ಭಾರತ ಕ್ರಿಕೆಟ್ ತಂಡಕ್ಕೆ ಒಬ್ಬ ABD ಸಿಕ್ಕಿದ್ದಾನೆ ಎಂದ ಮಾಜಿ ಆರ್ಸಿಬಿ ವೇಗಿ ಡೇಲ್ ಸ್ಟೆನ್: ಯಾರಂತೆ ಗೊತ್ತೇ ಆ ಯುವ ಆಟಗಾರ??

ಭಾರತ ಕ್ರಿಕೆಟ್ ತಂಡಕ್ಕೆ ಒಬ್ಬ ABD ಸಿಕ್ಕಿದ್ದಾನೆ ಎಂದ ಮಾಜಿ ಆರ್ಸಿಬಿ ವೇಗಿ ಡೇಲ್ ಸ್ಟೆನ್: ಯಾರಂತೆ ಗೊತ್ತೇ ಆ ಯುವ ಆಟಗಾರ??

ಪ್ರಸ್ತುತ ಭಾರತ ತಂಡದಲ್ಲಿರುವ ಅತ್ಯಂತ ಪ್ರಬಲವಾದ ಬ್ಯಾಟ್ಸ್ಮನ್ ಎಂದರೆ ಸೂರ್ಯಕುಮಾರ್ ಯಾದವ್ ಅವರು ಎಂದು ಹೇಳಬಹುದು. ಕಳೆದ ವರ್ಷ 2021ರಲ್ಲಿ ಭಾರತ ತಂಡದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಎಂಟ್ರಿ ಕೊಟ್ಟ ಸೂರ್ಯಕುಮಾರ್ ಯಾದವ್ ಅವರು, ಅಭಯವಾಗಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ಭದ್ರವಾದ ಸ್ಥಾನ ಸೃಷ್ಟಿಸಿಕೊಂಡಿದ್ದಾರೆ. ಈ ವರ್ಷ ಕೂಡ ಸೂರ್ಯಕುಮಾರ್ ಯಾದವ್ ಅವರು ಅನೇಕ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಈಗಷ್ಟೇ ಮುಗಿದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅವರು 25 ಎಸೆತಗಳಲ್ಲಿ 46 ರನ್ ಭಾರಿಸಿದ್ದರು, 36 ಎಸೆತಗಳಲ್ಲಿ ಅಜೇಯ 69 ರನ್ ಭಾರಿಸಿದ್ದರು..

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ, 22 ಎಸೆತಗಳಲ್ಲಿ 61 ರನ್, ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ 52 ರನ್ ಸಿಡಿಸಿದ್ದರು. 360 ಡಿಗ್ರಿ ಅದ್ಭುತವಾಗಿ ಬ್ಯಾಟ್ ಬೀಸುವ ಮೂಲಕ, ಆರಂಭಿಕ ಆಟಗಾರರು ಉತ್ತಮ ಪ್ರದರ್ಶನ ನೀಡದೆ ಇದ್ದರು ಮಧ್ಯಮ ಕ್ರಮಾಂಕದಲ್ಲಿ ಬರುವ ಸೂರ್ಯಕುಮಾರ್ ಯಾದವ್ ಅವರು ಪಂದ್ಯ ಗೆಲ್ಲುವ ಹಾಗೆ ಹಲವು ಸಾರಿ ಪ್ರದರ್ಶನ ನೀಡಿದ್ದಾರೆ. ಇದೀಗ ಇವರ ಬಗ್ಗೆ ಆರ್ಸಿಬಿ ತಂಡದ ಮಾಜಿ ಆಟಗಾರ ಡೇಲ್ ಸ್ಟೆನ್ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಸೂರ್ಯಕುಮಾರ್ ಅವರನ್ನು ಎಬಿ ಡಿಬಿಯಲಿಯರ್ಸ್ ಅವರಿಗೆ ಹೋಲಿಕೆ ಮಾಡಿದ್ದಾರೆ. “ವಿಶ್ವಕಪ್ ನಲ್ಲಿ ಸೂರ್ಯಕುಮಾರ್ ಯಾದವ್ ಅವರು ಆಲ್ ರೌಂಡರ್ ಆಗಿರುತ್ತಾರೆ. ಆಸ್ಟ್ರೇಲಿಯಾ ಪಿಚ್ ಹೇಗೆ ಇದರು, ಬೌಲರ್ ಗಳು ಲಾಂಗ್ ಹಾಕಿದರು, ಶಾರ್ಟ್ ಹಾಕಿದರು, ಲೆಗ್ ಸೈಡ್ ಹಾಕಿದರು ಸಹ ಎಲ್ಲಾ ಎಸೆತಕ್ಕೂ ಬ್ಯಾಟ್ ಬೀಸಲಿ ಸಿದ್ಧವಾಗಿರುತ್ತಾರೆ..”

“360 ಡಿಗ್ರಿ ಬ್ಯಾಟ್ ಬೀಸುವ ಸಾಮರ್ಥ್ಯ ಸೂರ್ಯಕುಮಾರ್ ಅವರಿಗೆ ಇದೆ, ಅಂತಹ ಶಾಟ್ಸ್ ಮೂಲಕ ಎಬಿಡಿ ಅವರು ನೆನಪಾಗುವ ಹಾಗೆ ಮಾಡುತ್ತಾರೆ. ಭಾರತ ತಂಡಕ್ಕೆ ಎಬಿಡಿ ಆಗುತ್ತಾರೆ ಸೂರ್ಯ, ಪ್ರಸ್ತುತ ಸೂರ್ಯ ಅವರು ಅದ್ಭುತವಾದ ಫಾರ್ಮ್ ನಲ್ಲಿದ್ದು, ಟಿ20 ವಿಶ್ವಕಪ್ ನಲ್ಲಿ ನೋಡಬಹುದಾದ ಆಟಗಾರರಲ್ಲಿ ಸೂರ್ಯಕುಮಾರ್ ಯಾದವ್ ಸಹ ಒಬ್ಬರು.. ಚೆಂಡಿನ ಸ್ಪೀಡ್ ಬಳಸಿಕೊಳ್ಳುವ ಆಟಗಾರರಲ್ಲಿ ಸೂರ್ಯಕುಮಾರ್ ಯಾದವ್ ಸಹ ಒಬ್ಬರು, ಯಾವುದೇ ರೀತಿ ಚೆಂಡನ್ನು ಹಾಕಿದರು ಬ್ಯಾಟ್ ಬೀಸುತ್ತಾರೆ. ಮೆಲ್ಬೋರ್ನ್ ಮತ್ತು ಎಲ್ಲಾ ಗ್ರೌಂಡ್ ಗಳಲ್ಲೂ ಬೇಗ ಇರುತ್ತದೆ.. ಅದನ್ನು ಅವರು ಬಳಸಿಕೊಳ್ಳಬಹುದು. ಫ್ರಂಟ್ ಫುಟ್ ಮಾತ್ರವಲ್ಲದೆ, ಬ್ಯಾಕ್ ಫುಟ್ ನಲ್ಲಿ ಸಹ ಉತ್ತಮವಾದ ಪ್ರದರ್ಶನ ನೀಡುತ್ತಾರೆ…” ಎಂದಿದ್ದಾರೆ ಡೇಲ್ ಸ್ಟೆನ್.