ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಯಾಕೋ ಟೀಮ್ ಇಂಡಿಯಾ ಅದೃಷ್ಟಾನೇ ಚೆನ್ನಾಗಿಲ್ಲ. ಬುಮ್ರಾ ಸ್ಥಾನಕ್ಕೆ ಬಾರಿ ಪೈಪೋಟಿ ನೀಡಿದ್ದ ಸ್ಟಾರ್ ಬೌಲರ್ ಹೊರಕ್ಕೆ. ಮತ್ತದೇ ಇಂಜುರಿ ಕಾಟ. ಹೊರಹೋಗಿದ್ದು ಯಾರು ಗೊತ್ತೇ??

474

Get real time updates directly on you device, subscribe now.

ಭಾರತ ಕ್ರಿಕೆಟ್ ತಂಡದ ಅದೃಷ್ಟವೆ ಚೆನ್ನಾಗಿಲ್ಲ ಎಂದು ಅನ್ನಿಸುತ್ತಿದೆ, ಏಕೆಂದರೆ ಮೊದಲಿಗೆ ರವೀಂದ್ರ ಜಡೇಜಾ ಅವರು ಕಾಲಿಗೆ ಇಂಜುರಿ ಮಾಡಿಕೊಂಡು, ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದರು, ಹೀಗಾದ ಬಳಿಕ ಅವರು ಉಳಿದ ಸರಣಿಗಳಲ್ಲಿ ಮತ್ತು ವಿಶ್ವಕಪ್ ಇಂದಲೂ ಆಡಲು ಸಾಧ್ಯವಾಗದೆ ಹೊರಗುಲಿದ್ದಾರೆ. ಅದಾದ ಬಳಿಕ ಮೊಹಮ್ಮದ್ ಶಮಿ ಅವರು ಕೋವಿಡ್ ಸೋಂಕಿಗೆ ತುತ್ತಾಗಿ, ಅವರು ಕೂಡ ಆಸ್ಟ್ರೇಲಿಯಾ ವಿರುದ್ಧದ ಸರಣಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯನ್ನು ಮಿಸ್ ಮಾಡಿಕೊಂಡರು. ಇನ್ನು ಜಸ್ಪ್ರೀತ್ ಬುಮ್ರ ಅವರ ಕಥೆ ಸಹ ಹೀಗೆ ಆಗಿದೆ. ಬೆನ್ನು ನೋವಿನ ಸಮಸ್ಯೆ ಇಂದ ಬಳಲುತ್ತಿದ್ದ ಬುಮ್ರ ಅವರಿಗೆ 6 ತಿಂಗಳು ಬೆಡ್ ರೆಸ್ಟ್ ಬೇಕಿರುವ ಕಾರಣ ಅವರು ಕೂಡ ವಿಶ್ವಕಪ್ ಇಂದ ಹೊರಗುಳಿದಿದ್ದಾರೆ.

ಇಂತಹ ಸಮಯದಲ್ಲಿ ಭಾರತ ತಂಡದ ಭರವಸೆಯ ಆಟಗಾರ ತಂಡದಿಂದ ಹೊರಗುಳಿಯುವ ಲಕ್ಷಣ ಕಾಣುತ್ತಿದೆ. ಆ ಆಟಗಾರ ಮತ್ಯಾರು ಅಲ್ಲ ದೀಪಕ್ ಚಹರ್ ಅವರು, ಇವರಿಗೆ ಕಾಲು ನೋವಿನ ಸಮಸ್ಯೆ ಶುರುವಾಗಿರುವ ಕಾರಣ, ದೀಪಕ್ ಚಹರ್ ಅವರು ಸೌತ್ ಆಫ್ರಿಕಾ ವಿರುದ್ಧದ ಮೊದಲ ಓಡಿಐ ಪಂದ್ಯದಲ್ಲಿ ಭಾಗವಹಿಸಿಲ್ಲ. ಬಿಸಿಸಿಐ ಕಡೆಯಿಂದ ದೀಪಕ್ ಚಹರ್ ಅವರಿಗೆ ಗಾಯ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಗಾಯವನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎನ್ನಲಾಗಿದೆ, ಹಾಗಿದ್ದರೂ ಸಹ ಮುನ್ನೆಚ್ಚರಿಕೆಯ ಕ್ರಮವಾಗಿ ದೀಪಕ್ ಚಹರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ದೀಪಕ್ ಚಹರ್ ಅವರು ಫೆಬ್ರವರಿ ತಿಂಗಳಿನಲ್ಲಿ ಆರೋಗ್ಯ ಸಮಸ್ಯೆಯಿಂದ ಭಾರತ ತಂಡದಿಂದ ಹೊರಗುಳಿದಿದ್ದರು, ಮತ್ತೆ ಆಗಸ್ಟ್ ತಿಂಗಳಿನಲ್ಲಿ ಭಾರತ ತಂಡಕ್ಕೆ ವಾಪಸ್ ಬಂದರು. ಆದರೆ ಇದೀಗ ಮತ್ತೊಮ್ಮೆ ಕಾಲು ನೋವಿನ ಸಮಸ್ಯೆ ಇಂದ ಬಳಲುತ್ತಿದ್ದಾರೆ. ದೀಪಕ್ ಚಹರ್ ಅವರು ವಿಶ್ವಕಪ್ ತಂಡದ ಸ್ಟ್ಯಾಂಡ್ ಬೈ ಆಟಗಾರರ ಪಟ್ಟಿಯಲ್ಲಿದ್ದರು, ಜಿಂಬಾಬ್ವೆ ಪ್ರವಾಸದಲ್ಲಿ 2 ಪಂದ್ಯಗಳಲ್ಲಿ 5 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿದ್ದ ಚಹರ್, ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳಲ್ಲಿ 3 ವಿಕೆಟ್ ಪಡಿದಿದ್ದರು. ಜೊತೆಗೆ ಬ್ಯಾಟ್ಸ್ಮನ್ ಆಗಿ 31 ರನ್ ಗಳಿಸಿದ್ದರು, ಬುಮ್ರ ಅವರ ಬದಲಾಗಿ ವಿಶ್ವಕಪ್ ಪಂದ್ಯಗಳಿಗೆ ಇವರನ್ನು ಪರಿಗಣಿಸುವ ಚರ್ಚೆ ಸಹ ನಡೆಯುತ್ತಿತ್ತು, ಆದರೆ ಈಗ ಇವರಿಗೆ ಕಾಲು ನೋವು ಶುರುವಾಗಿರುವುದು ಭಾರತ ತಂಡಕ್ಕೆ ಆತಂಕ ತಂದಿದೆ.

Get real time updates directly on you device, subscribe now.