ ಆಯ್ಕೆಯಾಗುವ ಆಟಗಾರ ಯಾರು ಎಂದು ತಿಳಿಯಲು ಇನ್ನು ಕೆಲವು ದಿನಗಳು ಕಾಯಬೇಕಿದೆ.