ಕೇವಲ 5 ನಿಮಿಷದಲ್ಲಿ 10 ಸಾವಿರದಿಂದ ಬರೋಬ್ಬರಿ 1 ಲಕ್ಷದ ವರೆಗೂ ಸುಲಭ ಸಾಲ ಪಡೆಯುವುದು ಹೇಗೆ ಗೊತ್ತೇ?? ನಿಮಗೂ ಲೋನ್ ಬೇಕಾ??

ಕೇವಲ 5 ನಿಮಿಷದಲ್ಲಿ 10 ಸಾವಿರದಿಂದ ಬರೋಬ್ಬರಿ 1 ಲಕ್ಷದ ವರೆಗೂ ಸುಲಭ ಸಾಲ ಪಡೆಯುವುದು ಹೇಗೆ ಗೊತ್ತೇ?? ನಿಮಗೂ ಲೋನ್ ಬೇಕಾ??

ಸ್ಯಾಚೆಟ್ ಸಾಲಗಳ ಬಗ್ಗೆ ನಿಮಗೆ ಗೊತ್ತಿದೆಯೇ? ಈ ಸಾಲ ಬಹಳ ಕಡಿಮೆ ಸಮಯದಲ್ಲಿ ಸಿಗುತ್ತದೆ. ಸಾಲದ ಮೊತ್ತ ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಇದು ನ್ಯಾನೋ ಕ್ರೆಡಿಟ್ ಅಥವಾ ಬಿಟ್ ಗಾತ್ರಕ್ಕೆ ಸೇರಿದ ಸಾಲ ಆಗಿದೆ. 10 ಸಾವಿರದಿಂದ 1 ಲಕ್ಷ ರೂಪಾಯಿವರೆಗೂ ಈ ರೀತಿಯ ಸಾಲ ಸಿಗುತ್ತದೆ. ಪೇಟೆಲ್ ನ ಸಿಇಒ ಆಗಿರುವ ವಿಕಾಸ್ ಗರ್ಗ್ ಅವರು ಅಧಿಕಾರದಲ್ಲಿ ಇರುವ ಸಮಯ ಇನ್ನು 7 ರಿಂದ 12 ತಿಂಗಳುಗಳು. ಈ ಸಾಲದ ಪ್ರಕ್ರಿಯೆಗಳು ನಿರಂತರವಾಗಿ ನಡೆಯಲಿದೆ.

ವಿಕಾಸ್ ಅವರು ಹೇಳಿರುವ ಪ್ರಕಾರ, ಫಿನ್ ಟೆಕ್ ಸಂಸ್ಥೆಯು ಹೊಸ ತಂತ್ರಜ್ಞಾನವನ್ನು ಬಳಸುತ್ತಿರುವ ಕಾರಣ ಡಾಕ್ಯುಮೆಂಟೇಶನ್ ಗಳು ಬಹಳ ಬೇಗ ಅಥವಾ ಸುಲಭವಾಗಿ ಆಗುತ್ತದೆ. ಇದರಿಂದಾಗಿ ಸಾಲ ಕೂಡ ಬಹಳ ಬೇಗ ಸಿಗುತ್ತದೆ ಎಂದು ವಿಕಾಸ್ ಅವರು ತಿಳಿಸಿದ್ದಾರೆ. ಈ ಸಾಲವನ್ನು 5 ರಿಂದ 10 ನಿಮಿಷಗಳಲ್ಲಿ ಪಡೆಯಬಹುದು. ಮೊಬೈಲ್ ನಲ್ಲಿ ಅಪ್ಲಿಕೇಶನ್ ಮೂಲಕವೇ ಸಾಲ ಪಡೆಯಬಹುದ, ಇದಕ್ಕೆ ಅರ್ಜಿ ಸಲ್ಲಿಸುವ ವಿಧಾನ ಸಹ ಬಹಳ ಸುಲಭವಾಗಿದೆ ಎಂದು ವಿಕಾಸ್ ಅವರು ಹೇಳಿದ್ದಾರೆ. ಕಡಿಮೆ ಡಾಕ್ಯುಮೆಂಟ್ ಗಳನ್ನು ನೀಡಿ ನಿಮಗೆ ಸಾಲ ಸಿಗುತ್ತದೆ ಎಂದು ವಿ.ವಿ.ಎಫ್.ಐ ಇಂಡಿಯಾ ಫೈನಾನ್ಸ್ ಸಂಸ್ಥಾಪಕ ಹಾಗೂ ಸಿಇಒ ಆಗಿರುವ ಅನಿಲ್ ಮಣಿಪಾಲ್ ಅವರು ತಿಳಿಸಿದ್ದಾರೆ.

