ಆಸ್ಟ್ರೇಲಿಯಾ ಪಂದ್ಯದ ನಂತರ ಸೋಲಿಗೆ ಕಾರಣ ತಿಳಿಸಿ ತಪ್ಪನ್ನು ಒಪ್ಪಿಕೊಂಡ ರೋಹಿತ್ ಶರ್ಮ ನೀಡಿದ ಕಾರಣ ಏನು ಗೊತ್ತೇ??

ಆಸ್ಟ್ರೇಲಿಯಾ ಪಂದ್ಯದ ನಂತರ ಸೋಲಿಗೆ ಕಾರಣ ತಿಳಿಸಿ ತಪ್ಪನ್ನು ಒಪ್ಪಿಕೊಂಡ ರೋಹಿತ್ ಶರ್ಮ ನೀಡಿದ ಕಾರಣ ಏನು ಗೊತ್ತೇ??

ನಿನ್ನೆ ಮೊಹಾಲಿಯ ಪಿಸಿಎ ನಲ್ಲಿ ನಡೆದ ಭಾರತ ವರ್ಸಸ್ ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯದಲ್ಲಿ ಭಾರತ ನೀಡಿದ 208 ರನ್ ಗಳ ಟಾರ್ಗೆಟ್ ಅನ್ನು ಚೇಸ್ ಮಾಡಿದ ಆಸ್ಟ್ರೇಲಿಯಾ ತಂಡ 19.2 ಓವರ್ 211 ರನ್ ಗಳಿಸಿ ಮ್ಯಾಚ್ ಗೆದ್ದುಕೊಂಡಿತು. ಭಾರತ ತಂಡ 3-0 ಅಂತರದಲ್ಲಿ ಗೆಲುವು ಸಾಧಿಸಬೇಕು ಎಂದುಕೊಂಡಿತ್ತು. ಆದರೆ ಮೊದಲ ಪಂದ್ಯದಲ್ಲೇ ಈ ರೀತಿ ಆಗಿರುವುದು ಅಭಿಮಾನಿಗಳಲ್ಲಿ ಸಹ ಅಸಮಾಧಾನ ಮೂಡಿಸಿದ. ನಿನ್ನೆಯ ಪಂದ್ಯದಲ್ಲಿ ಸಹ ಭಾರತ ತಂಡಕ್ಕೆ ಕಾಡಿದ್ದು ಬೌಲಿಂಗ್ ಸಮಸ್ಯೆ. ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮವಾಗಿಯೇ ಆಡಿದ ಭಾರತ ತಂಡ 208 ರನ್ ಗಳಿಸಿತು, ಆದರೆ ಎರಡನೇ ಇನ್ನಿಂಗ್ಸ್ ಡೆತ್ ಓವರ್ ಗಳಲ್ಲಿ ಚಾಣಾಕ್ಷ ಬೌಲಿಂಗ್ ಮಾಡದ ಕಾರಣ ಸೋಲುವ ಹಾಗಾಯಿತು.

