ವಿಶ್ವಕಪ್ ಆಯ್ಕೆ ಯಾಗಿರುವ 15 ಜನರಲ್ಲಿ ಕೊನೆಯದಾಗಿ ಹನ್ನೊಂದರ ಬಳಗದಲ್ಲಿ ಯಾರು ಸ್ಥಾನ ಪಡೆದರೆ ಗೆಲ್ಲುವುದು ಸುಲಭ ಗೊತ್ತೇ??

ವಿಶ್ವಕಪ್ ಆಯ್ಕೆ ಯಾಗಿರುವ 15 ಜನರಲ್ಲಿ ಕೊನೆಯದಾಗಿ ಹನ್ನೊಂದರ ಬಳಗದಲ್ಲಿ ಯಾರು ಸ್ಥಾನ ಪಡೆದರೆ ಗೆಲ್ಲುವುದು ಸುಲಭ ಗೊತ್ತೇ??

ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳು ಅಕ್ಟೋಬರ್ 16ರಿಂದ ಶುರುವಾಗಲಿದೆ. ಈ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯುತ್ತಿದ್ದು, ಭಾರತ ತಂಡದ ಮೊದಲ ಪಂದ್ಯ ಅಕ್ಟೋಬರ್ 23ರಂದು ಪಾಕಿಸ್ತಾನ್ ವಿರುದ್ಧ ನಡೆಯಲಿದೆ. ಏಷ್ಯಾಕಪ್ 2022 ಟೂರ್ನಿಯಲ್ಲಿ ಭಾರತ ತಂಡ ಸೋತಿರುವ ಕಾರಣ ವಿಶ್ವಕಪ್ ನಲ್ಲಿ ಅತ್ಯುತ್ತಮವಾದ ಪ್ರದರ್ಶನ ಕೊಡಲೇಬೇಕು ಎನ್ನುವ ಒತ್ತಡ ತಂಡದ ಮೇಲಿದೆ. ಹೀಗಿರುವಾಗ ಸೆಪ್ಟೆಂಬರ್ 12ರಂದು ಬಿಸಿಸಿಐ ವಿಶ್ವಕಪ್ ಗೆ 15 ಸದಸ್ಯರ ತಂಡ ಹಾಗೂ 4 ಹೆಚ್ಚುವರಿ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿತು..

ಏಷ್ಯಾಕಪ್ ನಲ್ಲಿದ್ದ ಬಹುತೇಕ ಆಟಗಾರರು ವಿಶ್ವಕಪ್ ಗೆ ಸೆಲೆಕ್ಟ್ ಆಗಿದ್ದು, ಕೆಲವು ಬದಲಾವಣೆಗಳಷ್ಟೇ ಆಗಿದೆ, ಪ್ರಮುಖ ಬೌಲರ್ ಗಳಾದ ಜಸ್ಪ್ರೀತ್ ಬುಮ್ರ ಮತ್ತು ಹರ್ಷಲ್ ಪಟೇಲ್ ಅವರು ತಂಡಕ್ಕೆ ಮರಳಿ ಬಂದಿದ್ದಾರೆ. ಇನ್ನು ಮೊಹಮ್ಮದ್ ಶಮಿ ಅವರು, ಶ್ರೇಯಸ್ ಅಯ್ಯರ್ ಅವರು ಹೆಚ್ಚುವರಿ ಆಟಗಾರರ ಲಿಸ್ಟ್ ನಲ್ಲಿ ಆಯ್ಕೆಯಾಗಿದ್ದಾರೆ. ಭಾರತ ತಂಡದಲ್ಲಿ ಈಗ 15 ಸದಸ್ಯರಿದ್ದರು, ಪ್ಲೇಯಿಂಗ್ 11 ನಲ್ಲಿ ಯಾರೆಲ್ಲಾ ಇದ್ದರೆ ಭಾರತ ತಂಡಕ್ಕೆ ಗೆಲುವು ಸುಲಭವಾಗುತ್ತದೆ ಎನ್ನುವ ಚರ್ಚೆ ಈಗ ಶುರುವಾಗಿದ್ದು, ಪ್ಲೇಯಿಂಗ್ 11 ನಲ್ಲಿ ಯಾವೆಲ್ಲಾ ಆಟಗಾರರು ಇರಬೇಕು ಎಂದು ತಿಳಿಸುತ್ತೇವೆ ನೋಡಿ..

ಆರಂಭಿಕ ಆಟಗಾರರಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೋಹ್ಲಿ ಅವರು ಕಣಕ್ಕೆ ಇಳಿಯಬೇಕು, 3ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, 4ನೇ ಕ್ರಮಾಂಕದಲ್ಲಿ ರಿಷಬ್ ಪಂತ್, 5ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, 6ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ಆಲ್ ರೌಂಡರ್ ಆಗಿರುವ ಅಕ್ಷರ್ ಪಟೇಲ್ 7ನೇ ಕ್ರಮಾಂಕದಲ್ಲಿ. ವೇಗಿಗಳಾದ ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರ ಅವರೊಡನೆ ಸ್ಪಿನ್ ಮಾಂತ್ರಿಕ ಚಾಹಲ್ ಅವರು ಇದ್ದರೆ, ಈ 11ನ ಬಳಗ ಭಾರತ ತಂಡಕ್ಕೆ ಗೆಲುವು ತಂದುಕೊಡುವುದು ಖಂಡಿತ ಎನ್ನಲಾಗುತ್ತಿದೆ.