ನಿಮ್ಮ ತಿಂಗಳ ಆದಾಯ ಅಥವಾ ನಿಮ್ಮ ಸ್ಯಾಲರಿ ಅಕೌಂಟ್ ನ ಆಧಾರದಲ್ಲಿ Fintech ಸಂಸ್ಥೆ ಈ ಸಾಲವನ್ನು ನಿಮಗೆ ನೀಡುತ್ತದೆ. ನಿಮಗೆ ತಕ್ಷಣಕ್ಕೆ ಇರುವ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಈ ಸಾಲ ನೀಡಲಾಗುತ್ತದೆ. ಮೆಡಿಕಲ್ ಎಮರ್ಜೆನ್ಸಿ, ತಕ್ಷಣವೇ ಹಣ ಪಾವತಿ ಮಾಡಬೇಕಾದ ಪರಿಸ್ಥಿತಿ ಇದ್ದಾಗ ಈ ಸಾಲ ಪಡೆದುಕೊಳ್ಳಬಹುದು. ತಿಂಗಳ ಮಧ್ಯದಲ್ಲಿ ದಿಢೀರ್ ಎಂದು ದುಡ್ಡಿನ ಅಗತ್ಯ ಬಂದಾಗ ಈ ಸಾಲದ ಪ್ರಯೋಜನ ಪಡೆದುಕೊಳ್ಳುವುದು ಒಳ್ಳೆಯದು, ಯಾರನ್ನು ಕೇಳದೆ ಇದರ ಮೂಲಕ ಸಾಲ ಪಡೆಯಬಹುದು. ಸಂಬಳ ಬಂದ ಬಳಿಕ ಹಣ ಪಾವತಿ ಮಾಡಬಹುದು. ಆದರೆ ಸ್ಯಾಚೆಟ್ ಸಾಲದಲ್ಲಿ ಕೆಲವು ಅನಾನುಕೂಲತೆ ಸಹ ಇದೆ, ಇದರಲ್ಲಿ ಬಡ್ಡಿದರ ಹೆಚ್ಚಾಗಿರುತ್ತದೆ, ದೈನಂದಿನ ಬಡ್ಡಿ ಇರುತ್ತದೆ. ವಾರ್ಷಿಕ ಬಡ್ಡಿದರ 400 ಪ್ರತಿಶತದಷ್ಟು ಇರಬಹುದು.

ಅಷ್ಟೇ ಅಲ್ಲದೆ ಈಗ ತಂತ್ರಜ್ಞಾನ ಸಹ ಹೆಚ್ಚಾಗಿರುವುದರಿಂದ, ಸಾಲ ಕೊಡುತ್ತೇವೆ ಎಂದು ಬಂದು, ಮೋಸ ಮಾಡುವಂಥ ಹಲವು ಫೇಕ್ ಅಪ್ಲಿಕೇಶನ್ ಗಳು ಸಹ ಬಂದಿದೆ, ಹಾಗಾಗಿ ಸಾಲ ಪಡೆಯುವ ಅಪ್ಲಿಕೇಶನ್ ಅನ್ನು ಬಹಳ ಜಾಗರೂಕತೆಯಿಂದ ಇನ್ಸ್ಟಾಲ್ ಮಾಡಬೇಕು. ಫೇಕ್ ಅಪ್ಲಿಕೇಶನ್ ಯಾವುದು ಎಂದು ತಿಳಿದುಕೊಳ್ಳಲು ಆರ್.ಬಿ.ಐ ಬಿಳಿ ಪಟ್ಟಿಯನ್ನು ಸಿದ್ಧ ಮಾಡುತ್ತಿದೆ. ಇದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮಾತ್ರ ಸಿಗುತ್ತದೆ. ಏನೇ ಇದ್ದರೂ, ಆರ್.ಬಿ.ಐ ಗೆ ನೋಂದಣಿ ಆಗಿರುವ ಕಡೆಯಿಂದ ಸಾಲ ತೆಗೆದುಕೊಳ್ಳುವುದು ಒಳ್ಳೆಯದು. ಅಪ್ಲಿಕೇಶನ್ ಮೂಲಕ ಸಾಲ ಪಡೆಯುತ್ತಿದ್ದೀರಾ ಎಂದು ಪರಿಶೀಲನೆ ಮಾಡುವುದು ಮೊದಲ ವಿಷಯ ಆಗಿದೆ.