ಪಂದ್ಯ ಮುಗಿದ ಬಳಿಕ ಭಾವುಕರಾಗಿ ಮಾತನಾಡಿದ ವಿರಾಟ್ ಕೊಹ್ಲಿ. ಹೇಳಿದ್ದೇನು ಗೊತ್ತೇ?? ವೈರಲ್ ಆಯಿತು ವಿಡಿಯೋ.

ಪಂದ್ಯ ಮುಗಿದ ಬಳಿಕ ಭಾವುಕರಾಗಿ ಮಾತನಾಡಿದ ವಿರಾಟ್ ಕೊಹ್ಲಿ. ಹೇಳಿದ್ದೇನು ಗೊತ್ತೇ?? ವೈರಲ್ ಆಯಿತು ವಿಡಿಯೋ.

ನಿನ್ನೆ ನಡೆದ ಭಾರತ ವರ್ಸಸ್ ಆಸ್ಟ್ರೇಲಿಯಾ ಸರಣಿಯ ಮೂರನೆಯ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸುವ ಮೂಲಕ, ಈ ಸರಣಿಯನ್ನು ಗೆದ್ದುಕೊಂಡಿದೆ. ಮೂರು ಟಿ20 ಪಂದ್ಯಗಳನ್ನು ಒಳಗೊಂಡಿದ್ದ ಈ ಸರಣಿ ಪಂದ್ಯಗಳಲ್ಲಿ ಮೊದಲ ಪಂದ್ಯವನ್ನು ಭಾರತ ತಂಡ ಸೋತಿತ್ತು, 208 ರನ್ ಗಳನ್ನು ಟಾರ್ಗೆಟ್ ನೀಡಿದರು ಸಹ, ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗದೆ, ಕಳಪೆ ಬೌಲಿಂಗ್ ಇಂದ ಸೋಲು ಕಾಣಬೇಕಾಯಿತು. ಇನ್ನು ಎರಡನೇ ಪಂದ್ಯ ಮಳೆಯ ಕಾರಣ ಎರಡು ಗಂಟೆಗಳ ಕಾಲ ತಡವಾಗಿ ಪ್ರಾರಂಭವಾಗಿ, 8 ಓವರ್ ಗಳ ಮ್ಯಾಚ್ ನಡೆಯಿತು. ಇಲ್ಲಿ ಬೌಲಿಂಗ್ ಪ್ರದರ್ಶನ ಕಳಪೆ ಆಗಿದ್ದರು ಸಹ, ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಪಂದ್ಯದಲ್ಲಿ ಗೆಲುವು ಸಾಧಿಸಿತು ಭಾರತ.

ನಿನ್ನೆ ನಡೆದ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ 187 ರನ್ ಗಳಿಸಿತು, ನಿನ್ನೆ ಸಹ ಬೌಲಿಂಗ್ ಪ್ರದರ್ಶನ ಹೇಳಿಕೊಳ್ಳುವಂಥ ಮಟ್ಟಕ್ಕೆ ಚೆನ್ನಾಗಿರಲ್ಲಿ. ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಭಾರತ ತಂಡ ಉತ್ತಮವಾದ್ ಪ್ರದರ್ಶನ ನೀಡಿ, ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಯಿತು. ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಅಜೆಯ ಅರ್ಧ ಸೆಂಚುರಿ ಭಾರಿಸಿದರು, 3ನೇ ಕ್ರಮಾಂಕದಲ್ಲಿ ಬಂದ ಕೋಹ್ಲಿ ಅವರು ಬಹಳ ಸಮಯದವರೆಗು ಕ್ರೀಸ್ ನಲ್ಲಿದ್ದರು, ಸೂರ್ಯಕುಮಾರ್ ಯಾದವ್ ಅವರ ಜೊತೆಯಾಟ ಅದ್ಭುತವಾಗಿತ್ತು ಎಂದರೆ ತಪ್ಪಲ್ಲ. ನಿನ್ನೆಯ ಪಂದ್ಯ ಮುಗಿದ ಬಳಿಕ ವಿರಾಟ್ ಕೋಹ್ಲಿ ಅವರು ಭಾವುಕರಾಗಿ ಹೇಳಿದ್ದೇನು ಗೊತ್ತಾ? ತಿಳಿಸುತ್ತೇವೆ ನೋಡಿ..

