ಸ್ಥಾನ ಪಡೆಯುವ ಎಲ್ಲಾ ಅರ್ಹತೆ ಇದ್ದರೂ ಕೂಡ ಭಾರತ ತಂಡದಲ್ಲಿ ಸ್ಥಾನ ಪಡೆಯದ ನತದೃಷ್ಟ ಆಟಗಾರರು ಯಾರ್ಯಾರು ಗೊತ್ತೇ??

ಸ್ಥಾನ ಪಡೆಯುವ ಎಲ್ಲಾ ಅರ್ಹತೆ ಇದ್ದರೂ ಕೂಡ ಭಾರತ ತಂಡದಲ್ಲಿ ಸ್ಥಾನ ಪಡೆಯದ ನತದೃಷ್ಟ ಆಟಗಾರರು ಯಾರ್ಯಾರು ಗೊತ್ತೇ??

ಭಾರತ ಕ್ರಿಕೆಟ್ ತಂಡ ಮುಂದಿನ ತಿಂಗಳು ಶುರುವಾಗಲಿರುವ ಟಿ20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ, ವಿಶ್ವಕಪ್ ಪಂದ್ಯಗಳಲ್ಲಿ ಆಟವಾಡುವ 15 ಸದಸ್ಯರು ಹಾಗೂ 4 ಹೆಚ್ಚುವರಿ ಆಟಗಾರರನ್ನು ಸಹ ಬಿಸಿಸಿಐ ಆಯ್ಕೆ ಮಾಡಿ ನಿನ್ನೆ ಸಂಜೆ ಪ್ರಕಟಣೆ ಮಾಡಿದೆ. ವಿಶ್ವಕಪ್ ಗಿಂತ ಮೊದಲು ಭಾರತ ತಂಡವು ತವರಿನಲ್ಲಿ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ವಿರುದ್ಧ ಸರಣಿ ಪಂದ್ಯಗಳನ್ನು ಆಡಲಿದೆ. ಅದಕ್ಕೂ ಸಹ ಆಟಗಾರರ ಆಯ್ಕೆಯಾಗಿದ್ದು, ತಂಡವನ್ನು ಬಿಸಿಸಿಐ ಪ್ರಕಟಣೆ ಮಾಡಿದೆ.

ವೇಗಿಗಳಾದ ಜಸ್ಪ್ರೀತ್ ಬುಮ್ರ ಹಾಗೂ ಹರ್ಷಲ್ ಪಟೇಲ್ ಭಾರತಕ್ಕೆ ಮರಳಿ ಬಂದಿರುವುದು ಬೌಲಿಂಗ್ ವಿಭಾಗಕ್ಕೆ ಬಲ ಬಂದಿದೆ. ಇನ್ನು ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿರುವುದು ಒಳ್ಳೆಯ ವಿಚಾರ ಆಗಿದೆ. ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಶಸ್ರ್ತಚಿಕಿತ್ಸೆ ಕಾರಣದಿಂದ ಎಲ್ಲಾ ಟೂರ್ನಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರಷ್ಟೇ ಅಲ್ಲದೆ, ಫಿಟ್ ಆಗಿದ್ದರು ಸಹ 4 ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡಿಲ್ಲ, ಇದರಿಂದಾಗಿ ಕ್ರಿಕೆಟ್ ಪ್ರಿಯರಿಗೆ ನಿರಾಶೆಯಾಗಿದೆ. ಹೀಗೆ ಆಯ್ಕೆ ಮಾಡದೆ ಬಿಟ್ಟಿರುವ ನಾಲ್ವರು ಆಟಗಾರರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಮೋಹಮ್ಮದ್ ಶಮಿ :- ಶಮಿ ಅವರು ಉತ್ತಮವಾದ ಬೌಲರ್ ಆಗಿದ್ದರು ಸಹ ಅವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ. ಈ ವರ್ಷ ಐಪಿಎಲ್ ನಲ್ಲಿ 20 ವಿಕೆಟ್ಸ್ ಪಡೆಯುವ ಮೂಲಕ ಅದ್ಭುತವಾದ ಪ್ರದರ್ಶನ ನೀಡಿದರು. ಗುಜರಾತ್ ತಂಡ ಗೆಲ್ಲಲು ಇವರ ಪಾತ್ರ ಬಹಳ ಮುಖ್ಯವಾಗಿತ್ತು, ಆದರು ಸಹ ಶಮಿ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಲಿಲ್ಲ. ಇಷ್ಟು ದಿವಸಗಳ ಕಾಲ ಆಡಿದ ಸರಣಿಗಳಲ್ಲಿ, ಏಷ್ಯಾಕಪ್ ನಲ್ಲೂ ಮೊಹಮ್ಮದ್ ಶಮಿ ಅವರು ಆಯ್ಕೆಯಾಗಲಿಲ್ಲ. ಆ ಸಮಯದಲ್ಲಿ ಭಾರತ ತಂಡಕ್ಕೆ ವೇಗಿಯ ಸಮಸ್ಯೆ ಕಾಡಿದ್ದಂತೂ ನಿಜ. ಆದರೆ ಈಗ ಟಿ20 ವಿಶ್ವಕಪ್ ಗೆ ಶಮಿ ಅವರು ಆಯ್ಕೆಯಾಗಿದ್ದು, ಕಾಯ್ದಿಸಿರುವ ಆಟಗಾರರ ಪಟ್ಟಿಯಲ್ಲಿ ಶಮಿ ಇದ್ದಾರೆ.

ದೀಪಕ್ ಚಹರ್ :- ಇವರು ಗಾಯದ ಕಾರಣದಿಂದ ಬಹಳ ಕಾಲ ಭಾರತ ತಂಡದಿಂದ ಹೊರಗೆ ಉಳಿದಿದ್ದರು, ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಕಂಬ್ಯಾಕ್ ಮಾಡಿದ ದೀಪಕ್ ಚಹರ್ ಅದ್ಭುತವಾದ ಪ್ರದರ್ಶನ ನೀಡಿದರು. ಏಷ್ಯಾಕಪ್ ನಲ್ಲಿ ಕೂಡ ಸೆಲೆಕ್ಟ್ ಆಗಿದ್ದ ದೀಪಕ್ ಚಹರ್, ತಮಗೆ ಸಿಕ್ಕ ಅವಕಾಶದಲ್ಲಿ ಉತ್ತಮವಾದ ಪ್ರದರ್ಶನವನ್ನೆ ನೀಡಿದರು. ಈಗ ವಿಶ್ವಕಪ್ ನಲ್ಲಿಯೂ ದೀಪಕ್ ಚಹರ್ ಅವರು ಸೆಲೆಕ್ಟ್ ಆಗಿದ್ದಾರೆ, ಆದರೆ ಕಾಯ್ದಿರಿಸಿರುವ ಆಟಗಾರರ ಪಟ್ಟಿಯಲ್ಜ್ ಸ್ವಿಂಗ್ ಬೌಲರ್ ದೀಪಕ್ ಚಹರ್ ಅವರ ಹೆಸರಿದ್ದು, ಒಂದು ವೇಳೆ ವೇಗಿಯ ಕೊರತೆ ಉಂಟಾದರೆ ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ.

ರವಿ ಬಿಶ್ನೋಯ್ :- ಏಷ್ಯಾಕಪ್ ನಲ್ಲಿ ತಮಗೆ ಸಿಕ್ಕ ಅವಕಾಶದಲ್ಲಿ ಉತ್ತಮವಾದ ಪ್ರದರ್ಶನ ನೀಡಿದರು ಯುವ ಆಟಗಾರ ರವಿ ಬಿಶ್ನೋಯ್. ಆದರೆ ಇವರಿಗೆ ವಿಶ್ವಕಪ್ ನಲ್ಲಿ ಸ್ಥಾನ ಸಿಗಲಿಲ್ಲ. ಲೆಗ್ ಸ್ಪಿನ್ನರ್ ಆಗಿರುವ ಯುಜವೇಂದ್ರ ಚಾಹಲ್ ಅವರನ್ನು ಭಾರತ ತಂಡ ಸೆಲೆಕ್ಟ್ ಮಾಡಿಕೊಂಡಿದೆ. ಆದರೆ ಎದುರಾಳಿ ತಂಡವನ್ನು ಸಂಕಷ್ಟದಲ್ಲಿಡುವುದು ರವಿ ಬಿಶ್ನೋಯ್ ಅವರಿಗೆ ಬಹಳ ಚೆನ್ನಾಗಿ ಗೊತ್ತಿರುವ ತಂತ್ರವಾಗಿದೆ. ಈವರೆಗೂ ಇವರು ಆಡಿರುವ 10 ಪಂದ್ಯಗಳಲ್ಲಿ 16 ವಿಕೆಟ್ಸ್ ಪಡೆದಿದ್ದಾರೆ. ಹಾಗಿದ್ದರೂ ಸಹ ರವಿ ಬಿಶ್ನೋಯ್ ಅವರು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿಲ್ಲ. ಭಾರತ ತಂಡದ ಭವಿಷ್ಯದ ಸ್ಟಾರ್ ಆಟಗಾರರಾಗುವ ಎಲ್ಲಾ ಸಾಮರ್ಥ್ಯ ಇವರಲ್ಲಿದೆ, ಆದರೆ ಅನುಭವಿ ಆಟಗಾರ ಚಾಹಲ್ ಅವರು ಇರುವ ಕಾರಣ ರವಿ ಬಿಶ್ನೋಯ್ ಬಿಟ್ಟುಕೊಡಬೇಕಾಗಿದೆ.

ಸಂಜು ಸ್ಯಾಮ್ಸನ್ :- ತಮಗೆ ಸಿಕ್ಕ ಪ್ರತಿಯೊಂದು ಅವಕಾಶದಲ್ಲೂ ಉತ್ತಮವಾದ ಪ್ರದರ್ಶನ ನೀಡುತ್ತಾ ಬಂದಿದ್ದಾರೆ ಸಂಜು ಸ್ಯಾಮ್ಸನ್. ಇವರು ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿದ್ದು, ಭಾರತ ತಂಡದಲ್ಲಿ ಈಗಾಗಲೇ ಪೈಪೋಟಿ ಹೆಚ್ಚಿರುವ ಕಾರಣ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಸಿಕ್ಕಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ದಿನೇಶ್ ಕಾರ್ತಿಕ್ ಹಾಗೂ ರಿಷಬ್ ಪಂತ್ ಆಯ್ಕೆಯಾಗಿದ್ದು, ಸಂಜು ಸ್ಯಾಮ್ಸನ್ ಅವರು ಕಾಯ್ದಿರಿಸಿರುವ ಆಟಗಾರರ ಪಟ್ಟಿಯಲ್ಲಿ ಸಹ ಸ್ಥಾನ ಪಡೆದುಕೊಂಡಿಲ್ಲ. ಶ್ರೇಯಸ್ ಅಯ್ಯರ್ ಅವರನ್ನು ಸ್ಟ್ಯಾಂಡ್ ಬೈ ಆಟಗಾರರಾಗಿ ಆಯ್ಕೆ ಮಾಡಿದ್ದು, ಅವರಿಗಿಂತ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ.