ತಮ್ಮ ಕೊನೆಯ ಟಿ 20 ವಿಶ್ವಕಪ್ ಆಡುತ್ತಿರುವ ಮೂವರು ಸ್ಟಾರ್ ಆಟಗಾರರು ಯಾರ್ಯಾರು ಗೊತ್ತೇ?? ಇವರಿಗೆಲ್ಲ ಕೊನೆಯ ಟಿ ೨೦ ವಿಶ್ವಕಪ್.

ತಮ್ಮ ಕೊನೆಯ ಟಿ 20 ವಿಶ್ವಕಪ್ ಆಡುತ್ತಿರುವ ಮೂವರು ಸ್ಟಾರ್ ಆಟಗಾರರು ಯಾರ್ಯಾರು ಗೊತ್ತೇ?? ಇವರಿಗೆಲ್ಲ ಕೊನೆಯ ಟಿ ೨೦ ವಿಶ್ವಕಪ್.

ಮುಂದಿನ ತಿಂಗಳು ಟಿ20 ವಿಶ್ವಕಪ್ ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ಆರಂಭವಾಗುತ್ತಿದೆ. ವಿಶ್ವಕಪ್ ನಲ್ಲಿ ಆಡುವ ತಂಡದ ಬಳಗ ಕೂಡ ಸೆಲೆಕ್ಟ್ ಆಗಿದೆ. ಟಿ20 ವಿಶ್ವಕಪ್ ಶುರುವಾದ ಮೊದಲ ವರ್ಷ ಭಾರತ ತಂಡ ಕಪ್ ಗೆದ್ದುಕೊಂಡಿತ್ತು, ಆದರೆ ಆ ಪಂದ್ಯದ ಬಳಿಕ ಭಾರತ ತಂಡ ಇನ್ನೊಮ್ಮೆ ಕಪ್ ಗೆಲ್ಲಲು ಸಾಧ್ಯವಾಗಿಲ್ಲ, ಹಾಗಾಗಿ ಈ ವರ್ಷ ಭಾರತ ವಿಶ್ವಕಪ್ ಗೆಲ್ಲಬೇಕು ಎನ್ನುವ ನಿರ್ಧಾರದಿಂದ ಕಣಕ್ಕೆ ಇಳಿಯುತ್ತಿದೆ. ಹಿರಿಯ ಆಟಗಾರರು ಮತ್ತು ಯುವ ಆಟಗಾರರು ಎಲ್ಲರನ್ನು ಸಂಯೋಜಿಸಿರುವ ಭಾರತ ತಂಡ ಈ ಬಾರಿ ವಿಶ್ವಕಪ್ ನಲ್ಲಿ ಕಣಕ್ಕೆ ಇಳಿಯಲಿದೆ. ಈ ವರ್ಷದ ವಿಶ್ವಕಪ್ ಪಂದ್ಯಗಳು ಭಾರತದ ಕೆಲವು ಆಟಗಾರರಿಗೆ ಕೊನೆಯ ವಿಶ್ವಕಪ್ ಆದರೂ ಆಗಬಹಹುದು. ಆ ಮೂವರು ಆಟಗಾರರ ಬಗ್ಗೆ ತಿಳಿಸುತ್ತೇವೆ ನೋಡಿ..

ದಿನೇಶ್ ಕಾರ್ತಿಕ್ :- ದಿನೇಶ್ ಕಾರ್ತಿಕ್ ಅವರು ಮತ್ತೊಮ್ಮೆ ಭಾರತ ತಂಡಕ್ಕೆ ಮರಳಿ ಬರುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ. 2019ರಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದ ಬಳಿಕ ದಿನೇಶ್ ಕಾರ್ತಿಕ್ ಅವರು ನ್ಯಾಷನಲ್ ಟೀಮ್ ಇಂದ ಹೊರಾಗಿದ್ದರು. ಆದರೆ ಈ ವರ್ಷ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡದ ಪರವಾಗಿ ಅದ್ಭುತವಾದ ಪ್ರದರ್ಶನ ನೀಡಿದ ಡಿಕೆ ಅವರು 183 ಸ್ಟ್ರೈಕ್ ರೇಟ್ ನಲ್ಲಿ 330 ರನ್ ಗಳಿಸಿ, ಭಾರತ ತಂಡಕ್ಕೂ ಆಯ್ಕೆಯಾದರು, ಭಾರತದ ತಂಡದ ಸ್ಪೆಶಲಿಸ್ಟ್ ಫಿನಿಷರ್ ಆಗಿರುವ ದಿನೇಶ್ ಕಾರ್ತಿಕ್ ಅವರು ಈಗ ವಿಶ್ವಕಪ್ ತಂಡಕ್ಕೂ ಆಯ್ಕೆಯಾಗಿದ್ದಾರೆ. ಈಗ ಕಾರ್ತಿಕ್ ಅವರಿಗೆ 37 ವರ್ಷ, ಮುಂದಿನ ವಿಶ್ವಕಪ್ ವೇಳೆಗ ಅವರಿಗೆ 39 ವರ್ಷ ಆಗುವ ಕಾರಣ, ಈ ವರ್ಷ ಈ ಅವರ ಕೊನೆಯ ವಿಶ್ವಕಪ್ ಆಗಬಹುದು.