ನನ್ನ ಅನುಭವಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು.. ಅದರಿಂದಲೇ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬರುತ್ತಿದ್ದೇನೆ. ತಂಡಕ್ಕೆ ಏನು ಬೇಕೋ ಅದನ್ನು ನಾನು ಕೊಡಬೇಕು. ಮಧ್ಯಮ ಓವರ್ ನಲ್ಲಿ ಬಂದ ಮುಖ್ಯ ಬೌಲರ್ Zampa ಅವರನ್ನು ಫೇಸ್ ಮಾಡಬೇಕಿತ್ತು, ಸೂರ್ಯ ಆ ರೀತಿ ಬ್ಯಾಟಿಂಗ್ ಮಾಡುವಾಗ ನಾನು ಡಗೌಟ್ ಕಡೆಗೆ ನೋಡಿದೆ, ರೋಹಿತ್ ಮತ್ತು ರಾಹುಲ್ ನೀವು ಬ್ಯಾಟಿಂಗ್ ಮಾಡುತ್ತಾ ಇರಿ ಎಂದು ಹೇಳಿದರು. ಸೂರ್ಯ ತುಂಬಾ ಚೆನ್ನಾಗಿ ಆಡುತ್ತಿದ್ದರು, ಅಲ್ಲಿ ಪಾರ್ಟ್ನರ್ಶಿಪ್ ಬೆಳೆಸುವ ಪ್ರಯತ್ನ ನಡೆಯುತ್ತಿತ್ತು. ಹಾಗಾಗಿ ನಾನು ನನ್ನ ಅನುಭವವನ್ನು ಚೆನ್ನಾಗಿ ಬಳಸಿಕೊಂಡೆ. ಆರಂಭದ ಕೆಲವು ಬಾಲ್ ಗಳನ್ನು ಫೇಸ್ ಮಾಡಿದೆ, ನಂತರ ಸಿಕ್ಸ್ ಹೊಡೆದೆ, ಅದು ಮತ್ತೆ ನಾನು ಸೆಟ್ ಆಗುವ ಹಾಗೆ ಮಾಡಿತು..” ಎಂದು ಹೇಳಿದರು ವಿರಾಟ್.

ಇನ್ನು ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಮಾತನಾಡಿ, “ಅವರು ಏನು ಮಾಡುತ್ತಿದ್ದಾರೆ ಎನ್ನುವ ಕ್ಲಾರಿಟಿ ಅವರಿಗೆ ಇದೆ. ಯಾವುದೇ ಪರಿಸ್ಥಿತಿಯಲ್ಲಿ ಬ್ಯಾಟ್ ಮಾಡುವ ಸಾಮರ್ಥ್ಯ ಅವರಿಗೆ ಇದೆ. ಈಗಾಗಲೇ ಅವರು ಅದನ್ನು ನಿರೂಪಿಸಿದ್ದಾರೆ. ಇಂಗ್ಲೆಂಡ್ ನಲ್ಲಿ ಸೆಂಚುರಿ ಭಾರಿಸಿದ್ದಾರೆ. ಏಷ್ಯಾಕಪ್ ನಲ್ಲಿ ಸಹ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಕಳೆದ 6 ತಿಂಗಳುಗಳಿಂದ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ಅಂತಹ ಶಾಟ್ಸ್ ಗಳನ್ನು ಸರಿಯಾದ ಸಮಯದಲ್ಲಿ ಹೊಡೆಯುವುದು ಅದ್ಭುತವಾಗಿದೆ..” ಎಂದಿದ್ದಾರೆ ವಿರಾಟ್ ಕೋಹ್ಲಿ.