ಭಾರತ ತಂಡದಲ್ಲಿ ರಿಷಬ್ ಪಂತ್ ಗೆ ಕಾಯಂ ಸ್ಥಾನ ನೀಡುತ್ತಿರುವುದು ಯಾಕೆ ಗೊತ್ತೇ?? ಕ್ರಿಕೆಟ್ ಪಂಡಿತರ ಲೆಕ್ಕಾಚಾರವೇನು ಗೊತ್ತೇ??

ಭಾರತ ತಂಡದಲ್ಲಿ ರಿಷಬ್ ಪಂತ್ ಗೆ ಕಾಯಂ ಸ್ಥಾನ ನೀಡುತ್ತಿರುವುದು ಯಾಕೆ ಗೊತ್ತೇ?? ಕ್ರಿಕೆಟ್ ಪಂಡಿತರ ಲೆಕ್ಕಾಚಾರವೇನು ಗೊತ್ತೇ??

ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ರಿಷಬ್ ಪಂತ್ ಅವರಿಗೆ ತಂಡದ ಪರವಾಗಿ ಆಡಲು ಹಲವು ಅವಕಾಶಗಳು ಸಿಕ್ಕರು ಸಹ ಅದನ್ನು ಅವರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ರಿಷಬ್ ಪಂತ್ ಅವರು ಏಷ್ಯಾಕಪ್ 2022 ಟೂರ್ನಿಗೆ ಆಯ್ಕೆಯಾದರು, ಪಾಕಿಸ್ತಾನ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಪ್ಲೇಯಿಂಗ್ 11 ಇಂದ ಹೊರಗಿದ್ದ ರಿಷಬ್ ಪಂತ್ ಅವರಿಗೆ ರವೀಂದ್ರ ಜಡೇಜಾ ಅವರು ಗಾಯದ ಕಾರಣದಿಂದ ಹೊರಹೋದ ಬಳಿಕ, ಪ್ಲೇಯಿಂಗ್ 11 ನಲ್ಲಿ ಆಡುವ ಅವಕಾಶ ಸಿಕ್ಕಿತು. ರವೀಂದ್ರ ಜಡೇಜಾ ಎಡಗೈ ಬ್ಯಾಟ್ಸ್ಮನ್ ಆಲ್ ರೌಂಡರ್ ಆಗಿದ್ದರು, ರಿಷಬ್ ಪಂತ್ ಸಹ ಎಡಗೈ ಬ್ಯಾಟ್ಸ್ಮನ್ ಆಗಿರುವ ಕಾರಣ ಅವರನ್ನು ಪರಿಗಣಿಸಲಾಯಿತು.

ಆದರೆ ರಿಷಬ್ ಪಂತ್ ಅವರು ತಮಗೆ ಸಿಕ್ಕ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಲಿಲ್ಲ. ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮವಾದ ಪ್ರದರ್ಶನ ನೀಡುವ ರಿಷಬ್ ಪಂತ್ ಅವರು ಏಷ್ಯಾಕಪ್ ನಲ್ಲಿ ಮುಗ್ಗರಿಸಿದರು. ಇವರು ಆಡಿದ ಮೂರು ಪಂದ್ಯಗಳಲ್ಲಿ 14, 17, 20 ರನ್ ಗಳನ್ನು ಮಾತ್ರ ಗಳಿಸಿದರು. ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ರಿಷಬ್ ಪಂತ್ ಅವರು ಸೆಂಚುರಿ ಭಾರಿಸುವ ಮೂಲಕ ಭರವಸೆ ಮೂಡಿಸಿದರು ಸಹ, ಏಷ್ಯಾಕಪ್ ನಲ್ಲಿ ಎಡವಿದ್ದಾರೆ. ಆದರೂ ಸಹ ರಿಷಬ್ ಪಂತ್ ಅವರು ಅಸ್ಟ್ರೇಲಿಯಾ ಸೀರೀಸ್ ಆಯ್ಕೆ ಆಗಬೇಕು ಎನ್ನುವ ಅಭಿಪ್ರಾಯ ಕ್ರಿಕೆಟ್ ತಜ್ಞರಿಂದ ವ್ಯಕ್ತವಾಗಿದ್ದು, ಅದಕ್ಕೆ ಕಾರಣಗಳನ್ನ ಸಹ ನೀಡಲಾಗಿದೆ.

ರಿಷಬ್ ಪಂತ್ ಅವರು ಟಿ20 ಫಾರ್ಮ್ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಇದುವರೆಗೂ ರಿಷಬ್ ಅವರು 58 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ, ಅವುಗಳಲ್ಲಿ ರಿಷಬ್ ಅಬರ ಸ್ಟ್ರೈಕ್ ರೇಟ್ 126.21 ಇದ್ದು, 23ರ ಸರಾಸರಿಯಲ್ಲಿ 934 ರನ್ ಗಳಿಸಿದ್ದಾರೆ. ಹಾಗಾಗಿ ಕೆಲವರು ರಿಷಬ್ ಪಂತ್ ಅವರ ಬದಲಾಗಿ ಬೇರೆಯವರಿಗೆ ಅವಕಾಶ ಕೊಡುವುದು ಉತ್ತಮ ಎನ್ನುತ್ತಿದ್ದಾರೆ. ಆದರೆ ಕೆಲವು ಕ್ರಿಕೆಟ್ ತಜ್ಞರು ರಿಷಬ್ ಅವರನ್ನು ಆಯ್ಕೆ ಮಾಡುವುದೇ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದಕ್ಕೆ ಸೂಕ್ತವಾದ ಕಾರಣಗಳನ್ನು ಸಹ ನೀಡಿದ್ದಾರೆ. ಆ ಕಾರಣಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.

ಅಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ರಿಷಬ್ :- ಉತ್ತಮವಾದ ಬ್ಯಾಟರ್ ಆಗಿ ರಿಷಬ್ ಪಂತ್ ಅವರು ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿ, ಕಠಿಣ ಸಂದರ್ಭಗಳಲ್ಲಿ, ಸವಾಲಾಗುವಂತಹ ಪರಿಸ್ಥಿತಿ ಇದ್ದಾಗಲೂ ರಿಷಬ್ ಅವರು ಹೆಚ್ಚಿನ ರನ್ ಗಳಿಸಿದ್ದಾರೆ. ಈವರೆಗೂ ರಿಷಬ್ ಅವರು 5 ಶತಕಗಳನ್ನು ಗಳಿಸಿದ್ದು, ಅವುಗಳಲ್ಲಿ 4 ಶತಕ ಹೊರದೇಶದಲ್ಲಿ ಗಳಿಸಿರುವುದಾಗಿದೆ. ಎರಡು ಶತಕ ಇಂಗ್ಲೆಂಡ್ ನಲ್ಲಿ, 1 ಶತಕ ಆಸ್ಟ್ರೇಲಿಯಾದಲ್ಲಿ, 1 ಶತಕ ಸೌತ್ ಆಫ್ರಿಕಾದಲ್ಲಿ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರಿಷಬ್ 97 ರನ್ ಗಳಿಸಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭರ್ಜರಿಯಾದ ಪ್ರದರ್ಶನ ನೀಡಿದ್ದರು. ಹಾಗಾಗಿ ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾರಣ ರಿಷಬ್ ಪಂತ್ ಅವರು ಸೂಕ್ತ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಭಾರತ ತಂಡದ ಎಕ್ಸ್ ಫ್ಯಾಕ್ಟರ್ ಆಗಿದ್ದ ಪಂತ್ :- ಹಲವು ಬಾರಿ ಭಾರತ ತಂಡ ಕಷ್ಟದಲ್ಲಿದ್ದಾಗ ರಿಷಬ್ ಪಂತ್ ಅವರು ಉತ್ತಮವಾದ ಪ್ರದರ್ಶನದ ಮೂಲಕ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಓವಲ್ ಟೆಸ್ಟ್, 2018ರಲ್ಲಿ ನಡೆದ ಈ ಪಂದ್ಯದಲ್ಲಿ ರಿಷಬ್ ಪಂತ್ ಅವರ ಶತಕ ಶುರುವಾಯಿತು. 2019ರಲ್ಲಿ, ಸಿಡ್ನಿಯಲ್ಲಿ 159 ರನ್ ಭಾರಿಸಿದರು. ಅಹಮದಾಬಾದ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದರು. ಈ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಪಂದ್ಯದಲ್ಲಿ ಶತಕ ಗಳಿಸಿದರು, ಆಗಲು ತಂಡದಲ್ಲಿ ಭಾರಿ ಒತ್ತಡ ಇತ್ತು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸಹ ಪಂತ್ ಉತ್ತಮ ಪ್ರದರ್ಶನ ನೀಡಿದ್ದರು. 260 ರನ್ ಬೆನ್ನಟ್ಟುವಾಗ ಶತಕ ಗಳಿಸಿದ್ದರು ಪಂತ್.

ಮಧ್ಯಮ ಕ್ರಮಾಂಕಕ್ಕೆ ಎಡಗೈ ಬ್ಯಾಟ್ಸ್ಮನ್ :- ಏಷ್ಯಾಕಪ್ 2022ನಲ್ಲಿ ದಿನೇಶ್ ಕಾರ್ತಿಕ್ ಅವರು ಸಹ ಆಯ್ಕೆಯಾಗಿದ್ದರು. ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿದ್ದು ಅವರಿಗೆ. ನಂತರ ರಿಷಬ್ ಪಂತ್ ಅವರು ಆಯ್ಕೆಯಾಗಲು ಮುಖ್ಯ ಕಾರಣ ಅವರು ಎಡಗೈ ನ್ಯಾಟ್ಸ್ಮನ್ ಎನ್ನುವುದಾಗಿದೆ. ರವೀಂದ್ರ ಜಡೇಜಾ ಅವರು ಗಾಯದಿಂದ ಹೊರಗಿರುವ ಕಾರಣ, ಮಧ್ಯಮ ಕ್ರಮಾಂಕಕ್ಕೆ ಎಡಗೈ ಬ್ಯಾಟ್ಸ್ಮನ್ ಇದ್ದರೆ ಒಳ್ಳೆಯದು, ಲೆಗ್ ಸ್ಪಿನ್ನರ್ ಗಳ ಎದುರು ಎಡಗೈ ಬ್ಯಾಟ್ಸ್ಮನ್ ಗಳು ಉತ್ತಮವಾದ ಪ್ರದರ್ಶನ ಕೊಡುತ್ತಾರೆ ಎನ್ನುವ ಕಾರಣಕ್ಕೆ ಕ್ರಿಕೆಟ್ ತಜ್ಞರು ಪಂತ್ ಅವರನ್ನು ಆಯ್ಕೆ ಮಾಡಿದ್ದಾರೆ.