ನಿನ್ನೆಯ ಪಂದ್ಯ ಮುಗಿದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಮಾತನಾಡಿದ್ದು, ಬೌಲಿಂಗ್ ಬಗ್ಗೆ ಮಾತನಾಡಿದ್ದು ಹೀಗೆ.. “ನಾವು ಬೌಲಿಂಗ್ ಚೆನ್ನಾಗಿ ಮಾಡಿದ್ವಿ ಅಂತ ನನಗೆ ಅನ್ನಿಸುತ್ತಿಲ್ಲ. ಡಿಫೆಂಡ್ ಮಾಡಿಕೊಳ್ಳೋದಕ್ಕೆ 200 ಒಳ್ಳೆಯ ಸ್ಕೋರ್ ಆಗಿತ್ತು, ಆದರೆ ಫೀಲ್ಡ್ ನಲ್ಲಿ ನಾವು ಚಾನ್ಸ್ ತೆಗೆದುಕೊಳ್ಳಲಿಲ್ಲ. ನಮ್ಮ ಬ್ಯಾಟ್ಸ್ಮನ್ ಗಳ ಪ್ರದರ್ಶನ ಚೆನ್ನಾಗಿತ್ತು, ಆದರೆ ಬೌಲರ್ ಗಳ ಕಡೆಯಿಂದ ಹಿನ್ನಡೆ ಆಯಿತು. ನಾವು ಗಮನ ಕೊಡಬೇಕಾದ ಕೆಲವು ವಿಷಯಗಳಿವೆ. ತಪ್ಪಾಗಿದ್ದು ಎಲ್ಲಿ ಅನ್ನೋದನ್ನ ತಿಳಿದುಕೊಳ್ಳೋದಕ್ಕೆ ಇದೊಂದು ಒಳ್ಳೆಯ ಗೇಮ್ ಆಗಿತ್ತು. ಇದು ಚೆನ್ನಾಗಿ ಸ್ಕೋರ್ ಮಾಡುವ ಗೇಮ್ ಆಗಿದ್ದು, 200 ಸ್ಕೋರ್ ಮಾಡಿದರು ಸಹ ರಿಲ್ಯಾಕ್ಸ್ ಆಗಿರುವ ಹಾಗಿಲ್ಲ. ನಾವು ಒಂದು ಮಟ್ಟಕ್ಕೆ ವಿಕೆಟ್ಸ್ ಪಡೆದುಕೊಂಡೆವು, ಆದರೆ ಅವರು ಅದ್ಭುತವಾದ ಪ್ರದರ್ಶನ ನೀಡಿದರು.

ನಾನು ಚೇಂಜಿಂಗ್ ರೂಮ್ ನಲ್ಲಿ ಇದ್ದಿದ್ದರು ಸಹ, ಈ ಸ್ಕೋರ್ ಚೇಸ್ ಮಾಡಬಹುದು ಎಂದೇ ಅಂದುಕೊಳ್ಳುತ್ತಿದ್ದೆ. ಕೊನೆಯ 4 ಓವರ್ ಗಳಲ್ಲಿ 60 ರನ್ ಹೊಡೆಯಬಹುದು. ಎಕ್ಸ್ಟ್ರಾ ವಿಕೆಟ್ ತೆಗೆದುಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ, ಅದು ಟರ್ನಿಂಗ್ ಪಾಯಿಂಟ್ ಆಯಿತು. ನಾವು ಇನ್ನೊಂದು ವಿಕೆಟ್ ತೆಗೆದುಕೊಂಡಿದ್ದರೆ ಎಲ್ಲವೂ ಬೇರೆ ರೀತಿಯಲ್ಲೇ ಇರುತ್ತಿತ್ತು. ಪ್ರತಿ ಬಾರಿ 200 ಸ್ಕೋರ್ ಮಾಡೋದಕ್ಕೆ ಆಗೋದಿಲ್ಲ, ಚೆನ್ನಾಗಿ ಬ್ಯಾಟಿಂಗ್ ಮಾಡಿದರೆ ಮಾತ್ರ ಅದು ಸಾಧ್ಯ. ಹಾರ್ದಿಕ್ ಪಾಂಡ್ಯ ಅದ್ಭುತವಾಗಿ ಬ್ಯಾಟಿಂಗ್ ಮಾಡಿ, ಆ ಸ್ಥಾನಕ್ಕೆ ಕರೆದೊಯ್ಯಲು ಶ್ರಮಪಟ್ಟರು. ಮುಂದಿನ ಆಟದಲ್ಲಿ ಬೌಲಿಂಗ್ ಕಡೆಗೆ ಗಮನ ಹರಿಸಬೇಕು..” ಎಂದು ಹೇಳಿದ್ದಾರೆ ಕ್ಯಾಪ್ಟನ್ ರೋಹಿತ್ ಶರ್ಮಾ.