ರವಿಚಂದ್ರನ್ ಅಶ್ವಿನ್ :- ಅಶ್ವಿನ್ ಅವರು ಕಳೆದ ವರ್ಷ ಯುಎಇ ನಲ್ಲಿ ನಡೆದ ಟಿ20 ವಿಶ್ವಕಪ್ ಮೂಲಕ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದ್ದರು .ಅಲ್ಲಿಂದ ಆಡಿದ 10 ಪಂದ್ಯಗಳಲ್ಲಿ 14 ವಿಕೆಟ್ಸ್ ಪಡೆದು, 6.1 ರ ಸ್ಟ್ರೈಕ್ ರೇಟ್ ನಲ್ಲಿ ಬೌಲಿಂಗ್ ಮಾಡಿದರು ಅಶ್ವಿನ್. ಬ್ಯಾಟಿಂಗ್ ನಲ್ಲಿ ಸಹ ಒಳ್ಳೆಯ ಸ್ಕೋರ್ ಮಾಡುವ ಸಾಮರ್ಥ್ಯವನ್ನು ಅಶ್ವಿನ್ ಅವರು ಹೊಂದಿದ್ದಾರೆ. ಆದರೆ 2024ರಲ್ಲಿ ನಡೆಯುವ ಮುಂದಿನ ಟಿ20 ವಿಶ್ವಕಪ್ ಸಮಯಕ್ಕೆ ಭಾರತ ತಂಡವು ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆಮಾಡುವ ಸಾಧ್ಯತೆ ಹೆಚ್ಚಿರುವ ಕಾರಣ, ಅಶ್ವಿನ್ ಅವರಿಗೆ ಇದು ಕೊನೆಯ ವಿಶ್ವಕಪ್ ಆಗಬಹುದು.

ರೋಹಿತ್ ಶರ್ಮಾ :- 2021ರ ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಕ್ಯಾಪ್ಟನ್ ಆಗಿದ್ದ ವಿರಾಟ್ ಕೋಹ್ಲಿ ಅವರು ಕ್ಯಾಪ್ಟನ್ಸಿ ಇಂದ ಹೊರಬಂದ ಬಳಿಕ ರೋಹಿತ್ ಶರ್ಮಾ ಅವರಿಗೆ ಕ್ಯಾಪ್ಟನ್ಸಿ ನೀಡಲಾಯಿತು. ಪ್ರಸ್ತುತ ರೋಹಿತ್ ಶರ್ಮಾ ಅವರು ಮೂರು ಮಾದರಿಯ ಪಂದ್ಯಗಳಿಗೂ ಕ್ಯಾಪ್ಟನ್ ಆಗಿದ್ದಾರೆ. ಈಗ ರೋಹಿತ್ ಶರ್ಮಾ ಅವರಿಗೆ 35 ವರ್ಷ, 2024ರ ಮುಂದಿನ ವಿಶ್ವಕಪ್ ಪಂದ್ಯದ ವೇಳೆಗೆ ಅವರಿಗೆ 37 ವರ್ಷ ದಾಟುತ್ತದೆ, ಆಗ ರೋಹಿತ್ ಅವರು ಟಿ20 ತಂಡದಿಂದ ನಿವೃತ್ತಿ ಪಡೆಯುವ ಸಾಧ್ಯತೆ ಇದೆ. ಹಾಗೆಯೇ ಟಿ20 ಪಂದ್ಯಗಳಿಂದಲು ನಿವೃತ್ತಿ ಪಡೆದು ಟೆಸ್ಟ್ ಕ್ರಿಕೆಟ್ ಮೇಲೆ ಗಮನ ಹರಿಸಬಹುದು, ಈ ನಿರ್ಧಾರ ತೆಗೆದುಕೊಂಡರೆ, ರೋಹಿತ್ ಅವರಿಗೆ ಇದು ಕೊನೆಯ ಪಂದ್ಯ ಆಗಲಿದೆ.