ಒಮ್ಮೆಲೇ ಕ್ರಿಕೆಟ್ ನಲ್ಲಿ 8 ನಿಯಮಗಳನ್ನು ಬದಲಾಯಿಸಿದ ICC: ಇನ್ನು ಮುಂದೆ ಕ್ರಿಕೆಟ್ ಮತ್ತಷ್ಟು ರೋಚಕ. ಯಾವೆಲ್ಲ ನಿಯಮ ಬದಲಾವಣೆ ಗೊತ್ತೇ?

ಒಮ್ಮೆಲೇ ಕ್ರಿಕೆಟ್ ನಲ್ಲಿ 8 ನಿಯಮಗಳನ್ನು ಬದಲಾಯಿಸಿದ ICC: ಇನ್ನು ಮುಂದೆ ಕ್ರಿಕೆಟ್ ಮತ್ತಷ್ಟು ರೋಚಕ. ಯಾವೆಲ್ಲ ನಿಯಮ ಬದಲಾವಣೆ ಗೊತ್ತೇ?

ಮುಂದಿನ ತಿಂಗಳು ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲಿದೆ, ಈ ಸಮಯದಲ್ಲಿ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಗ ಕೌನ್ಸಿಲ್) ಈಗ ಟಿ20 ಪಂದ್ಯಗಳಿಗೆ ಹೊಸ ರೂಲ್ಸ್ ಗಳನ್ನು ಜಾರಿ ಮಾಡಿದೆ. ಈ ಹೊಸ ರೂಲ್ಸ್ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಹೊಸ ರೂಲ್ಸ್ ಗಳೊಂದಿಗೆ ಟಿ20 ಪಂದ್ಯಗಳು ನಡೆಯಲಿರುವುದು ಬಹಳ ವಿಶೇಷ ಎಂದೇ ಹೇಳಬಹುದು. ಒಟ್ಟಾರೆಯಾಗಿ ಟಿ20 ವಿಶ್ವಕಪ್ ನಲ್ಲಿ 8 ನಿಯಮಗಳನ್ನು ಬದಲಾವಣೆ ಮಾಡಲಾಗಿದೆ. ಅದರಲ್ಲಿ ಮಂಕಡ್ ರನ್ ಔಟ್ ನಿಯಮವನ್ನು ಸಹ ಸೇರಿಸಲಾಗಿದೆ.

ಈಗ ಹೊಸದಾಗಿ ಬದಲಾವಣೆ ಮಾಡಿರುವ ನಿಯಮಗಳಲ್ಲಿ ಬಹುತೇಕ ನಿಯಮಗಳು ಟಿ20 ವಿಶ್ವಕಪ್ ಪಂದ್ಯಗಳಿಗೆ ಸೇರಿಕೊಳ್ಳಲಿದೆ. ಇನ್ನು ಕೆಲವು ನಿಯಮಗಳು ಒನ್ ಡೇ ಕ್ರಿಕೆಟ್ ಹಾಗೂ ಟೆಸ್ಟ್ ಪಂದ್ಯಗಳಿಗೆ ಮೀಸಲಾಗಿ ಇರಲಿದೆ. ಈ ಎಲ್ಲಾ ನಿಯಮಗಳು ಮುಂದಿನ ದಿನಗಳಲ್ಲಿ ಬರುವ ಪಂದ್ಯಗಳಿಗೆ ಅನ್ವಯವಾಗಲಿದೆ. ಹಾಗಿದ್ದರೆ ಐಸಿಸಿ ಹೊರತಂದಿರುವ ಈ ಹೊಸ 8 ಬದಲಾವಣೆಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

