ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಏಷ್ಯಾ ಕಪ್ ನಲ್ಲಿ ಕಳಪೆ ಆಟವಾಡಿ ವಿಶ್ವಕಪ್ ಸ್ಥಾನ ಕಳೆದುಕೊಂಡ ಮೂವರು ಆಟಗಾರರು ಯಾರ್ಯಾರು ಗೊತ್ತೇ?? ಇವರು ಮತ್ತೆ ವಾಪಸ್ಸು ಬರುವುದೇ ಅನುಮಾನ.

45

Get real time updates directly on you device, subscribe now.

ಸೆಪ್ಟೆಂಬರ್ 12ರಂದು ಬಿಸಿಸಿಐ ಈ ವರ್ಷ ಟಿ20 ವಿಶ್ವಕಪ್ ನಲ್ಲಿ ಸ್ಥಾನ ಪಡೆದಿರುವ 15 ಸದಸ್ಯರು ಹಾಗೂ 4 ಹೆಚ್ಚುವರಿ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರೋಹಿತ್ ಶರ್ಮಾ ಅವರು ಈ ತಂಡವನ್ನು ಮುನ್ನಡೆಸಲಿದ್ದಾರೆ. ಜಸ್ಪ್ರೀತ್ ಬುಮ್ರ ಹಾಗೂ ಹರ್ಷಲ್ ಪಟೇಲ್ ಅವರು ಕಂಬ್ಯಾಕ್ ಮಾಡಿದ್ದಾರೆ. ಕಳೆದ ವರ್ಷ ವಿಶ್ವಕಪ್ ನಲ್ಲಿದ್ದ ಮೊಹಮ್ಮದ್ ಶಮಿ ಅವರು ಹೆಚ್ಚುವರಿ ಆಟಗಾರರ ಲಿಸ್ಟ್ ನಲ್ಲಿದ್ದಾರೆ. ಹಾಗೆಯೇ ಬಹುನಿರೀಕ್ಷೆ ಇಟ್ಟುಕೊಂಡಿದ್ದ ಸಂಜು ಸ್ಯಾಮ್ಸನ್ ಅವರು ಈ ಬಾರಿ ತಂಡಕ್ಕೆ ಆಯ್ಕೆಯಾಗಿಲ್ಲ. ಆಯ್ಕೆ ಆಗಿರುವವರನ್ನು ಹೊರತು ಪಡಿಸಿ, ಏಷ್ಯಾಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ 3 ಆಟಗಾರರು ಟೀಮ್ ಇಂಡಿಯಾ ಸ್ಕ್ವಾಡ್ ನಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಇವರು ಮತ್ತೆ ಭಾರತ ತಂಡಕ್ಕೆ ಬರುವುದೇ ಅನುಮಾನ ಎನ್ನಲಾಗುತ್ತಿದೆ. ಆ ಮೂವರು ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ಆವೇಶ್ ಖಾನ್ :- ಆವೇಶ್ ಖಾನ್ ಅವರು ಭಾರತ ತಂಡದಲ್ಲಿದ್ದ ಮೂವರು ವೇಗಿಗಳಲ್ಲಿ ಒಬ್ಬರಾಗಿದ್ದರು. ಏಷ್ಯಾಕಪ್ ನಲ್ಲಿ ಇವರ ಮೇಲೆ ಜವಾಬ್ದಾರಿ ಇತ್ತು. ಏಷ್ಯಾಕಪ್ ನ ಮೊದಲ ಎರಡು ಪಂದ್ಯಗಳಲ್ಲಿ ತಕ್ಕ ಮಟ್ಟಿಗೆ ಪ್ರದರ್ಶನ ನೀಡಿದರು ಸಹ, ಸೂಪರ್ 4 ಹಂತದ ಎಲ್ಲಾ ಪಂದ್ಯಗಳಲ್ಲಿ ಸಹ ಆವೇಶ್ ಖಾನ್ ಅವರು ಬಹಳ ದುಬಾರಿಯಾದರು. ಪಾಕಿಸ್ತಾನ್ ಹಾಗೂ ಶ್ರೀಲಂಕಾ ಎರಡು ತಂಡದ ವಿರುದ್ಧದ ಪಂದ್ಯದಲ್ಲಿ 44 ರನ್ ಹಾಗೂ 54 ರನ್ ಗಳನ್ನು ಬಿಟ್ಟುಕೊಟ್ಟಿದ್ದರು. ಇದರಿಂದಾಗಿ ಇನ್ನುಳಿದ ಇಬ್ಬರು ಬೌಲರ್ ಗಳ ಮೇಲೆ ಒತ್ತಡ ಹೆಚ್ಚಾಯಿತು. ಇದರಿಂದಾಗಿ ಭಾರತ ತಂಡ ಸೂಪರ್ 4 ಹಂತದ ಮ್ಯಾಚ್ ಗಳನ್ನು ಸೋತು, ಮನೆಗೆ ಬರುವ ಹಾಗಾಯಿತು. ಹಾಗಾಗಿ ಆವೇಶ್ ಖಾನ್ ಅವರು ಟಿ20 ವಿಶ್ವಕಪ್ ಗೆ ಆಯ್ಕೆಯಾಗಿಲ್ಲ.

