ಜಡೇಜಾ ಹೊರಹೋಗಿರಬಹುದು, ಆದರೆ ಜಡೇಜಾಗಿಂತ ಅಕ್ಷರ್ ಬೆಸ್ಟ್ ಎನ್ನಲು ಕಾರಣಗಳೇನು ಗೊತ್ತೇ?? ಅಕ್ಷರ್ ರವರು ಯಾವುದರಲ್ಲಿ ಬೆಸ್ಟ್ ಗೊತ್ತೇ??

ಜಡೇಜಾ ಹೊರಹೋಗಿರಬಹುದು, ಆದರೆ ಜಡೇಜಾಗಿಂತ ಅಕ್ಷರ್ ಬೆಸ್ಟ್ ಎನ್ನಲು ಕಾರಣಗಳೇನು ಗೊತ್ತೇ?? ಅಕ್ಷರ್ ರವರು ಯಾವುದರಲ್ಲಿ ಬೆಸ್ಟ್ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಸಿಸಿ ಟ್ರೋಫಿಗಳ ಬರ ಎದುರಿಸುತ್ತಿರುವ ಭಾರತ ತಂಡ ಶತಾಯಗತಾಯ ಈ ವರ್ಷದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಗೆಲ್ಲಲೇಬೇಕು ಎಂದು ಪಣತೊಟ್ಟಿದೆ. ಈಗಾಗಲೇ ತಂಡವನ್ನು ಸಹ ಪ್ರಕಟಿಸಲಾಗಿದೆ. ಆಲ್ ರೌಂಡರ್ ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದಾರೆ. ರವೀಂದ್ರ ಜಡೇಜಾ ಗಿಂತ ಅಕ್ಷರ್ ಪಟೇಲ್ ರವರೇ ಉತ್ತಮ ಆಲ್ ರೌಂಡರ್ ಎಂಬ ಚರ್ಚೆ ಜೋರಾಗಿದೆ. ಬನ್ನಿ ಯಾವ ಕಾರಣಗಳಿಗಾಗಿ ಅಕ್ಷರ್ ಪಟೇಲ್ ಉತ್ತಮ ಎಂಬುದನ್ನು ನೋಡೋಣ ಬನ್ನಿ.

1.ಪವರ್ ಪ್ಲೆ ನಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ: ರವೀಂದ್ರ ಜಡೇಜಾ ರವರು ಎಡಗೈ ಸ್ಪಿನ್ನರ್ ಆಗಿದ್ದರೂ ಅವರು ಪವರ್ ಪ್ಲೇ ನಲ್ಲಿ ಬೌಲಿಂಗ್ ಮಾಡುವ ಕೌಶಲ್ಯವನ್ನು ಹೊಂದಿರಲಿಲ್ಲ. ಆದರೇ ಅಕ್ಷರ್ ಪಟೇಲ್ ಪವರ್ ಪ್ಲೇ ನಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಲೈನ್ ಎಂಡ್ ಲೆಂಗ್ತ್ ಮೇಲೆ ಉತ್ತಮ ಹಿಡಿತ ಹೊಂದಿದ್ದಾರೆ.

2.ಏಡಗೈ ಮತ್ತು ಬಲಗೈ ಬ್ಯಾಟ್ಸ್ಮನ್ ಇಬ್ಬರಿಗೂ ಪರಿಣಾಮವಾಗಿ ಬೌಲ್ ಮಾಡುತ್ತಾರೆ : ಜಡೇಜಾ ಕೇವಲ ಬಲಗೈ ಬ್ಯಾಟ್ಸ್ಮನ್ ಗಳ ವಿರುದ್ಧ ಪರಿಣಾಮಕಾರಿಯಾಗಿ ಬೌಲ್ ಮಾಡುತ್ತಿದ್ದರು. ಆದರೇ ಏಡಗೈ ಬ್ಯಾಟ್ಸ್ಮನ್ ಎದುರು ದುಬಾರಿಯಾಗುತ್ತಿದ್ದರು. ಆದರೇ ಅಕ್ಷರ್ ಪಟೇಲ್ ಎಡಗೈ ಹಾಗೂ ಬಲಗೈ ಬ್ಯಾಟ್ಸ್ಮನ್ ಎದುರು ಉತ್ತಮ ಬೌಲಿಂಗ್ ಮಾಡುತ್ತಾರೆ.

3.ಸದ್ಯ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್ ನಲ್ಲಿದ್ದಾರೆ: ಅಕ್ಷರ್ ಪಟೇಲ್ ರವರ ಬೌಲಿಂಗ್ ಫಾರ್ಮ್ ಜೊತೆ ಪ್ರಸ್ತುತ ಬ್ಯಾಟಿಂಗ್ ನಲ್ಲಿಯೂ ಸಹ ಉತ್ತಮ ಲಯದಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಹಲವಾರು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಗಳನ್ನು ಆಡಿದ್ದರು. ಅದಲ್ಲದೇ ಸ್ಲಾಗ್ ಓವರ್ ಗಳಲ್ಲಿ ಸಿಕ್ಸರ್ ಸಿಡಿಸುವ ಸಾಮರ್ಥ್ಯವನ್ನು ಸಹ ಹೊಂದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.