ವಿಶ್ವಕಪ್ ನಲ್ಲಿ ಫಿನಿಶರ್ ಸ್ಥಾನಕ್ಕೆ ಬಾರಿ ಪೈಪೋಟಿ ನಡೆಯುತ್ತಿರುವಾಗ ಬೆಸ್ಟ್ ಫಿನಿಶರ್ ಅನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ. ಯಾರು ಗೊತ್ತೇ? ದಿನೇಶ್ ಅಲ್ಲ, ಹಾರ್ಧಿಕ್ ಅಲ್ಲ, ಮತ್ಯಾರು ಗೊತ್ತೇ?
ವಿಶ್ವಕಪ್ ನಲ್ಲಿ ಫಿನಿಶರ್ ಸ್ಥಾನಕ್ಕೆ ಬಾರಿ ಪೈಪೋಟಿ ನಡೆಯುತ್ತಿರುವಾಗ ಬೆಸ್ಟ್ ಫಿನಿಶರ್ ಅನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ. ಯಾರು ಗೊತ್ತೇ? ದಿನೇಶ್ ಅಲ್ಲ, ಹಾರ್ಧಿಕ್ ಅಲ್ಲ, ಮತ್ಯಾರು ಗೊತ್ತೇ?
ಅಕ್ಟೋಬರ್ 16 ರಿಂದ ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ನಲ್ಲಿ ಪಂದ್ಯಗಳು ನಡೆಯಲಿದ್ದು, ಭಾರತ ತಂಡವು ತನ್ನ ಮೊದಲ ಪಂದ್ಯ ಆಡಲಿರುವುದು ಅಕ್ಟೋಬರ್ 23ರಂದು, ಪಾಕಿಸ್ತಾನ್ ವಿರುದ್ಧ ಆಗಿದೆ. ಏಷ್ಯಾಕಪ್ ನಲ್ಲಿ ನಿರೀಕ್ಷೆಯ ಮಟ್ಟದಲ್ಲಿ ಭಾರತ ತಂಡದ ಪ್ರದರ್ಶನ ಇರದ ಕಾರಣ, ವಿಶ್ವಕಪ್ ನಲ್ಲಿ ಉತ್ತಮವಾದ ಪ್ರದರ್ಶನ ನೀಡಲೇಬೇಕು ಎನ್ನುವ ಪರಿಸ್ಥಿತಿ ಇದೆ. ಸೆಪ್ಟೆಂಬರ್ 12 ರಂದು ಬಿಸಿಸಿಐ ಭಾರತ ತಂಡಕ್ಕಾಗಿ ವಿಶ್ವಕಪ್ ನಲ್ಲಿ ಆಡುವ 15 ಸದಸ್ಯರು ಹಾಗೂ 4 ಹೆಚ್ಚುವರಿ ಸದಸ್ಯರ ಪಟ್ಟಿಯನ್ನು ಘೋಷಣೆ ಮಾಡಿ. ಈ ಆಟಗಾರರ ಪಟ್ಟಿ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದ್ದು, ಇದೀಗ ಭಾರತದ ಮಾಜಿ ಆಟಗಾರ, ದಿಲೀಪ್ ವೆಂಗ್ ಸರ್ಕರ ಅವರು ಭಾರತ ತಂಡಕ್ಕೆ ಈ ಆಟಗಾರ ಉತ್ತಮ ಫಿನಿಷರ್ ಆಗಬಹುದು ಎಂದು ಹೇಳಿದ್ದಾರೆ.
