ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸರಣಿ ಏನೋ ಗೆದ್ದಾಯ್ತು, ಆದರೆ ವಿಶ್ವಕಪ್ ಗೆ ಆಯ್ಕೆ ಯಾಗಿರುವ ಮೂವರು ಕಣಕ್ಕೆ ಇಳಿಯುವುದು ಅನುಮಾನ. ತಂಡದಿಂದ ಹೊರ ಹೋಗಬಹುದಾದ ಮೂವರು ಯಾರ್ಯಾರು ಗೊತ್ತೇ??

1,753

Get real time updates directly on you device, subscribe now.

ಟಿ20 ವಿಶ್ವಕಪ್ ಪಂದ್ಯಗಳು ಶುರು ಆಗುವುದಕ್ಕೆ ಇನ್ನು ಕಡಿಮೆ ಸಮಯ ಉಳಿದಿದೆ. ಅಕ್ಟೋಬರ್ 16 ರಿಂದ ವಿಶ್ವಕಪ್ ಪಂದ್ಯಗಳು ಶುರುವಾಗಲಿದ್ದು, ನವೆಂಬರ್ 13 ರಂದು ಮುಕ್ತಾಯವಾಗಲಿದೆ. ವಿಶ್ವಕಪ್ ಪಂದ್ಯಗಳು ಶುರು ಆಗುವುದಕ್ಕಿಂತ ಮೊದಲು, ವಿಶ್ವಕಪ್ ನಲ್ಲಿ ಆಡಲಿರುವ ಎಲ್ಲಾ ದೇಶದ ತಂಡಗಳು, ತಮ್ಮ ಸ್ಪರ್ಧಿಗಳನ್ನು ಘೋಷಣೆ ಮಾಡಿದ್ದಾರೆ. ಅದೇ ರೀತಿ ಭಾರತ ತಂಡ ಕೂಡ 15 ಸ್ಪರ್ಧಿಗಳ ತಂಡ ಮತ್ತು 4 ಹೆಚ್ಚುವರಿ ಆಟಗಾರರನ್ನು ಆಯ್ಕೆಮಾಡಿ ಪಟ್ಟಿಯನ್ನು ಘೋಷಣೆ ಮಾಡಿ ಆಗಿದೆ. ವಿಶ್ವಕಪ್ ಗಿಂತ ಮೊದಲು ಅಭ್ಯಾಸದ ಪಂದ್ಯಗಳು ನಡೆಯುತ್ತಿದೆ. ಭಾರತದಲ್ಲೇ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳ ವಿರುದ್ಧ ಸರಣಿ ಪಂದ್ಯಗಳು ನಡೆಯುತ್ತಿದೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿ ಮುಗಿದಿದ್ದು, ಭಾರತ ತಂಡ ಮೇಲುಗೈ ಸಾಧಿಸಿದೆ. ಇನ್ನು ಸೌತ್ ಆಫ್ರಿಕಾ ವಿರುದ್ಧ ಸರಣಿ ಪಂದ್ಯಗಳು ಶುರುವಾಗಬೇಕಿದೆ. ಭಾರತ ತಂಡವು ತಮ್ಮಲ್ಲಿ ಇರುವ ತೊಂದರೆಗಳನ್ನು ಈಗಲೇ ವಿಶ್ವಕಪ್ ಶುರು ಆಗುವುದಕ್ಕಿಂತ ಸರಿ ಮಾಡಿಕೊಳ್ಳಬೇಕು. ಪ್ರಸ್ತುತ ಭಾರತ ತಂಡದ ಬ್ಯಾಟಿಂಗ್ ಸರಿ ಇದ್ದು, ಬೌಲಿಂಗ್ ನಲ್ಲಿಯೇ ವೈಫಲ್ಯ ಅನುಭವಿಸುತ್ತಿದ್ದಾರೆ. ಭುವನೇಶ್ವರ್ ಕುಮಾರ್, ಯುಜವೇಂದ್ರ ಚಾಹಲ್ ಇಬರಿಬ್ಬರು ಸಹ ಏಷ್ಯಾಕಪ್ ಪಂದ್ಯಗಳು ಶುರುವಾಗುವುದಕ್ಕಿಂತ ಮೊದಲು ಅತ್ಯುತ್ತಮವಾದ ಫಾರ್ಮ್ ನಲ್ಲಿದ್ದರು, ಆದರೆ ಈಗ ಫಾರ್ಮ್ ಕಳೆದುಕೊಂಡಿದ್ದಾರೆ. ಇದರಿಂದ ಕ್ಯಾಪ್ಟನ್ ಗೆ ತೊಂದರೆಯಾಗುತ್ತಿದೆ. ಭುವನೇಶ್ವರ್ ಕುಮಾರ್ ಅವರು ಆರಂಭಿಕ ಓವರ್ ಗಳಲ್ಲಿ ಉತ್ತಮವಾಗಿಯೇ ಬೌಲಿಂಗ್ ಮಾಡುತ್ತಿದ್ದರು ಸಹ, ಡೆತ್ ಓವರ್ ಗಳಲ್ಲಿ ದುಬಾರಿಯಾಗುತ್ತಿದ್ದಾರೆ. ಅದರಲ್ಲು 19ನೇ ಓವರ್ ನಲ್ಲಿ ಹೆಚ್ಚು ರನ್ ಗಳನ್ನು ಬಿಟ್ಟುಕೊಡುತ್ತಿದ್ದಾರೆ.

