ಭಾರತ ವಿಶ್ವಕಪ್ ಗೆ ಜೋಷ್ ಅಲ್ಲಿ ಹೋಗಿರಬಹುದು, ಆದರೆ ಇನ್ನು ತೀರಿಲ್ಲ ಸಮಸ್ಯೆ: ಕಾಡುತ್ತಿರುವ 5 ಸಮಸ್ಯೆಗಳು ಯಾವ್ಯಾವು ಗೊತ್ತೇ??

ಭಾರತ ವಿಶ್ವಕಪ್ ಗೆ ಜೋಷ್ ಅಲ್ಲಿ ಹೋಗಿರಬಹುದು, ಆದರೆ ಇನ್ನು ತೀರಿಲ್ಲ ಸಮಸ್ಯೆ: ಕಾಡುತ್ತಿರುವ 5 ಸಮಸ್ಯೆಗಳು ಯಾವ್ಯಾವು ಗೊತ್ತೇ??

ಸೌತ್ ಆಫ್ರಿಕಾ ವಿರುದ್ಧದ 3 ಟಿ20 ಪಂದ್ಯಗಳ ಟೂರ್ನಿಯನ್ನು ಮುಗಿಸಿರುವ ಭಾರತ ತಂಡ ಈಗ ಆಸ್ಟ್ರೇಲಿಯಾಗೆ ಹಾರಿದ್ದು ವರ್ಲ್ಡ್ ಕಪ್ ಗೆ ತಯಾರಿ ನಡೆಸುತ್ತಿದೆ. ಭಾರತ ತಂಡದ ಬ್ಯಾಟಿಂಗ್ ಲೈನಪ್ ಚೆನ್ನಾಗಿದೆ, ಬೌಲಿಂಗ್ ಲೈನಪ್ ಸಹ ಚೆನ್ನಾಗಿದ್ದರು ಡೆತ್ ಓವರ್ ಗಳಲ್ಲಿರುವ ಬೌಲಿಂಗ್ ಸಮಸ್ಯೆ ಭಾರತ ತಂಡವನ್ನು ಬೆಂಬಿಡದೆ ಕಾಡುತ್ತಿದೆ. ಇನ್ನು ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನ ಸಮಸ್ಯೆ ಇಂದ ವಿಶ್ವಕಪ್ ಗೆ ಅಲಭ್ಯರಾಗಿದ್ದು, ಅವರ ಬದಲಿ ಆಟಗಾರ ಯಾರು ಎಂದು ಇನ್ನು ನಿಶ್ಚಯವಾಗಿಲ್ಲ. ಇಷ್ಟೇ ಅಲ್ಲದೆ, ವಿಶ್ವಕಪ್ ಹತ್ತಿರ ಇರುವಾಗ ಭಾರತ ತಂಡಕ್ಕೆ ಇನ್ನು ಕೆಲವು ಸಮಸ್ಯೆಗಳಿವೆ. ಆ ಸಮಸ್ಯೆಗಳು ಯಾವುವು ? ಅವುಗಳಿಂದ ಭಾರತ ತಂಡಕ್ಕೆ ಆಗುವ ತೊಂದರೆಗಳೇನು? ತಿಳಿಸುತ್ತೇವೆ ನೋಡಿ..

ಜಸ್ಪ್ರೀತ್ ಬುಮ್ರ ಅವರ ಬದಲಿ ಆಟಗಾರ :- ಬುಮ್ರ ಅವರು ಬೆನ್ನು ನೋವಿನ ಕಾರಣ ಭಾರತ ತಂಡದಿಂದ ಹೊರಗಿದ್ದಾರೆ. ಇವರ ಬದಲಿಗೆ ಮೊಹಮ್ಮದ್ ಶಮಿ ಅಥವಾ ದೀಪಕ್ ಚಹರ್ ಬರಬಹುದು ಎನ್ನಲಾಗಿತ್ತು, ಆದರೆ ಈ ಇಬ್ಬರು ಆಟಗಾರರು ಈ ವರ್ಷ ಭಾರತದ ಪರವಾಗಿ ಹೆಚ್ಚು ಆಡಿಲ್ಲ, ಚಹರ್ ಅವರು ಸೌತ್ ಆಫ್ರಿಕಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು ಸಹ, ಮೂರನೇ ಪಂದ್ಯಗಳಲ್ಲಿ ನಿರೀಕ್ಷೆಯ ಪ್ರದರ್ಶನ ನೀಡಲಿಲ್ಲ. ಇವರಿಗೆ ಕಾಲು ನೋವು ಇರುವ ಕಾರಣ, ಸೌತ್ ಆಫ್ರಿಕಾ ಓಡಿಐ ಪಂದ್ಯದಿಂದಲೂ ದೂರ ಉಳಿದಿದ್ದಾರೆ. ಶಮಿ ಅವರು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಕರೊನಾ ಕಾರಣದಿಂದ ಆಡಲು ಆಗಲಿಲ್ಲ. ಹಾಗಾಗಿ ಇವರಿಬ್ಬರಲ್ಲಿ ಯಾರನ್ನು ಬಿಸಿಸಿಐ ಸೆಲೆಕ್ಟ್ ಮಾಡುತ್ತದೆ ಎಂದು ಕಾದು ನೋಡಬೇಕಿದೆ.