ಈಗಾಗಲೇ ಭಾರತ ತಂಡದಲ್ಲಿ ಫಿನಿಷರ್ ಸ್ತಾನಕ್ಕೆ ಬಹಳ ಪೈಪೋಟಿ ಇದೆ. ಹಾರ್ದಿಕ್ ಪಾಂಡ್ಯ ಅವರು, ದಿನೇಶ್ ಕಾರ್ತಿಕ್ ಅವರು ಫಿನಿಷರ್ ಸ್ಥಾನದಲ್ಲಿದ್ದಾರೆ, ಹಾಗೆಯೇ ರಿಷಬ್ ಪಂತ್ ಅವರಿಗೂ ಈ ಸ್ಥಾನ ನೀಡಲಾಗಿತ್ತು, ಆದರೆ ಇದೀಗ ದಿಲೀಪ್ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಫಿನಿಷರ್ ಸ್ಥಾನಕ್ಕೆ ಮತ್ತೊಬ್ಬ ಆಟಗಾರನ ಹೆಸರನ್ನು ಸೂಚಿಸಿದ್ದಾರೆ. ಫಿನಿಷರ್ ಬಗ್ಗೆ ದಿಲೀಪ್ ಅವರು ಹೇಳಿದ್ದು ಹೀಗೆ, “ಯಾವ ಆಟಗಾರ ಯಾವ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು ಎನ್ನುವುದನ್ನು ನಾನು ಹೇಳಲಾಗುವುದಿಲ್ಲ, ಅದು ಕೋಚ್, ಕ್ಯಾಪ್ಟನ್ ಹಾಗೂ ವೈಸ್ ಕ್ಯಾಪ್ಟನ್ ಆಯ್ಕೆ. ಆದರೆ ಈಗ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಸೂರ್ಯಕುಮಾರ್ ಯಾದವ್ ಅವರು 5ನೇ ಕ್ರಮಾಂಕದಲ್ಲಿ ಸಹ ಬ್ಯಾಟಿಂಗ್ ಮಾಡಲು ಅವರು ಸಾಕ್ತವಾಗಿದ್ದಾರೆ ಎನ್ನುವುದು ನನ್ನ ಭಾವನೆ.
ಸೂರ್ಯಕುಮಾರ್ ಯಾದವ್ ಅವರು ಒಳ್ಳೆಯ ಫಿನಿಷರ್ ಆಗಬಹುದು..” ಎಂದು ಹೇಳುವ ಮೂಲಕ ಭಾರತ ತಂಡಕ್ಕೆ ಹೊಸ ಫಿನಿಷರ್ ಪ್ಲೇಯರ್ ಅನ್ನು ಹೆಸರಿಸಿದ್ದಾರೆ ದಿಲೀಪ್. ಇವರಷ್ಟೇ ಅಲ್ಲದೆ, ಬೇರೆ ಪ್ಲೇಯರ್ ಗಳ ಬಗ್ಗೆ ಸಹ ಮಾತನಾಡಿ, ನಾನು ಆಯ್ಕೆ ಸಮಿತಿಯಲ್ಲಿ ಇದ್ದಿದ್ದರೆ, ಮೊಹಮ್ಮದ್ ಶಮಿ, ಶುಭಮನ್ ಗಿಲ್ ಹಾಗೂ ಉಮ್ರಾನ್ ಮಲಿಕ್ ಅವರನ್ನು ಖಂಡಿತವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದೆ..” ಎಂದಿದ್ದಾರೆ. ಈ ವರ್ಷ ಐಪಿಎಲ್ ಗೆ ಎಂಟ್ರಿ ಕೊಟ್ಟ ಮೊದಲ ವರ್ಷವೇ ಗುಜರಾತ್ ಟೈಟನ್ಸ್ ತಂಡ ಕಪ್ ಗೆಲ್ಲಲು ಶಮಿ ಹಾಗೂ ಗಿಲ್ ಅವರ ಪಾತ್ರ ಬಹಳ ಮುಖ್ಯವಾಗಿತ್ತು. ಎಸ್.ಆರ್.ಹೆಚ್ ತಂಡದ ಪರವಾಗಿ ಉಮ್ರಾನ್ ಮಲಿಕ್ ಒಳ್ಳೆಯ ಪ್ರದರ್ಶನ ನೀಡಿದ್ದರು, ಅದರಿಂದ ಈ ಮೂವರು ಆಟಗಾರರನ್ನು ಆಯ್ಕೆ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ.