ತನಗೆ ಸರಿಯಾಗಿ ಅವಕಾಶ ನೀಡದೆ ಇರುವಾಗ ತಂಡದಲ್ಲಿ ತನ್ನ ಜವಾಬ್ದಾರಿಯೇನು ಎಂಬುದನ್ನು ವಿವರಿಸಿದ ದಿನೇಶ್. ಏನೆಲ್ಲಾ ಮಾಡುತ್ತಾರೆ ಅಂತೇ ಗೊತ್ತೇ??
ತನಗೆ ಸರಿಯಾಗಿ ಅವಕಾಶ ನೀಡದೆ ಇರುವಾಗ ತಂಡದಲ್ಲಿ ತನ್ನ ಜವಾಬ್ದಾರಿಯೇನು ಎಂಬುದನ್ನು ವಿವರಿಸಿದ ದಿನೇಶ್. ಏನೆಲ್ಲಾ ಮಾಡುತ್ತಾರೆ ಅಂತೇ ಗೊತ್ತೇ??
ದಿನೇಶ್ ಕಾರ್ತಿಕ್ ಅವರು ಭಾರತ ತಂಡದಲ್ಲಿ ಪ್ರಸ್ತುತ ಇರುವ ಹಿರಿಯ ಸದಸ್ಯರಲ್ಲಿ ಒಬ್ಬರು, ಇವರಿಗೆ 15 ವರ್ಷಗಳ ಅನುಭವ ಇದೆ. ಸ್ವಲ್ಪ ಸಮಯ ಭಾರತದಿಂದ ದೂರ ಉಳಿದಿದ್ದ ದಿನೇಶ್ ಕಾರ್ತಿಕ್ ಅವರು ಇದೀಗ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿ, ಫಿನಿಷರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕಾರ್ತಿಕ್ ಅವರು ಬ್ಯಾಟ್ಸ್ಮನ್ ಆಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದರು ಸಹ, ವಿಕೆಟ್ ಕೀಪರ್ ಆಗಿ ಡಿ.ಆರ್.ಸಿ. ನಿರ್ಣಯ ತೆಗೆದುಕೊಳ್ಳಲು ನಾಯಕನಿಗೆ ಸರಿಯಾದ ಸಹಾಯ ಮಾಡುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಇದಕ್ಕೆ ಕಾರಣ ಭಾರತ ವರ್ಸಸ್ ಅಸ್ಟ್ರೇಲಿಯಾ ಮೊದಲ ಪಂದ್ಯದಲ್ಲಿ ಗ್ರೀನ್ ಅವರಿ LBW ಆಗಿ ಔಟ್ ಆಗಿದ್ದರು ಸಹ, ಯಾರು ಅದನ್ನು ಗಮನಿಸಿ, ರಿವ್ಯೂ ತೆಗೆದುಕೊಳ್ಳಲಿಲ್ಲ. ಇದು ತಂಡಕ್ಕೆ ನೆಗಟಿವ್ ಆಗಿ ಪರಿಣಮಿಸಿತು.
