ಮೈದಾನಲ್ಲಿಯೇ ತಾಳ್ಮೆ ಕಳೆದುಕೊಂಡು ದಿನೇಶ್ ಕುತ್ತಿಗೆಗೆ ಕೈ ಹಾಕಿದ ರೋಹಿತ್ ಮಾಡಿದ್ದೇನು ಗೊತ್ತೇ?? ವೈರಲ್ ಆಯಿತು ವಿಡಿಯೋ. ರೋಹಿತ್ ಇದು ಸರೀನಾ??
ಮೈದಾನಲ್ಲಿಯೇ ತಾಳ್ಮೆ ಕಳೆದುಕೊಂಡು ದಿನೇಶ್ ಕುತ್ತಿಗೆಗೆ ಕೈ ಹಾಕಿದ ರೋಹಿತ್ ಮಾಡಿದ್ದೇನು ಗೊತ್ತೇ?? ವೈರಲ್ ಆಯಿತು ವಿಡಿಯೋ. ರೋಹಿತ್ ಇದು ಸರೀನಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡ ನೆನ್ನೆಯ ಆಸ್ಟ್ರೇಲಿಯಾ ಪದ್ಯದಲ್ಲಿ ಹೀನಾಯವಾಗಿ ಸೋಲನ್ನು ಕಂಡಿದೆ. ಇನ್ನೂರಕ್ಕೂ ಹೆಚ್ಚು ರನ್ ಗಳಿಸಿದ್ದರೂ ಕೂಡ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಕಟ್ಟಿ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದ್ದು ಇನ್ನೂ ನಾಲ್ಕು ಎಸೆತಗಳು ಬಾಕಿ ಉಳಿದಿರುವಂತೆ ಆಸ್ಟ್ರೇಲಿಯಾ ತಂಡ ಗುರಿ ಮುಟ್ಟಿ ಭಾರತ ತಂಡದ ಮೇಲಿದ್ದ ನಿರೀಕ್ಷೆಯನ್ನು ಒಮ್ಮೆಲೇ ಹೊಸಕಿ ಹಾಕಿದೆ ಎಂದರೆ ತಪ್ಪಾಗಲಾರದು.
ಹೌದು ಸ್ನೇಹಿತರೇ ಏಷ್ಯಾ ಕಪ್ ನಲ್ಲಿ ಭಾರತ ಕ್ರಿಕೆಟ್ ತಂಡ ಹೊರ ಬಿದ್ದ ಮೇಲೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ವಿಶ್ವ ಗೆಲ್ಲುವ ಭರವಸೆ ಮೂಡಿಸುತ್ತದೆ ಎಂಬ ಆಲೋಚನೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ತವರು ನೆಲದಲ್ಲಿ ಕೂಡ ಹೆಚ್ಚು ರನ್ಗಳನ್ನು ಗಳಿಸಿದರೂ ಕೂಡ ಸೋಲನ್ನು ಕಾಣುವ ಮೂಲಕ ಭಾರತ ಕ್ರಿಕೆಟ್ ತಂಡದ ಬೌಲಿಂಗ್ ವಿಭಾಗದ ಸಮಸ್ಯೆಯನ್ನು ಎತ್ತಿ ತೋರಿಸಿದೆ. ತಂಡದಲ್ಲಿ ಬಹುತೇಕ ಘಟಾನುಘಟಿಗಳು ಇದ್ದರೂ ಕೂಡ ಕೊನೆಗೆ ಓವರ್‌ಗಳಲ್ಲಿ ಭಾರಿ ರನ್ಗಳನ್ನು ಬಿಟ್ಟುಕೊಟ್ಟಿದ್ದು ಭಾರತ ಕ್ರಿಕೆಟ್ ತಂಡದ ಸೋಲಿಗೆ ಕಾರಣ ಎಂದರೆ ತಪ್ಪಾಗಲಾರದು.