1.ಕ್ಯಾಚ್ ಔಟ್ ಬ್ಯಾಟಿಂಗ್ :- ಇದು ಹೊಸದಾಗಿ ಸೇರ್ಪಡೆಯಾಗಿರುವ ಮೊದಲ ನಿಯಮ ಆಗಿದೆ. ಒಂದು ವೇಳೆ ಬ್ಯಾಟ್ಸ್ಮನ್ ಔಟ್ ಆದಾಗ, ನಾನ್ ಸ್ಟ್ರೈಕ್ ನಲ್ಲಿರುವ ಬ್ಯಾಟ್ಸ್ಮನ್ ಪಿಚ್ ನಲ್ಲಿ ಅರ್ಧದಷ್ಟು ಮುಂದಕ್ಕೆ ಬಂದಿದ್ದರೆ, ಮುಂದಿನ ಬಾಲ್ ಗೆ ಹೊಸ ಬ್ಯಾಟ್ಸ್ಮನ್ ಬಂದ ಬಳಿಕ, ನಾನ್ ಸ್ಟ್ರೈಕ್ ನಲ್ಲಿದ್ದ ಬ್ಯಾಟ್ಸ್ಮನ್ ಬಂದು ಚೆಂಡನ್ನು ಎದುರಿಸಬಹುದಿತ್ತು. ಆದರೆ ಈ ಹೊಸ ನಿಯಮದ ಪ್ರಕಾರ, ಹೊಸ ಬ್ಯಾಟ್ಸ್ಮನ್ ಬಂದು ಚೆಂಡನ್ನು ಎದುರಿಸಬೇಕಾಗುತ್ತದೆ, ಹೊಸ ಬ್ಯಾಟ್ಸ್ಮನ್ ನೇರವಾಗಿ ಬಂದು ಸ್ಟ್ರೈಕ್ ತೆಗೆದುಕೊಳ್ಳಬೇಕು. 2.ಎಂಜಲು ಬಳಕೆ ನಿಷೇಧ :- 2 ವರ್ಷಗಳಿಂದ ಕರೊನಾ ಕಾರಣದಿಂದಾಗಿ ಚೆಂಡಿನ ಮೇಲೆ ಎಂಜಲು ಬಳಕೆ ಮಾಡುವುದನ್ನು ಐಸಿಸಿ ನಿಷೇಧ ಮಾಡಿತ್ತು, ಇದೀಗ ಇನ್ನೆಂದಿಗೂ ಚೆಂಡಿನ ಮೇಲೆ ಎಂಜಲು ಬಳಕೆ ಮಾಡಬಾರದು ಎಂದು ಹೊಸ ನಿಯಮ ಜಾರಿಗೆ ತರಲಾಗಿದೆ. ಚೆಂಡಿನ ಮೇಲೆ ಶಾಶ್ವತವಾಗಿ ಎಂಜಲು ಬಳಕೆ ಮಾಡುವ ಹಾಗಿಲ್ಲ.

3.ಬ್ಯಾಟ್ಸ್ಮನ್ ಗೆ 2 ನಿಮಿಷ ಸಮಯಾವಕಾಶ :- ಒಬ್ಬ ಬ್ಯಾಟ್ಸ್ಮನ್ ಔಟ್ ಆಗಿ ಮತ್ತೊಬ್ಬ ಬ್ಯಾಟ್ಸ್ಮನ್ ಸ್ಟ್ರೈಕ್ ಗೆ ಬರಲು 2 ನಿಮಿಷಗಳು ಮಾತ್ರ ಕಾಲಾವಕಾಶ ನೀಡಲಾಗಿದೆ. ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳಲಾಗುತ್ತಿತ್ತು, ಹಾಗಾಗಿ ಈ ಹೊಸ ನಿಯಮ ತರಲಾಗಿದೆ, 2ನಿಮಿಷದ ಒಳಗೆ ಬ್ಯಾಟಿಂಗ್ ಮಾಡಲು ತಯಾರಾಗಿ ಬ್ಯಾಟ್ಸ್ಮನ್ ಸ್ಟ್ರೈಕ್ ಗೆ ಬರಬೇಕು. ಇನ್ನು ಟಿ20 ಪಂದ್ಯಗಳಲ್ಲಿ 90 ಸೆಕೆಂಡ್ಸ್ ಗಳಲ್ಲಿ ಹೊಸ ಬ್ಯಾಟ್ಸ್ಮನ್ ಬ್ಯಾಟಿಂಗ್ ಮಾಡಲು ತಯಾರಾಗಿ ಬರಬೇಕು. ಆ ಸಮಯದ ಬರದೆ ಹೋದರೆ, ಹೊಸ ಬ್ಯಾಟ್ಸ್ಮನ್ ಅನ್ನು ಔಟ್ ಎಂದು ಪರಿಗಣಿಸಲಾಗುತ್ತದೆ. 4.ಫೀಲ್ಡರ್ ಚಲನೆಗೆ ನಿಯಮ :- ಬೌಲರ್ ರನ್ ಅಪ್ ಮಾಡಿದಾಗ ಯಾವುದಾದರೂ ಫೀಲ್ಡರ್ ಅತ್ತಿತ್ತ ಚಲಿಸಿದರೆ ಎದುರಾಳಿ ತಂಡಕ್ಕೆ 5ರನ್ ಗಳು ಸಿಗುತ್ತದೆ, ಈ ಮೂಲಕ ತಪ್ಪು ಮಾಡಿದ ದಂಡಕ್ಕೆ 5 ರನ್ ಗಳ ದಂಡ ವಿಧಿಸಲಾಗುತ್ತದೆ. ಈ ಹಿಂದೆ ಈ ರೀತಿ ಮಾಡಿದರೆ ಡೆಡ್ ಬಾಲ್ ಎಂದು ಕರೆಯಲಾಗುತ್ತಿತ್ತು, ಆದರೆ ಇನ್ನುಮುಂದೆ ದಂಡ ವಿಧಿಸಲಾಗುತ್ತಿದೆ.

