ವಿಶ್ವಕಪ್ ಟೂರ್ನಿಗೆ ಹನ್ನೊಂದರ ಟೀಮ್ ಅನ್ನು ಘೋಷಣೆ ಮಾಡಿದ ಇರ್ಫಾನ್ ಪಠಾಣ್, ತಂಡದ ಸಂಯೋಜನೆ ಹೀಗೆ ಇದ್ದರೇ ಕಪ್ ನಮ್ದೇನಾ??

ವಿಶ್ವಕಪ್ ಟೂರ್ನಿಗೆ ಹನ್ನೊಂದರ ಟೀಮ್ ಅನ್ನು ಘೋಷಣೆ ಮಾಡಿದ ಇರ್ಫಾನ್ ಪಠಾಣ್, ತಂಡದ ಸಂಯೋಜನೆ ಹೀಗೆ ಇದ್ದರೇ ಕಪ್ ನಮ್ದೇನಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲಾ ತಿಳಿದಂತೆ ಟಿ 20 ವಿಶ್ವಕಪ್ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಕಪ್ ಮೇಲೆ ಜಗತ್ತಿನ ಎಲ್ಲಾ ತಂಡಗಳು ಕಣ್ಣಿಟ್ಟಿವೆ. ಭಾರತ ಸಹ ಹದಿನೈದು ಸದಸ್ಯರ ತಂಡವನ್ನು ಪ್ರಕಟಿಸಿದೆ. ಭಾರತ ತಂಡದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಆಡುವ ಹನ್ನೊಂದರ ಬಳಗವನ್ನು ರಚಿಸಿದ್ದು, ಆ ತಂಡಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಬನ್ನಿ ಇರ್ಫಾನ್ ಪಠಾಣ್ ರಚಿಸಿರುವ ತಂಡದಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಎಂಬುದನ್ನು ತಿಳಿಯೋಣ.

ತಂಡದ ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಕೆ.ಎಲ್.ರಾಹುಲ್ ಆಡಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್, ಐದನೇ ಕ್ರಮಾಂಕದಲ್ಲಿ ದೀಪಕ್ ಹೂಡಾ, ಆರನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಆಡಲಿದ್ದಾರೆ. ಏಳನೇ ಕ್ರಮಾಂಕದಲ್ಲಿ ವಿಕೇಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತಿಕ್, ಎಂಟನೇ ಕ್ರಮಾಂಕದಲ್ಲಿ ಹರ್ಷಲ್ ಪಟೇಲ್, ಒಂಬತ್ತನೇ ಕ್ರಮಾಂಕದಲ್ಲಿ ಭುವನೇಶ್ವರ್ ಕುಮಾರ್, ಹತ್ತನೇ ಕ್ರಮಾಂಕದಲ್ಲಿ ಜಸಪ್ರಿತ್ ಬುಮ್ರಾ ಹಾಗೂ ಹನ್ನೊಂದನೇ ಕ್ರಮಾಂಕದಲ್ಲಿ ಯುಜವೇಂದ್ರ ಚಾಹಲ್ ಆಡಲಿದ್ದಾರೆ.

ಈ ತಂಡದ ಎಲ್ಲರೂ ಬಲಗೈ ಬ್ಯಾಟ್ಸ್ಮನ್ ಗಳು ಎಂಬ ಕಾರಣಕ್ಕೆ ಈ ತಂಡದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ತಂಡದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ಒಟ್ಟಾರೆಯಾಗಿ ತಂಡ ಇಂತಿದೆ: ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸಪ್ರಿತ್ ಬುಮ್ರಾ, ಯುಜವೇಂದ್ರ ಚಾಹಲ್.