ಇನ್ನು ಅಷ್ಟೇ ಅಲ್ಲ ರೋಹಿತ್ ಶರ್ಮಾ ರವರು ಐಪಿಎಲ್ ನಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮುನ್ನಡೆಸಿ ಐದು ಬಾರಿ ಕಪ್ ಅನ್ನು ಗೆದ್ದಿರಬಹುದು. ಆದರೆ ಅದೇ ರೀತಿಯ ಬಲಿಷ್ಠ ಭಾರತದ ತಂಡವನ್ನು ಮುನ್ನಡೆಸಿ ಗೆಲ್ಲುವಲ್ಲಿ ವಿಫಲವಾಗುತ್ತಿರುವುದು ವಿಶ್ವಕಪ್ ಟೂರ್ನಿಗೆ ನಿಜಕ್ಕೂ ಈ ಭಾರತ ತಂಡ ಸಿದ್ಧವಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡುವಂತೆ ಮಾಡುತ್ತಿದೆ. ರೋಹಿತ್ ನಾಯಕತ್ವದ ಕುರಿತು ಕೂಡ ಹಲವಾರು ಪ್ರಶ್ನೆಗಳು ಎದುರಾಗುತ್ತಿವೆ. ಇನ್ನು ಕೊನೆಯ ಓವರ್ ಗಳಲ್ಲಿ ಯಾರ ಕೈಗೆ ಬಾಲನ್ನು ಯಾವ ಸಮಯದಲ್ಲಿ ನೀಡಬೇಕು ಎಂಬುದನ್ನು ರೋಹಿತ್ ಸಂಪೂರ್ಣವಾಗಿ ಮರೆತಂತೆ ಕಾಣುತ್ತಿದೆ ಹಾಗೂ ಪ್ರತಿ ಬಾರಿಯೂ ಕೂಡ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡುತ್ತಾ ರೋಹಿತ್ ಶರ್ಮಾ ರವರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ.
ಕಳೆದ ಏಷ್ಯಾ ಕಪ್ ನಲ್ಲಿ ಹರ್ಷ ದೀಪ್ ಸಿಂಗ್ ರವರು ಕೊನೆಯ ಓವರ್ ನಲ್ಲಿ ಉತ್ತಮ ಬೋಲಿಂಗ್ ಮಾಡಿ ತಂಡವನ್ನು ಗೆಲ್ಲಿಸುತ್ತಿರುವ ಸಮಯದಲ್ಲಿ ಹರ್ಷ ದೀಪ್ ಸಿಂಗ್ ರವರು ತಾನು ಒಬ್ಬ ಬೌಲರ್ ಆಗಿ ಯಾವ ರೀತಿಯ ಬಾಲ್ ಮಾಡುತ್ತೇನೆ ಎಂದು ಅರಿತುಕೊಂಡು ತನಗೆ ಬೇಕಾದಂತೆ ಫೀಲ್ಡಿಂಗ್ ಸೆಟ್ ಮಾಡುವಂತೆ ಕೇಳಿಕೊಂಡರು. ಆದರೆ ನಾಯಕರಾದ ರೋಹಿತ್ ಶರ್ಮ ರವರು ಹರ್ಷದೀಪ್ ಸಿಂಗ್ ರವರ ಮಾತನ್ನು ಪರಿಗಣಿಸಲು ಅಲ್ಲ ಬದಲಾಗಿ ಅವರ ಮಾತನ್ನು ಕೇಳಿಸಿಕೊಳ್ಳಲು ಕೂಡ ತಯಾರಿಲ್ಲದೆ ಕೋಪ ಮಾಡಿಕೊಂಡು ಹೊರಟು ಹೋಗಿದ್ದರು.
ರೋಹಿತ್ ಶರ್ಮಾ ರವರ ಈ ನಡೆ ನಿಜಕ್ಕೂ ಎಲ್ಲರಲ್ಲೂ ಅಸಮಾಧಾನ ಮೂಡಿಸಿದ್ದು ಸುಳ್ಳಲ್ಲ. ಈ ಕುರಿತು ರೋಹಿತ್ ರಿಯಾಕ್ಷನ್ ನೋಡಲು ಇದನ್ನು ಕ್ಲಿಕ್ ಮಾಡಿ. ಇನ್ನು ಅಗ್ರೆಸ್ಸಿವ್ ನಾಯಕ ಕೊಹ್ಲಿ ಹಾಗೂ ಕೂಲ್ ಕ್ಯಾಪ್ಟನ್ ಧೋನಿ ರವರ ನಾಯಕತ್ವವನ್ನು ಕಂಡಿರುವ ಭಾರತ ತಂಡ ಎಂದಿಗೂ ಕೂಡ ತನ್ನದೇ ತಂಡದ ಆಟಗಾರರ ವಿರುದ್ಧ ಸೋಲಾಗಿರಲಿ ಅಥವಾ ಗೆಲುವಾಗಿರಲಿ ಈ ರೀತಿಯ ಪ್ರತಿಕ್ರಿಯೆ ತಂಡದ ಆಟಗಾರರ ಮೇಲೆ ನೀಡಿರಲಿಲ್ಲ. ಆದರೆ ಇದಕ್ಕೆ ವಿಭಿನ್ನವಾಗಿ ಪ್ರತಿ ಬಾರಿಯೂ ಕೂಡ ತಂಡದ ಆಟಗಾರರ ವಿರುದ್ಧ ರೋಹಿತ್ ಕಿಡಿ ಕಾರುತ್ತಿದ್ದಾರೆ.