5.ಬ್ಯಾಟ್ಸ್ಮನ್ ಪಿಚ್ ನಲ್ಲಿರಬೇಕು :- ಬ್ಯಾಟ್ಸ್ಮನ್ ಗಳು ಪಿಚ್ ನ ಒಳಗೆ ಇರುವಾಗಲೇ ಬಾಲ್ ಗಳನ್ನು ಎದುರಿಸಿ ಶಾಟ್ ಭಾರಿಸಬೇಕು. ಬ್ಯಾಟಿಂಗ್ ಮಾಡುವಾಗ ಬ್ಯಾಟ್ಸ್ಮನ್ ದೇಹ ಪಿಚ್ ಇಂದ ಹೊರಗಿದ್ದರೆ ಅದನ್ನು ಎಂದು ಪರಿಗಣಿಸುವುದಿಲ್ಲ. ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ. ಮೊದಲೆಲ್ಲಾ ಬಾಲ್ ಪಿಚ್ ಇಂದ ಹೊರ ಹೋದಾಗ, ಓಡಿ ಹೋಗಿ ಬ್ಯಾಟಿಂಗ್ ಮಾಡಿ ಸಿಕ್ಸ್ ಅಥವಾ ಫೋರ್ ಭಾರಿಸುವ ಅವಕಾಶ ಇತ್ತು. ಇನ್ನುಮುಂದೆ ಆ ಅವಕಾಶ ಇರುವುದಿಲ್ಲ. 6.ಮಂಕಡ್ ರನ್ ಔಟ್ ನಿಯಮ ಬದಲು :- ಮುಂಬರುವ ಪಂದ್ಯಗಳಲ್ಲಿ ಮಂಕಡ್ ರನ್ ಔಟ್ ನಿಯಮ ಇರುವುದಿಲ್ಲ. ಆ ಔಟ್ ಅನ್ನು ಸಹ ರನ್ ಔಟ್ ಎಂದೇ ತೆಗೆದುಕೊಳ್ಳಲಾಗುತ್ತದೆ. ಬಾಲ್ ಎಸೆಯುವ ಮೊದಲೇ ಬ್ಯಾಟ್ಸ್ಮನ್ ಕ್ರೀಸ್ ಇಂದ ಹೊರಾಗಿದ್ದರೆ ರನ್ ಔಟ್ ಮಾಡಬಹುದು.

7.ಸ್ಟ್ರೈಕರ್ ರನ್ ಔಟ್ ನಿಯಮ :- ಬೌಲರ್ ಬಾಲ್ ಅನ್ನು ಎಸೆಯುವುದಕ್ಕಿಂತ ಮೊದಲೇ ಸ್ಟ್ರೈಕರ್ ಕ್ರೀಸ್ ಇಂದ ಮುಂದೆ ಬಂದಿದ್ದರೆ ಅವರನ್ನು ನೇರವಾಗಿ ರನ್ ಔಟ್ ಮಾಡುವ ಚಾನ್ಸ್ ಇರುವುದಿಲ್ಲ. ಒಂದು ವೇಳೆ ಬೌಲರ್ ಬಾಲ್ ಅನ್ನು ಎಸೆಯುವುದಕ್ಕಿಂತ ಮೊದಲು ಬ್ಯಾಟ್ಸ್ಮನ್ ಕ್ರೀಸ್ ಇಂದ ಮುಂದೆ ಬಂದಿದ್ದರೆ, ಬಾಲ್ ಅನ್ನು ನೇರವಾಗಿ ವಿಕೆಟ್ ಗೆ ಅಥವಾ ವಿಕೆಟ್ ಕೀಪರ್ ಗೆ ಎಸೆದು ರನ್ ಔಟ್ ಮಾಡಲು ಆಗುವುದಿಲ್ಲ. ಆಗ ಬಾಲ್ ಅನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ. 8.ಸ್ಲೋ ಓವರ್ ರೇಟ್ ನಿಯಮ :- ಪ್ರತಿ ಓವರ್ ಅನ್ನು ನಿರ್ದಿಷ್ಟ ಸಮಯದಲ್ಲಿ ಮುಗಿಸಬೇಕು. ಏನಾದರು ಓವರ್ ಮುಗಿಸುವುದು ತಡವಾದರೆ, ಬೌಂಡರಿ ಲೈನ್ ಇಂದ ಒಬ್ಬ ಫೀಲ್ಡರ್ ಅನ್ನು 30 ಯಾರ್ಡ್ ಸರ್ಕಲ್ ನಲ್ಲಿ ನಿಲ್ಲಿಸಬೇಕು. ಟಿ20 ಕ್ರಿಕೆಟ್ ನಲ್ಲಿ ಈ ನಿಯಮ ಜಾರಿಯಲ್ಲಿದೆ, ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಸಹ ಇದೇ ನಿಯಮ ಜಾರಿಗೆ ಬರಲಿದೆ.