ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಸರಣಿಗಳಿಗೆ ಭಾರತ ತಂಡ ಘೋಷಣೆ ಮಾಡಿದ ಆಯ್ಕೆ ಸಮಿತಿ. ಹೇಗಿದೆ ಗೊತ್ತೇ ಸಂಪೂರ್ಣ ತಂಡ??
ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಸರಣಿಗಳಿಗೆ ಭಾರತ ತಂಡ ಘೋಷಣೆ ಮಾಡಿದ ಆಯ್ಕೆ ಸಮಿತಿ. ಹೇಗಿದೆ ಗೊತ್ತೇ ಸಂಪೂರ್ಣ ತಂಡ??
ಟಿ20 ವಿಶ್ವಕಪ್ ಪಂದ್ಯಗಳು ಶುರು ಆಗುವುದಕ್ಕಿಂತ ಮೊದಲು, ಭಾರತದಲ್ಲಿ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧ ಎರಡು ಸರಣಿ ಪಂದ್ಯಗಳು ನಡೆಯಲಿದೆ. ಈ ಪಂದ್ಯಗಳಿಗೆ ಎರಡು ಟಿ20 ತಂಡಗಳನ್ನು ಬಿಸಿಸಿಐ ಆಯ್ಕೆ ಮಾಡಿ, ನಿನ್ನೆ ಪ್ರಕರಣೆ ಮಾಡಿದ್ದಾರೆ. ವಿಶ್ವಕಪ್ ಗಿಂತ ಮೊದಲು ನಡೆಯಲಿರುವ ಈ ಪಂದ್ಯಗಳು ಸಹ ಭಾರತ ತಂಡಕ್ಕೆ ಬಹಳ ಮುಖ್ಯವಾದ ಪಂದ್ಯಗಳಾಗಿದೆ. ಈ ಬಾರಿ ಆಯ್ಕೆ ಸಮಿತಿ ಆಯ್ಕೆ ಮಾಡಿರುವ ಆಟಗಾರರು ಯಾರ್ಯಾರು? ಯಾರಿಗೆ ಗೇಟ್ ಪಾಸ್ ಸಿಕ್ಕಿದೆ ? ಏನೆಲ್ಲಾ ಬದಲಾವಣೆಗಳು ನಡೆದಿದೆ ಎಂದು ತಿಳಿಸುತ್ತೇವೆ ನೋಡಿ..
ಮೊಹಮ್ಮದ್ ಶಮಿ ಅವರು ಈಗ ಭಾರತ ತಂಡಕ್ಕೆ ವಾಪಸ್ ಬಂದಿದ್ದಾರೆ, ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ಪರವಾಗಿ ಶಮಿ ಅವರು ಅದ್ಭುತ ಪ್ರದರ್ಶನ ನೀಡಿದ್ದರು. ಏಷ್ಯಾಕಪ್ ನಲ್ಲಿ ಇವರನ್ನು ಆಯ್ಕೆ ಮಾಡದೆ ಇದ್ದದ್ದು ಟೀಕೆಗೆ ಒಳಗಾಗಿದ್ದು, ಶಮಿ ಅವರು ಕೊನೆಗೂ ಭಾರತ ತಂಡಕ್ಕೆ ಮರಳಿ ಬಂದಿದ್ದಾರೆ. ಹಾಗೆಯೇ, ಇಂಜುರಿ ಇಂದ ಹೊರಗುಳಿದಿದ್ದ ಹರ್ಷಲ್ ಪಟೇಲ್ ಹಾಗೂ ಜಸ್ಪ್ರೀತ್ ಬುಮ್ರ ಸಹ ಮರಳಿ ಬಂದಿದ್ದಾರೆ. ಹಾಗೂ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ಮೂವರನ್ನು ಸಹ ಬೆಂಗಳೂರಿನ ಎನ್.ಸಿ.ಎ ಕಂಡೀಷನಲ್ ಕೋರ್ಸ್ ಪಡೆಯಲು ಸೂಚಿಸಲಾಗಿದೆ.
ಸೌತ್ ಆಫ್ರಿಕಾ ಸರಣಿ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್ ಇರುವುದಿಲ್ಲ. ಆ ಸಮಯದಲ್ಲಿ ಎನ್.ಸಿ.ಎ ನಲ್ಲಿ ಇರಲಿದ್ದಾರೆ, ಹಾಗೂ ಸೌತ್ ಆಫ್ರಿಕಾ ಸರಣಿಯಲ್ಲಿ ಅರ್ಷದೀಪ್ ಸಿಂಗ್ ಅವರು ಆಸ್ಟ್ರೇಲಿಯಾ ಸರಣಿಯಲ್ಲಿ ಇರುವುದಿಲ್ಲ, ಆ ಸಮಯದಲ್ಲಿ ಅವರು ಎನ್.ಸಿ.ಎ ನಲ್ಲಿ ಇರಲಿದ್ದಾರೆ. ಈ ಮೂವರು ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಈ ಎರಡು ಸರಣಿಗಳಿಗೆ ಭಾರತ ತಂಡ ಆಯ್ಕೆ ಮಾಡಿರುವ 15 ಸದಸ್ಯರ ತಂಡ ಹೀಗಿದೆ.
ಆಸ್ಟ್ರೇಲಿಯಾ ಸರಣಿ :- ರೋಹಿತ್ ಶರ್ಮಾ (ಕ್ಯಾಪ್ಟನ್), ಕೆ.ಎಲ್.ರಾಹುಲ್ (ವೈಸ್ ಕ್ಯಾಪ್ಟನ್), ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹರ್, ಜಸ್ಪ್ರೀತ್ ಬುಮ್ರ.
ಸೌತ್ ಆಫ್ರಿಕಾ ಸರಣಿ :- ರೋಹಿತ್ ಶರ್ಮಾ (ಕ್ಯಾಪ್ಟನ್), ಕೆ.ಎಲ್.ರಾಹುಲ್ (ವೈಸ್ ಕ್ಯಾಪ್ಟನ್), ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆರ್.ಅಶ್ವಿನ್, ಯುಜವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹರ್, ಹಾಗೂ ಜಸ್ಪ್ರೀತ್ ಬುಮ್ರ.