ವಿಕೆಟ್ ಪಡೆಯುವಲ್ಲಿ ಸಹ ಹಿಂದೆ ಬೀಳುತ್ತಿದ್ದಾರೆ. ಚಾಹಲ್ ಅವರು ಸಹ ಹಿಂದಿನ ಹಾಗೆ ವಿಕೆಟ್ ಪಡೆಯಲು ಕಷ್ಟಪಡುತ್ತಿದ್ದಾರೆ. ಇವರಿಬ್ಬರು ಸಹ ಹೀಗೆ ಫಾರ್ಮ್ ಕಳೆದುಕೊಂಡಿದ್ದು, ಮುಂದಿನ ಪಂದ್ಯಗಳಲ್ಲೂ ಇದೇ ರೀತಿ ಆದರೆ, ಪ್ಲೇಯಿಂಗ್ 11 ನಲ್ಲಿ ಇವರಿಬ್ಬರು ಸ್ಥಾನ ಪಡೆಯುವುದು ಕಷ್ಟವಾಗಲಿದೆ. ಚಾಹಲ್ ಬದಲಾಗಿ ಆರ್.ಅಶ್ವಿನ್ ಅವರು, ಭುವಿ ಬದಲಾಗಿ ಅರ್ಷದೀಪ್ ಸಿಂಗ್ ಸ್ಥಾನ ಪಡೆಯಬಹುದು ಎನ್ನಲಾಗುತ್ತಿದೆ. ಇವರಿಬ್ಬರು ಮಾತ್ರವಲ್ಲದೆ, ಹರ್ಷಲ್ ಪಟೇಲ್ ಅವರು ಸಹ ಫಾರ್ಮ್ ಕಳೆದುಕೊಂಡು, ಕಳೆದ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಹರ್ಷಲ್ ಅವರು ಸಹ ಇಂಜುರಿ ಇಂದ ಚೇತರಿಸಿಕೊಂಡು ಬಂದ ಬಳಿಕ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಹೆಚ್ಚಿನ ರನ್ ನೀಡಿದ್ದಾರೆ, ಬೌಲರ್ ಗಳ ಪರಿಸ್ಥಿತಿ ಹೀಗೆ ಆದರೆ, ಭಾರತ ತಂಡ ಆಸ್ಟ್ರೇಲಿಯಾ ಪಿಚ್ ನಲ್ಲಿ ಕಷ್ಟಪಡುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Get real time updates directly on you device, subscribe now.