ಡಿ.ಆರ್.ಎಸ್ ನಿರ್ಣಯ ತೆಗೆದುಕೊಳ್ಳುವಲ್ಲಿ ವಿಕೀಟ್ ಕೀಪರ್ ನ ಪಾತ್ರ ಬಹಳ ಮುಖ್ಯವಾಗಿರುತ್ತದೆ, ಈ ವಿಚಾರಗಳ ಬಗ್ಗೆ ದಿನೇಶ್ ಕಾರ್ತಿಕ್ ಅವರು ನಿನ್ನೆಯ ಪಂದ್ಯ ಶುರು ಆಗುವುದಕ್ಕಿಂತ ಮೊದಲೇ ಮಾತನಾಡಿದ್ದಾರೆ. “ಇದು ಬಹಳ ಮುಖ್ಯವಾದ ಪಾತ್ರ ಎನ್ನುವುದು ನನ್ನ ಭಾವನೆ. ಮೊದಲ ಪಂದ್ಯದಲ್ಲಿ ಆಟದ ಟೆನ್ಷನ್ ನಲ್ಲಿ ನಾನು ಅವಕಾಶ ಕಳೆದುಕೊಂಡು, ಬಾಲ್ ಹಿಡಿಯುವ ಭರದಲ್ಲಿ LBW ಬಗ್ಗೆ ಸರಿಯಾದ ನಿರ್ಧಾರವನ್ನು ನಾನು ತೆಗೆದುಕೊಳ್ಳಲಿಲ್ಲ. ಇದರಿಂದ ಆಟದ ಮೇಲೆ ಬಹಳ ಪರಿಣಾಮ ಬೀರಿತು. ಕೀಪರ್ ಗಳಾಗಿ ಜವಾಬ್ದಾರಿ ಇರುತ್ತದೆ.” ಎಂದು ಹೇಳಿದ್ದಾರೆ. ಇನ್ನು ರೋಹಿತ್ ಶರ್ಮಾ ಅವರಿಗೆ ತಾವು ಹೇಗೆ ಸಹಾಯ ಮಾಡುತ್ತಾರೆ ಎಂದು ಸಹ ಕಾರ್ತಿಕ್ ಅವರು ತಿಳಿಸಿದ್ದಾರೆ. “ಬಹಳ ಸಮಯದಲ್ಲಿ ನಾನು ರೋಹಿತ್ ಶರ್ಮಾ ಅವರಿಗೆ 3ನೆಯ ಕಣ್ಣಾಗಿರುತ್ತೇನೆ.
ಸರಿಯಾದ ದೃಷ್ಟಿಕೋನ ಪಡೆಯಲು ಮತ್ತು ಬೌಲಿಂಗ್ ನಲ್ಲಿ ಬದಲಾವಣೆ ಮಾಡಲು ನಾನು ರೋಹಿತ್ ಅವರಿಗೆ ಸಹಾಯ ಮಾಡುತ್ತೇನೆ. ಕ್ಯಾಪ್ಟನ್ ಗೆ ಪ್ರಶ್ನೆಗಳನ್ನು ಕೇಳುತ್ತೇನೆ, ಅದಕ್ಕೆ ತಕ್ಕ ಉತ್ತರ ಕೊಡುವ ಸಾಮರ್ಥ್ಯ ಅವರಿಗೆ ಇದೆ. ಗ್ರೌಂಡ್ ನಲ್ಲಿ ನಾನು ವಿಕೆಟ್ ಹಿಂದೆ ಇರುವಾಗ, ನನ್ನಿಂದ ಸಾಧ್ಯವಾದ ಎಲ್ಲಾ ವಿಷಯಗಳ ಕಡೆಗೆ ಗಮನ ಕೊಡುತ್ತಿದ್ದೇನೆ ಎಂದು ನನಗೆ ಖಚಿತವಾಗಿರಬೇಕು.” ಎಂದಿದ್ದಾರೆ ಕಾರ್ತಿಕ್. ಮ್ಯಾಚ್ ಗಳಲ್ಲಿ ಕಾರ್ತಿಕ್ ಅವರನ್ನು ಡೆತ್ ಓವರ್ ಗಳಲ್ಲಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದ್ದು, ಅದಕ್ಕೆ ಉತ್ತರ ನೀಡಿ, 20 ರಿಂದ 25 ಎಸೆತಗಳನ್ನು ಫೇಸ್ ಮಾಡುವುದು ಸೂಕ್ತ, ಆದರೆ ಟಿ20 ಕ್ರಿಕೆಟ್ ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಹೇಗೆ ರಚನೆಯಾಗುತ್ತೆ ಎಂದು ನೋಡಿದರೆ, ಪರಿಸ್ಥಿತಿ ನೋಡಿ ಗರಿಷ್ಠ ಎಫರ್ಟ್ಸ್ ಹಾಕುವುದು ಮುಖ್ಯ..” ಎಂದು ಹೇಳಿದ್ದಾರೆ.