ತಂಡದ ಆಯ್ಕೆ ಏನೋ ಆಯಿತು: ಭಾರತ ತಂಡದ ಈ ಮೂರು ಅಂಶಗಳ ಮೇಲೆ ನಿಂತಿದೆ ಸೋಲು-ಗೆಲುವು. ರೋಹಿತ್ ಕೊನೆಗೂ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾರಾ??

ತಂಡದ ಆಯ್ಕೆ ಏನೋ ಆಯಿತು: ಭಾರತ ತಂಡದ ಈ ಮೂರು ಅಂಶಗಳ ಮೇಲೆ ನಿಂತಿದೆ ಸೋಲು-ಗೆಲುವು. ರೋಹಿತ್ ಕೊನೆಗೂ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾರಾ??

ಸೆಪ್ಟೆಂಬರ್ 12ರ ಸಂಜೆ ಬಿಸಿಸಿಐ ಟಿ20 ವಿಶ್ವಕಪ್ ಪಂದ್ಯಕ್ಕೆ 15 ಸದಸ್ಯರ ತಂಡ ಹಾಗೂ 4 ಮೀಸಲು ಆಟಗಾರರನ್ನು ಆಯ್ಕೆ ಮಾಡಿತು. ಸದಸ್ಯರ ಹೆಸರುಗಳು ಹೊರಬಂದ ಬಳಿಕ ಆಯ್ಕೆಯಾದವರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಏಷ್ಯಾಕಪ್ ನಲ್ಲಿ ಎಡವಟ್ಟು ಆಗಿದ್ದರು ಸಹ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿಲ್ಲದೆ ಇರುವುದು ಅಚ್ಚರಿ ಮೂಡಿಸಿದೆ. ಏಷ್ಯಾಕಪ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡಿದ ರವಿ ಬಿಶ್ನೋಯ್ ಅವರಿಗೆ ಸ್ಥಾನ ಸಿಕ್ಕಿಲ್ಲದೆ ಇರುವುದು ನಿರಾಶೆಯಾಗಿದೆ. ಹಾಗೆಯೇ ಜಸ್ಪ್ರೀತ್ ಬುಮ್ರ ಮತ್ತು ಹರ್ಷಲ್ ಪಟೇಲ್ ಕಂಬ್ಯಾಕ್ ಮಾಡಿರುವುದು ಒಳ್ಳೆಯ ವಿಚಾರ. ಭಾರತ ತಂಡ ಈಗ ರೆಡಿ ಇದ್ದರು ಸಹ, ರೋಹಿತ್ ಶರ್ಮಾ ಅವರು ನಾಯಕನಾಗಿರುವ ಈ ತಂಡದಲ್ಲಿ ಮೂರು ಸಮಸ್ಯೆಗಳಿದ್ದು ಅವುಗಳನ್ನು ಸರಿ ಮಾಡಿಕೊಂಡರೆ ಉತ್ತಮ. ಆ ಮೂರು ಸಮಸ್ಯೆಗಳು ಯಾವುವು? ಅವುಗಳ ಬಗ್ಗೆ ರೋಹಿತ್ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರ ಎಂದು ಕಾದು ನೋಡಬೇಕಿದೆ..

