ಕೆಎಲ್ ರಾಹುಲ್ ಗೆ ಟೀಕೆ ಮೇಲೆ ಟೀಕೆ; ಕೊನೆಗೂ ನಿಧಾನಗತಿಯ ಬ್ಯಾಟಿಂಗ್ ಮೇಲೆ ಮಾತನಾಡಿ ರಾಹುಲ್ ಹೇಳಿದ್ದೇನು ಗೊತ್ತೇ??

ಕೆಎಲ್ ರಾಹುಲ್ ಗೆ ಟೀಕೆ ಮೇಲೆ ಟೀಕೆ; ಕೊನೆಗೂ ನಿಧಾನಗತಿಯ ಬ್ಯಾಟಿಂಗ್ ಮೇಲೆ ಮಾತನಾಡಿ ರಾಹುಲ್ ಹೇಳಿದ್ದೇನು ಗೊತ್ತೇ??

ಭಾರತ ಕ್ರಿಕೆಟ್ ತಂಡದ ಉದಯೋನ್ಮುಖ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾದ ಕೆ.ಎಲ್.ರಾಹುಲ್ ಅವರು ಹಲವು ಅದ್ಭುತವಾದ ಇನ್ನಿಂಗ್ಸ್ ಗಳನ್ನು ನೀಡಿದ್ದಾರೆ, ಅದ್ಭುತವಾದ್ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಇಂಜುರಿ ಇಂದ ಭಾರತ ತಂಡದಿಂದ ಹೊರಗುಳಿದಿದ್ದ ಕೆ.ಎಲ್.ರಾಹುಲ್ ಅವರು ಏಷ್ಯಾಕಪ್ ಸರಣಿ ಪಂದ್ಯಗಳ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದರು. ಆದರೆ ಏಷ್ಯಾಕಪ್ ನಲ್ಲಿ ಮೊದಲ ಕೆಲವು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿ ಭಾರಿ ಟೀಕೆ ಅನುಭವಿಸಿದರು ಕೆ.ಎಲ್.ರಾಹುಲ್. ನಂತರದ ಪಂದ್ಯಗಳಲ್ಲಿ ನಿಧಾನಗತಿ ಬ್ಯಾಟಿಂಗ್ ಮಾಡುವ ಮೂಲಕ ಇವರ ಮೇಲೆ ಇನ್ನಷ್ಟು ಟೀಕೆಗಳು ಕೇಳಿಬಂದವು.

ಜೊತೆಗೆ ಕೆ.ಎಲ್.ರಾಹುಲ್ ಅವರು ಕೆಲಸಮಯ ತಂಡದಿಂದ ದೂರ ಉಳಿಯುವುದು ಒಳ್ಳೆಯದು, ರೋಹಿತ್ ಶರ್ಮಾ ಅವರೊಡನೆ ವಿರಾಟ್ ಕೋಹ್ಲಿ ಅವರು ಓಪನರ್ ಆಗಿ ಬರಲಿ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು, ಆದರೆ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಕೆ.ಎಲ್.ರಾಹುಲ್ ಅವರೇ ಓಪನರ್ ಆಗಿ ಬ್ಯಾಟಿಂಗ್ ಮಾಡುತ್ತಾರೆ ಎಂದು ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದ್ದಾರೆ. ಇತ್ತ ರಾಹುಲ್ ಅವರ ನಿಧಾನಗತಿ ಬ್ಯಾಟಿಂಗ್ ಇಂದಾಗಿ ಭಾರತ ತಂಡಕ್ಕೆ ಎಫೆಕ್ಟ್ ಆಗುತ್ತದೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ರಾಹುಲ್ ಅವರ ಮೇಲೆ ಇಷ್ಟೆಲ್ಲಾ ಮಾತುಗಳು ಕೇಳಿಬರುತ್ತಿರುವಾಗ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕಿಂತ ಮೊದಲು ತಮ್ಮ ಫಾರ್ಮ್ ಬಗ್ಗೆ ಕೆ.ಎಲ್.ರಾಹುಲ್ ಅವರು ಮಾತನಾಡಿದ್ದಾರೆ.

“ಯಾರು ಪರ್ಫೆಕ್ಟ್ ಆಗಿರುವುದಿಲ್ಲ, ಎಲ್ಲರೂ ಏನನ್ನಾದರೂ ಮಾಡುವುದಕ್ಕಾಗಿಯೇ ಕೆಲಸ ಮಾಡುತ್ತಿರುತ್ತಾರೆ. ಪ್ರತಿಯೊಬ್ಬರಿಗೂ ಒಂದು ನಿರ್ಧಿಷ್ಟವಾದ ಕೆಲಸ ಇರುತ್ತದೆ, ಒಟ್ಟಾರೆ ಬ್ಯಾಟಿಂಗ್ ಆಧಾರದ ಮೇಲೆ ಸ್ಟ್ರೈಕ್ ರೇಟ್ ತೆಗೆದುಕೊಳ್ಳುತ್ತಾರೆ. ಒಬ್ಬ ಬ್ಯಾಟ್ಸ್ಮನ್ ಒಂದು ನಿರ್ದಿಷ್ಟ ಸ್ಟ್ರೈಕ್ ರೇಟ್ ನಲ್ಕ್ ಯಾವಾಗ ಆಡಿರುತ್ತಾರೆ ಎಂದು ನೀವು ನೋಡಲು ಆಗುವುದಿಲ್ಲ. 200 ಸ್ಟ್ರೈಕ್ ನಲ್ಲಿ ಆಡುವುದು ಮುಖ್ಯವಾಗುತ್ತಾ ಅಥವಾ100 ರಿಂದ 120 ಸ್ಟ್ರೈಕ್ ರೇಟ್ ನಲ್ಲಿ ಆಡಿ ಪಂದ್ಯ ಗೆಲ್ಲಬಹುದಾ ಎನ್ನುವುದನ್ನು ನೋಡಬೇಕಿದೆ. ನನ್ನಿಂದ ನನ್ನ ತಂಡ ಏನನ್ನು ನಿರೀಕ್ಷೆ ಮಾಡುತ್ತಿದೆ ನನಗೆ ಅರ್ಥವಾಗಿದೆ. ಅದನ್ನು ಪೂರ್ತಿ ಮಾಡಲು ಶ್ರಮಪಡುತ್ತಿದ್ದೇನೆ. ನಾನು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನು, ಹಿಂದಿನ 10 ರಿಂದ 12 ತಿಂಗಳುಗಳಲ್ಲಿ ಎಲ್ಲಾ ಆಟಗಾರರಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಜವಾಬ್ದಾರಿಗಳು ಸ್ಪಷ್ಟವಾಗಿದ್ದು, ತಂಡ ನಮ್ಮಿಂದ ಏನು ನಿರೀಕ್ಷೆ ಮಾಡುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಂಡು, ಅದರ ಕಡೆಗೆ ಕೆಲಸ ಮಾಡುತ್ತಾರೆ..” ಎಂದು ಹೇಳಿದ್ದಾರೆ ಕೆ.ಎಲ್.ರಾಹುಲ್.