ಇನ್ನು ನೆನ್ನೆಯ ಪಂದ್ಯದಲ್ಲಿ ಕೂಡ ರೋಹಿತ್ ರವರು ಅದೇ ರೀತಿಯ ವರ್ತನೆ ತೋರಿದ್ದು ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ಮನ್ ಗ್ರೇನ್ ಮ್ಯಾಕ್ಸ್ವೆಲ್ ರವರ ಕ್ಯಾಚ್ ಹಿಡಿದ ದಿನೇಶ್ ಕಾರ್ತಿಕ್ ರವರು ಬ್ಯಾಟ್ ತಗುಲಿದೆ ಎಂಬುದರ ಕುರಿತು ಅಷ್ಟಾಗಿ ಆಸಕ್ತಿ ತೋರಲಿಲ್ಲ. ಆದರೆ ಬೋಲಿಂಗ್ ಹಾಗೂ ಸುತ್ತಮುತ್ತ ಫೀಲ್ಡಿಂಗ್ ಮಾಡುತ್ತಿದ್ದ ಆಟಗಾರರು ರಿವ್ಯೂ ತೆಗೆದುಕೊಳ್ಳಲು ಹೇಳಿದಾಗ ರೋಹಿತ್ ರವರು ತೆಗೆದುಕೊಂಡಿದ್ದರು.
Rohit Sharma try to kill Dinesh Karthik@ImRo45 @BCCI pic.twitter.com/06d6QpaPeH
— Jiaur Rahman (@JiaurRa91235985) September 20, 2022
ಕೊನೆಗೆ ಗ್ರೇನ್ ಮ್ಯಾಕ್ಸ್ವೆಲ್ ರವರು ಔಟ್ ಎಂದು ತೀರ್ಪು ಬಂದಿತ್ತು. ಇದನ್ನು ಕಂಡ ರೋಹಿತ್ ಶರ್ಮ ರವರು ನೀನು ಕೀಪರ್ ಆಗಿ ನೀನು ಇದರ ಮೇಲೆ ಆಸಕ್ತಿ ತೋರಲಿಲ್ಲ ಎಂದು ಬಹಳ ಕೋಪದಲ್ಲಿ ದಿನೇಶ್ ಕಾರ್ತಿಕ್ ರವರ ಮೇಲೆ ಎರಗಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕೆಲವರಿಗೆ ಇದನ್ನು ತಮಾಷೆಗೆ ಎನ್ನುತ್ತಿದ್ದರೆ ಮತ್ತು ಕೆಲವರು ರೋಹಿತ್ ಶರ್ಮ ರವರ ಮುಖ ನೋಡಿದರೆ ತಿಳಿಯುತ್ತದೆ ರೋಹಿತ್ ಶರ್ಮ ರವರು ತಮಾಷೆ ಮಾಡುತ್ತಿದ್ದರೋ ಅಥವಾ ಸೀರಿಯಸ್ ಆಗಿ ಇದ್ದರು ಎಂದು, ರೋಹಿತ್ ಶರ್ಮ ಅಭಿಮಾನಿಗಳು ರೋಹಿತ್ ಏನು ಮಾಡಿದರು ಕೂಡ ಅದನ್ನು ಸಮರ್ಥನೆ ಮಾಡಿಕೊಳ್ಳುವ ಕೆಲಸ ಮಾಡಬಾರದು, ಆತ ನಾಯಕ ಎಂದು ಮರೆಯಬಾರದು. ತಂಡದ ಆಟಗಾರರ ಮೇಲೆ ಕೋಪ ಮಾಡಿಕೊಳ್ಳುವುದರಿಂದ ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