ಚಾಹಲ್ ಅವರ ಫಾರ್ಮ್ :- ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಚಾಹಲ್ ಅವರು ಏಷ್ಯಾಕಪ್ ಪಂದ್ಯಗಳಲ್ಲಿ ನಿರೀಕ್ಷೆಯ ಮಟ್ಟದಲ್ಲಿ ಪರ್ಫಾರ್ಮ್ ಮಾಡಿಲ್ಲ. ಆಡಿದ 4 ಪಂದ್ಯಗಳಲ್ಲಿ 4 ವಿಕೆಟ್ಸ್ ಮಾತ್ರ ಪಡೆದರು. ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಲಿಲ್ಲ. ರವಿ ಬಿಶ್ನೋಯ್ ಅವರು ಈ ಬಾರಿ ಮೀಸಲು ಆಟಗಾರರ ಪಟ್ಟಿಯಲ್ಲಿ ಇರುವುದರಿಂದ, ಪ್ರತಿ ಮ್ಯಾಚ್ ನಲ್ಲೂ ಚಾಹಲ್ ಅವರು ಮೈದಾನಕ್ಕೆ ಇಳಿಯಬೇಕಾಗುತ್ತದೆ. ಚಾಹಲ್ ಅವರು ಉತ್ತಮ ಲಯದಲ್ಲಿ ಇಲ್ಲ,, ಮಧ್ಯಮ ಓವರ್ ಗಳಲ್ಲಿ ಬೌಲಿಂಗ್ ಮಾಡಲು ಸ್ವಲ್ಪ ಕಷ್ಟ ಪಡುತ್ತಿದ್ದು, ಈ ಬಗ್ಗೆ ಕ್ಯಾಪ್ಟನ್ ರೋಹಿತ್, ನಿರ್ಧಾರ ತೆಗೆದುಕೊಳ್ಳಬೇಕಿದೆ.

ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್ :- ಹಿರಿಯ ಆಟಗಾರ ದಿನೇಶ್ ಕಾರ್ತಿಕ್, ಯುವ ಆಟಗಾರ ರಿಷಬ್ ಪಂತ್ ಇಬ್ಬರು ಸಹ ಟಿ20 ವಿಶ್ವಕಪ್ ಗೆ ಆಯ್ಕೆಯಾಗಿದ್ದಾರೆ. ದಿನೇಶ್ ಕಾರ್ತಿಕ್ ಅವರು ಅದ್ಭುತವಾದ ಆಟಗಾರ, ಡೆತ್ ಓವರ್ ಗಳಲ್ಲಿ ರನ್ ಗಳನ್ನು ಚೆಚ್ಚಿ, ತಂಡದ ಸ್ಕೋರ್ ಹೆಚ್ಚಿಸುವ ಸಾಮರ್ಥ್ಯ ಅವರಿಗಿದೆ. ಇತ್ತ ರಿಷಬ್ ಪಂತ್ ಟಿ20 ಮಾದರಿಯ ಪಂದ್ಯಗಳಲ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದಾರೆ. ಹಾಗಾಗಿ ಇವರಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡುವುದು ಎನ್ನುವ ಪ್ರಶ್ನೆ ಈಗ ದೊಡ್ಡದಾಗಿಯೇ ನಿಂತಿದೆ.

ಜಸ್ಪ್ರೀತ್ ಬುಮ್ರ ಹಾಗೂ ಹರ್ಷಲ್ ಪಟೇಲ್ ಫಿಟ್ನೆಸ್ :- ಇವರಿಬ್ಬರು ಸಹ ಭಾರತ ತಂಡ ಬೌಲಿಂಗ್ ವಿಭಾಗದಲ್ಲಿ ಕಷ್ಟ ಎದುರಿಸುತ್ತಿದ್ದಾಗ ಭಾರತ ತಂಡಕ್ಕೆ ಮರಳಿ ಬಂದಿರುವುದು ಸಂತೋಷದ ವಿಚಾರ. ಆದರೆ ಈ ಇಬ್ಬರು ಡೇಂಜರಸ್ ಬೌಲರ್ ಗಳು ಗಾಯದ ಕಾರಣ ತಂಡದಿಂದ ದೂರವಿದ್ದು, ಈಗ ಫಿಟ್ ಆಗಿ ಬಂದಿದ್ದಾರೆ. ಹಾಗಾಗಿ ಇವರಿಬ್ಬರ ಫಿಟ್ನೆಸ್ ವಿಚಾರ ಸಹ ಬಹಳ ಚರ್ಚೆಯಾಗುತ್ತಿದೆ. ಈ ಇಬ್ಬರು ಆಟಗಾರರು ತಮ್ಮ ಫಿಟ್ನೆಸ್ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯವಾಗಿದೆ.