ಕೊನೆಗೂ ಕನಸು ಆಯಿತು ನನಸು, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ದಿನೇಶ್ ಕಾರ್ತಿಕ್ ಕೊಟ್ಟ ಮೊದಲ ಪ್ರತಿಕ್ರಿಯೆ ಏನು ಗೊತ್ತೇ??

ಕೊನೆಗೂ ಕನಸು ಆಯಿತು ನನಸು, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ದಿನೇಶ್ ಕಾರ್ತಿಕ್ ಕೊಟ್ಟ ಮೊದಲ ಪ್ರತಿಕ್ರಿಯೆ ಏನು ಗೊತ್ತೇ??

ದಿನೇಶ್ ಕಾರ್ತಿಕ್ ಅವರು ಎಲ್ಲಾ ಕ್ರಿಕೆಟ್ ಪ್ರಿಯರಿಗೂ ಹಾಗೂ ಕ್ರಿಕೆಟ್ ಆಡಲು ಬಯಸುವವರೆಗೂ ಸ್ಪೂರ್ತಿಯಾಗುವಂತಹ ಒಬ್ಬ ಆಟಗಾರ ಎಂದರೆ ತಪ್ಪಾಗುವುದಿಲ್ಲ. ಕೆಲ ವರ್ಷಗಳ ಫಾರ್ಮ್ ನಲ್ಲಿ ಇಲ್ಲದ ದಿನೇಶ್ ಕಾರ್ತಿಕ್ ಅವರು ಈ ವರ್ಷ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡದ ಪರವಾಗಿ ಅದ್ಭುತವಾದ ಪ್ರದರ್ಶನ ನೀಡಿ, ಫಿನಿಷರ್ ಆಗಿ ಆರ್.ಸಿ.ಬಿ ಆಪತ್ಬಾಂಧವ ಆಗಿದ್ದ ಡಿಕೆ ಅವರು ನ್ಯಾಷನಲ್ ಟೀಮ್ ನಲ್ಲಿ ಆಡಬೇಕು ಎನ್ನುವ ಕನಸನ್ನು ನನಸು ಮಾಡಿಕೊಂಡರು.

ಇದೀಗ ದಿನೇಶ್ ಕಾರ್ತಿಕ್ ಅವರ ಮತ್ತೊಂದು ಕನಸು ನನಸಾಗಿದೆ. ಬಿಸಿಸಿಐ ಈಗ ಟಿ20 ವಿಶ್ವಕಪ್ ನಲ್ಲಿ ಸ್ಥಾನ ಪಡೆದಿರುವ ಆಟಗಾರರ ಹೆಸರನ್ನು ಪ್ರಕಟಣೆ ಮಾಡಿದ್ದು, ದಿನೇಶ್ ಕಾರ್ತಿಕ್ ಅವರು ಅದರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಮಾತ್ರವಲ್ಲ ದಿನೇಶ್ ಕಾರ್ತಿಕ್ ಅವರಿಗೂ ಬಹಳ ಸಂತೋಷದ ವಿಚಾರ. ಟಿ20 ವಿಶ್ವಕಪ್ ನಲ್ಲಿ ಭಾರತದ ಪರವಾಗಿ ಆಡಬೇಕು ಎನ್ನುವುದು ದಿನೇಶ್ ಕಾರ್ತಿಕ್ ಅವರ ಬಹುದಿನಗಳ ಆಸೆ ಆಗಿತ್ತು. ಇದೀಗ ಆ ಕನಸು ನನಸಾಗಿದೆ, ಈ ಸಂತೋಷದ ವಿಚಾರದ ಬಗ್ಗೆ ಕಾರ್ತಿಕ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ, ಟ್ವೀಟ್ ಮಾಡಿರುವ ದಿನೇಶ್ ಕಾರ್ತಿಕ್ ಅವರು, “ಕನಸು ನನಸಾಗಿದೆ..” ಎಂದು ಬರೆದು ನೀಲಿ ಹೃದಯದ ಸಿಂಬಲ್ ಶೇರ್ ಮಾಡಿಕೊಂಡಿದ್ದಾರೆ.

ಅಭಿಮಾನಿಗಳು ಸಹ ಕಾರ್ತಿಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಏಷ್ಯಾಕಪ್ ಪಂದ್ಯಗಳಿಗೆ ದಿನೇಶ್ ಕಾರ್ತಿಕ್ ಅವರು ಆಯ್ಕೆಯಾದರು ಸಹ, ಅವರಿಗೆ ಆಡುವ ಅವಕಾಶ ಸರಿಯಾಗಿ ಸಿಗಲಿಲ್ಲ, ದಿನೇಶ್ ಕಾರ್ತಿಕ್ ಅವರನ್ನು ಪ್ಲೇಯಿಂಗ್ 11 ಇಂದ ಹೊರಗೆ ಇಟ್ಟಿದ್ದಕ್ಕೆ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಕಾರ್ತಿಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿರುವುದರಿಂದ ಭಾರತ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಇನ್ನು ಸ್ಥಿರವಾಗಿರುವ ಹಾಗೆ ತೋರುತ್ತಿದೆ. ಟಿ೨೦ ವರ್ಲ್ಡ್ ಕಪ್ ನಲ್ಲಿ ಮಾತ್ರವಲ್ಲದೆ ಆಸ್ಟ್ರೇಲಿಯಾ ಹಾಗು ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸಹ ಬ್ಯಾಟಿಂಗ್ ಮಾಡಲಿದ್ದಾರೆ ದಿನೇಶ್ ಕಾರ್ತಿಕ್. 2004 ರಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಎಂಟ್ರಿ ಕೊಟ್ಟ ದಿನೇಶ್ ಕಾರ್ತಿಕ್ ಅವರು, 2007ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಪಾಲ್ಗೊಂಡರು, ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ತಂಡ ಗೆದ್ದಾಗ ಟೀಮ್ ನಲ್ಲಿದ್ದರು, ಇದೀಗ ಮತ್ತೊಮ್ಮೆ ದಿನೇಶ್ ಕಾರ್ತಿಕ್ ಅವರು, ವಿಶ್ವಕಪ್ ತಂಡಕ್ಕೆ ಸೆಲೆಕ್ಟ್ ಆಗಿದ್ದು, ಮತ್ತೊಮ್ಮೆ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ.