ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿಶ್ವಕಪ್ ನಲ್ಲಿ ರೋಹಿತ್ ಜೊತೆ ಆರಂಭಿಕರಾಗಿ ಯಾರು ಕಣಕ್ಕೆ ಇಳಿಯಬೆಣ್ತಕ್ಕಿ ಗೊತ್ತೇ?? ರೋಹನ್ ಗವಾಸ್ಕರ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ರಾಹುಲ್ ಅಲ್ಲ, ಮತ್ಯಾರು?

61

Get real time updates directly on you device, subscribe now.

ಮುಂದಿನ ತಿಂಗಳು ಶುರು ಆಗಲಿರುವ ಟಿ20 ವಿಶ್ವಕಪ್ ಪಂದ್ಯಗಳ ಮೇಲೆ ಈಗ ಎಲ್ಲರ ಗಮನ ಇದೆ. ಭಾರತ ತಂಡಕ್ಕೆ ಯಾವ ಆಟಗಾರ ಆಯ್ಕೆಯಾಗಬಹುದು ಎನ್ನುವ ಚರ್ಚೆಗೆ ಊಟ ಉತ್ತರ ಸಿಕ್ಕಿದ್ದು, ನಿನ್ನೆ ಸಂಜೆ ಬಿಸಿಸಿಐ ಟಿ20 ವಿಶ್ವಕಪ್ ನಲ್ಲಿ ಆಡುವ 15 ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಕೊನೆಗೂ ಎಲ್ಲ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು, ಆಯ್ಕೆಯಾಗಿರುವ ಸದಸ್ಯರ ಬಗ್ಗೆಯು ಚರ್ಚೆ ಶುರುವಾಗಿದ್ದು, ಕೆಲವರು ಆಯ್ಕೆಯನ್ನು ನೋಡಿ ಸಂತೋಷಪಟ್ಟಿದ್ದರೆ, ಇನ್ನು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಯಾವ ಆಟಗಾರ ಯಾವ ಸ್ಥಾನದಲ್ಲಿ ಆಡಬಹುದು ಎನ್ನುವ ಚರ್ಚೆ ಸಹ ನಡೆಯುತ್ತಿದೆ, ಕ್ರಿಕೆಟ್ ಪಂಡಿತರು ಹಾಗೂ ಮಾಜಿ ಕ್ರಿಕೆಟಿಗರು ಈ ಬಗ್ಗೆ ಮಾತನಾಡುತ್ತಿದ್ದಾರೆ, ಮಾಜಿ ಕ್ರಿಕೆಟಿಗ, ಪ್ರಸ್ತುತ ಕಾಮೆಂಟೇಟರ್ ಆಗಿ ಸಹ ಕಾಣಿಸಿಕೊಳ್ಳುತ್ತಿರುವ ರೋಹನ್ ಗವಾಸ್ಕರ್ ಅವರು ಓಪನರ್ ಬ್ಯಾಟ್ಸ್ಮನ್ ಗಳ ಬಗ್ಗೆ ಕಮೆಂಟ್ ಮಾಡಿದ್ದಾರೆ. ರೋಹಿತ್ ಶರ್ಮಾ ಅವರು ಆರಂಭಿಕ ಬ್ಯಾಟ್ಸ್ಮನ್ ಆಗಿ ಕಣಕ್ಕೆ ಇಳಿಯುವುದು ಪಕ್ಕಾ ಆಗಿದೆ, ಇಷ್ಟು ದಿನಗಳ ಪ್ರತಿ ಪಂದ್ಯದಲ್ಲೂ ರೋಹಿತ್ ಅವರೊಡನೆ ಓಪನರ್ ಆಗಿ ಬರುತ್ತಾ ಇದ್ದದ್ದು ಕೆ.ಎಲ್.ರಾಹುಲ್ ಅವರು. ಆದರೆ ಈಗ ರೋಹನ್ ಗವಾಸ್ಕರ್ ಅವರು ರೋಹಿತ್ ಅವರೊಡನೆ ವಿರಾಟ್ ಕೋಹ್ಲಿ ಅವರು ಓಪನರ್ ಆಗಬೇಕು ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಅವರೊಡನೆ ಓಪನರ್ ಆಗಿ ಬಂದ ವಿರಾಟ್ ಕೋಹ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಹಾಗಾಗಿ, ವಿರಾಟ್ ಕೋಹ್ಲಿ ಅವರು ಆರಂಭಿಕ ಬ್ಯಾಟ್ಸ್ಮನ್ ಆಗಿ ಕಣಕ್ಕೆ ಇಳಿಯಬೇಕು, ಟೀಮ್ ಇಂಡಿಯಾ ಆ ನಿರ್ಧಾರ ತೆಗೆದುಕೊಂಡರೆ ಅದ್ಭುತವಾದ ಹೆಜ್ಜೆ ಆಗಿರುತ್ತದೆ ಎಂದಿದ್ದಾರೆ ರೋಹನ್ ಗವಾಸ್ಕರ್. ವಿರಾಟ್ ಕೋಹ್ಲಿ ಅವರು ಈಗ ಮರಳಿ ಫಾರ್ಮ್ ಗೆ ಬಂದಿದ್ದು, ಟಿ20 ವಿಶ್ವಕಪ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಾರೆ ಎನ್ನುವುದು ಕ್ರಿಕೆಟ್ ಪ್ರಿಯರ ನಂಬಿಕೆ ಆಗಿದೆ.

Get real time updates directly on you device, subscribe now.