ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭಾರತ ತಂಡಕ್ಕೆ ಆನೆಬಲ: ಆಸ್ಟ್ರೇಲಿಯಾ ವಿರುದ್ದದ ಪಂದ್ಯಕ್ಕೆ ಏಕಾಏಕಿ ಎಂಟ್ರಿ ಕೊಟ್ಟ ಬಲಾಢ್ಯ ಆಟಗಾರ. ಭಾರತ ಸಮಸ್ಯೆ ಮುಗಿಯಿತು.

96

Get real time updates directly on you device, subscribe now.

ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಮೂರು ಸರಣಿ ಟಿ20 ಪಂದ್ಯಗಳು ಇಂದಿನಿಂದ ಆರಂಭವಾಗಲಿದೆ. ಈ ಸರಣಿ ಪಂದ್ಯ ಆಗಿರುವುದರಿಂದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಪಂದ್ಯ ಗೆಲ್ಲಲು ಮಾಸ್ಟರ್ ಪ್ಲಾನ್ ಗಳೊಡನೆ ಬರುತ್ತಿದ್ದಾರೆ. ಆಸ್ಟ್ರೇಲಿಯಾ ತಂಡವನ್ನು 3-0 ಅಂತರದಲ್ಲಿ ಸೋಲಿಸಿ ಗೆಲ್ಲಬೇಕು ಎನ್ನುವುದು ಭಾರತ ತಂಡದ ಪ್ಲಾನ್ ಆಗಿದ್ದು, ಇದಕ್ಕಾಗಿ ಬಲಿಷ್ಠ ಬೌಲರ್ ಟೀಮ್ ಇಂಡಿಯಾಗೆ ವಾಪಸ್ ಬಂದಿದ್ದಾರೆ. ರೋಹಿತ್ ಶರ್ಮಾ ಅವರು ಈ ಬೌಲರ್ ಅನ್ನು ಕಣಕ್ಕೆ ಇಳಿಸಲಿದ್ದು, ಈತ ಭಾರತ ತಂಡಕ್ಕೆ ಗೆಲುವು ತಂದುಕೊಡುವುದು ಖಚಿತ ಎನ್ನುವ ಮಾತುಗಳು ಈಗ ಕೇಳಿಬರುತ್ತಿದೆ. ಆ ಬೌಲರ್ ಯಾರು? ಅವರ ವಿಶೇಷತೆಗಳು ಏನು ಎಂದು ತಿಳಿಸುತ್ತೇವೆ ನೋಡಿ..

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ಕರೆತರುತ್ತಿರುವ ಚಾಣಾಕ್ಷ ಬೌಲರ್ ಮತ್ಯಾರು ಅಲ್ಲ, ಹರ್ಷಲ್ ಪಟೇಲ್ ಅವರು. ಜುಲೈ ನಲ್ಲಿ ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳನ್ನು ಆಡಿದ ಬಳಿಕ ಹರ್ಷಲ್ ಪಟೇಲ್ ಅವರು ಇಂಜುರಿ ಇಂದಾಗಿ ಭಾರತ ತಂಡದಿಂದ ಹೊರಗುಳಿದಿದ್ದರು, ಈಗ ಅದರಿಂದ ಚೇತರಿಸಿಕೊಂಡು ಮತ್ತೆ ಟೀಮ್ ಇಂಡಿಯಾಗೆ ಮರಳಿ ಬಂದಿದ್ದಾರೆ. ಏಷ್ಯಾಕಪ್ ಪಂದ್ಯಗಳಲ್ಲಿ ಭಾರತ ತಂಡವು ಬೌಲಿಂಗ್ ವಿಭಾಗದಲ್ಲಿ ವೈಫಲ್ಯ ಅನುಭವಿಸಿತು, ಡೆತ್ ಓವರ್ ಗಳಲ್ಲಿ ಆಕ್ರಮಣಕಾರಿ ಬೌಲಿಂಗ್ ಕಂಡು ಬರಲಿಲ್ಲ, ಆದರೆ ಈಗ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಮರಳಿ ಬಂದಿದ್ದು, ಹರ್ಷಲ್ ಇದರಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಪಂದ್ಯದ ಗತಿಯನ್ನು ಬದಲಿಸುವ ಶಕ್ತಿ ಹರ್ಷಲ್ ಪಟೇಲ್ ಅವರಿಗಿದೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಇವರು ಉತ್ತಮವಾಗಿದ್ದು, ಹರ್ಷಲ್ ಪಟೇಲ್ ಅವರು ಆಲ್ ರೌಂಡರ್ ಆಗಿ ಭಾರತ ತಂಡಕ್ಕೆ ಸಹಾಯವಾಗುವುದು ಖಂಡಿತ. ವೇಗವಾಗಿ ಬೌಲಿಂಗ್ ಮಾಡುವುದರ ಜೊತೆಗೆ ಹರ್ಷಲ್ ಅವರ ಸ್ವಿಂಗ್ ಬೌಲಿಂಗ್ ಸಹ ಅದ್ಭುತವಾಗಿರುತ್ತದೆ. ಆರಂಭಿಕ ಓವರ್ ಗಳು ಹಾಗೂ ಡೆತ್ ಓವರ್ ಗಳಲ್ಲಿ ಆಕ್ರಮಣಕಾರಿ ಬೌಲಿಂಗ್ ಮಾಡುವಲ್ಲಿ ಹರ್ಷಲ್ ಖ್ಯಾತಿ ಹೊಂದಿದ್ದಾರೆ. ಸತತವಾಗಿ ವೇಗವನ್ನು ಮಿಶ್ರಣ ಮಾಡುತ್ತಾ, ಬೇರೆ ಬೇರೆ ಬದಲಾವಣೆಗಳಿಂದ ಬೌಲಿಂಗ್ ಮಾಡುತ್ತಾರೆ ಹರ್ಷಲ್ ಪಟೇಲ್, ಇದರಿಂದ ಎದುರಾಳಿ ಬ್ಯಾಟ್ಸ್ಮನ್ ಗೆ ಭಯ ಆಗುವುದು ಖಂಡಿತ. ಹರ್ಷಲ್ ಅವರು ಬ್ಯಾಟ್ಸ್ಮನ್ ಆಗಿ ಕೂಡ ಒಳ್ಳೆಯ ಸ್ಕೋರ್ ಮಾಡಬಲ್ಲರು. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳಲ್ಲೂ ಹರ್ಷಲ್ ಪಟೇಲ್ ಅವರು ಆಡಲಿದ್ದಾರೆ. ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿರುವ ಹರ್ಷಲ್ ಪಟೇಲ್ ಅವರು ಭಾರತ ತಂಡಕ್ಕೆ ಉತ್ತಮ ಕೊಡುಗೆ ನೀಡುವ ಭರವಸೆ ಅವರ ಮೇಲಿದೆ.

Get real time updates directly on you device, subscribe now.