ರವಿ ಬಿಶ್ನೋಯ್ :- ರವಿ ಬಿಶ್ನೋಯ್ ಅವರು ಕಳಪೆ ಪ್ರದರ್ಶನ ನೀಡಿದ್ದರು ಎನ್ನುವುದರ ಜೊತೆಗೆ, ಭಾರತ ತಂಡ ಸಂಯೋಜನೆ ಆಗಿರುವ ರೀತಿಯಿಂದ ರವಿ ಬಿಶ್ನೋಯ್ ಅವರು ಆಯ್ಕೆಯಾಗಿಲ್ಲ. ಪ್ರಸ್ತುತ ಭಾರತ ತಂಡದಿಂದ ರವೀಂದ್ರ ಜಡೇಜಾ ಅವರು ಗಾಯದ ಕಾರಣ ಹೊರಗುಳಿದಿರುವುದರಿಂದ ಅವರ ಬದಲಾಗಿ ಅಕ್ಷರ್ ಪಟೇಲ್ ತಂಡದಲ್ಲಿದ್ದಾರೆ. ಇನ್ನು ರವಿಚಂದ್ರನ್ ಅಶ್ವಿನ್ ಅವರು ಸ್ಪೆಶಾಲಿಸ್ಟ್ ಆಫ್ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ. ಚಾಹಲ್ ಅವರು ಸ್ಪೆಶಲಿಸ್ಟ್ ಲೆಗ್ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ. ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ 1 ವಿಕೆಟ್ ಪಡೆದು, 27 ರನ್ ಬಿಟ್ಟುಕೊಟ್ಟರು. ಈ ಕಾರಣ ರವಿ ಬಿಶ್ನೋಯ್ ಅವರು ವಿಶ್ವಕಪ್ ಗೆ ಆಯ್ಕೆಯಾಗಿ, ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಲಿಲ್ಲ.

ದೀಪಕ್ ಚಹರ್ :- ಬಹಳ ಸಮಯದ ಇಂಜುರಿ ಇಂದ ದೀಪಕ್ ಚಹರ್ ಅವರು ಭಾರತ ತಂಡಕ್ಕೆ ಮತ್ತೆ ಕಂಬ್ಯಾಕ್ ಮಾಡಿದರು. ಇಂಜುರಿ ಕಾರಣದಿಂದ ಐಪಿಎಲ್ ಮತ್ತು ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳಿಂದ ಹೊರಗೆ ಉಳಿಯುವ ಹಾಗೆ ಆಯಿತು. ಏಷ್ಯಾಕಪ್ ಗೆ ಸೆಲೆಕ್ಟ್ ಆದ ದೀಪಕ್ ಚಹರ್ ಅವರು ಅಫ್ಗಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್ ಅನ್ನು ಸಹ ಪಡೆಯದ ಕಾರಣ ಬಿಸಿಸಿಐ ಇವರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ.

Get real time updates directly on you device, subscribe now.