ಡೆತ್ ಒವೇ ಸಮಸ್ಯೆ :- ಭಾರತ ತಂಡ ಈಗ ಡೆತ್ ಓವರ್ ಗಳಲ್ಲಿ ಕಳಪೆ ಬೌಲಿಂಗ್ ಪ್ರದರ್ಶನದ ಸಮಸ್ಯೆ ಎದುರಿಸುತ್ತಿದೆ. ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್ ಮೂವರು ಪ್ರಮುಖ ಬೌಲರ್ ಗಳು ಸಹ ಡೆತ್ ಓವರ್ ಗಳಲ್ಲಿ ಹೆಚ್ಚು ರನ್ ಗಳನ್ನೇ ಬಿಟ್ಟುಕೊಡುತ್ತಿರುವುದು ಏಷ್ಯಾಕಪ್, ಸೌತ್ ಆಫ್ರಿಕಾ ಪಂದ್ಯಗಳು ಮತ್ತು ಆಸ್ಟ್ರೇಲಿಯಾ ಪಂದ್ಯಗಳಲ್ಲಿ ಮುಂದುವರೆಯಿತು. ಹಾಗಾಗಿ ಈ ಸಮಸ್ಯೆಯನ್ನು ಹೇಗೆ ಬಗೆಹರಿಸುವುದು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಹಾರ್ದಿಕ್ ಪಾಂಡ್ಯ ಅವರ ಬದಲಿ ಆಟಗಾರ :- ಟಿ20 ಮಾದರಿಯ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಅವರು ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ಬ್ಯಾಟಿಂಗ್ ನಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ನೀಡಿದ್ದಾರೆ. ಇನ್ನು ಬೌಲಿಂಗ್ ನಲ್ಲಿ ಸಹ ಹಲವು ಬಾರಿ ವಿಕೆಟ್ಸ್ ಪಡೆದು ಅತ್ಯುತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಒಂದು ವೇಳೆ ಪಾಂಡ್ಯ ಅವರಿಗೆ ಗಾಯದ ಸಮಸ್ಯೆ ಎದುರಾಗಿ ಅವರು ತಂಡದಿಂದ ಹೊರಗುಳಿಯುವ ಹಾಗೆ ಆದರೆ, ಅವರ ಬದಲಿ ಆಟಗಾರ ಮತ್ತೊಬ್ಬರಿಲ್ಲ. ಪಾಂಡ್ಯ ಅವರಿಗೆ ಸಮಸ್ಯೆ ಉಂಟಾದರೆ, ತಂಡದಲ್ಲಿ ಅಸಮತೋಲನ ಆಗುತ್ತದೆ. ಹಾಗಾಗಿ ಇದು ತಂಡಕ್ಕೆ ಸಮಸ್ಯೆ ತಂದರು ತರಬಹುದು.

ರಿಷಬ್ ಪಂತ್ ಫಾರ್ಮ್ :- ರಿಷನ್ ಪಂತ್ ಅವರು ಇತ್ತೀಚಿನ ದಿನಗಳಲ್ಲಿ ಟಿ20 ರೀತಿಯ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡುತ್ತಿಲ್ಲ. ಇವರು ಫಾರ್ಮ್ ಗೆ ಬಂದರೆ, ತಂಡಕ್ಕೆ ಸುಲಭವಾಗುತ್ತದೆ. ಸೌತ್ ಆಫ್ರಿಕಾ ವಿರುದ್ಧದ 3ನೇ ಪಂದ್ಯದಲ್ಲಿ ಓಪನರ್ ಆಗಿ ಬಂದ ಪಂತ್ ಅವರು ತಕ್ಕ ಮಟ್ಟಿಗೆ ಉತ್ತಮ ಪ್ರದರ್ಶನ ನೀಡಿದರು, ಆದರೆ ಮಧ್ಯಮ ಕ್ರಮಾಂಕದಲ್ಲಿ ಪಂತ್ ಅವರು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹಾಗಾಗಿ ಪಂತ್ ಅವರ ಫಾರ್ಮ್ ಸಹ ತಂಡಕ್ಕೆ ಒಂದು ಸಮಸ್ಯೆ ಆಗಿದೆ.

ಯುಜವೇಂದ್ರ ಚಾಹಲ್ ಅವರ ಪ್ರದರ್ಶನ :- ಯುಜವೆಂದ್ರ ಚಾಹಲ್ ಅವರು ಈಗ ಅಂದುಕೊಂಡ ಹಾಗೆ ಪ್ರದರ್ಶನ ನೀಡುತ್ತಿಲ್ಲ. ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಚಾಹಲ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಸಿಗಲಿಲ್ಲ. ಸೌತ್ ಆಫ್ರಿಕಾ ಟೀಮ್ ನಲ್ಲಿ ಎಡಗೈ ಬ್ಯಾಟ್ಸ್ಮನ್ ಗಳು ಹೆಚ್ಚಾಗಿ ಇದ್ದಿದ್ದರಿಂದ, ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ಸಿಕ್ಕಿತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಚಾಹಲ್ ಅವರು ವಿಕೆಟ್ಸ್ ಪಡೆಯದೆ, ಹೆಚ್ಚು ರನ್ಸ್ ಬಿಟ್ಟುಕೊಟ್ಟಿದ್ದರು. ಹಾಗಾಗಿ ಆಸ್ಟ್ರೇಲಿಯಾದಲ್ಲಿ ಯುಜವೇಂದ್ರ ಚಾಹಲ್ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎನ್ನುವುದು ಸಹ ಚಿಂತೆಯಾಗಿದೆ.