ಬಿಗ್ ನ್ಯೂಸ್: ಕೊನೆಗೂ ಘೋಷಣೆಯಾಯಿತು ವಿಶ್ವಕಪ್ ಗೆ ಭಾರತ ತಂಡ: ಅಚ್ಚರಿ ಎಂಬಂತೆ ಸ್ಥಾನ ಪಡೆದವರು ಯಾರ್ಯಾರು ಗೊತ್ತಾ?? ಆಯ್ಕೆ ಸಮಿತಿ ಮಾಡಿದ ಎಡವಟ್ಟೇನು ಗೊತ್ತಾ??

ಬಿಗ್ ನ್ಯೂಸ್: ಕೊನೆಗೂ ಘೋಷಣೆಯಾಯಿತು ವಿಶ್ವಕಪ್ ಗೆ ಭಾರತ ತಂಡ: ಅಚ್ಚರಿ ಎಂಬಂತೆ ಸ್ಥಾನ ಪಡೆದವರು ಯಾರ್ಯಾರು ಗೊತ್ತಾ?? ಆಯ್ಕೆ ಸಮಿತಿ ಮಾಡಿದ ಎಡವಟ್ಟೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡ ಏಷ್ಯಾ ಕಪ್ ನಲ್ಲಿ ಸೋಲನ್ನು ಕಂಡ ಬಳಿಕ ಮುಂದಿನ ವಿಶ್ವಕಪ್ ತಂಡದ ಆಯ್ಕೆ ಹೇಗಿರಲಿದೆ ಎಂಬುದು ಎಲ್ಲರಲ್ಲೂ ಬಾರಿ ಕುತೂಹಲ ಮೂಡಿಸಿದ್ದು ಸುಳ್ಳಲ್ಲ. ಯಾಕೆಂದರೆ ಆಟವಾಡುವ 11 ರ ಬಳಗದಲ್ಲಿ ರೋಹಿತ್ ಹಾಗೂ ದ್ರಾವಿಡ್ ರವರು ಸದಾ ಪದೇ ಪದೇ ತಪ್ಪುಗಳನ್ನು ಮಾಡುತ್ತಾ ಕೊನೆಗೂ ಭಾರತ ತಂಡ ಸೋಲುವಂತೆ ಮಾಡಿ ಬಿಟ್ಟಿದ್ದರು. ಇನ್ನು ಕೆಲವು ಆಟಗಾರರು ಜವಾಬ್ದಾರಿಯನ್ನು ಮರೆತು ಆಟವಾಡಿದರೆ ಇನ್ನು ಕೆಲವರು ಅತಿಯಾದ ಆತ್ಮವಿಶ್ವಾಸದಿಂದ ಭಾರತದ ಸೋಲಿಗೆ ನೇರ ಕಾರಣವಾಗಿದ್ದರು.

ಪ್ರಯೋಗ ಪ್ರಯೋಗ ಎಂಬ ಹೆಸರಿನಲ್ಲಿ ಭಾರತ ಕ್ರಿಕೆಟ್ ತಂಡ ಏಷ್ಯಾ ಕಪ್ ನಲ್ಲಿ ಹೀನಾಯವಾಗಿ ಸೋತು ಫೈನಲ್ ತಲುಪುವ ಮುನ್ನವೇ ಟೂರ್ನಿಯಿಂದ ಹೊರ ಬಿದ್ದಿತ್ತು. ಹೀಗಿರುವಾಗ ಆಟವಾಡುವ ಹನ್ನೊಂದರ ಬಳಗ ಹೇಗಿರಲಿದೆ ಹಾಗೂ ಏಷ್ಯಾ ಕಪ್ ನಲ್ಲಿ ವಿಫಲವಾಗಿರುವ ಆಟಗಾರರನ್ನು ಕೈಬಿಡುತ್ತಾರೆಯೇ ಅಥವಾ ರಿಸ್ಕ್ ತೆಗೆದುಕೊಂಡು ಅವರನ್ನು ಕೂಡ ಸೆಲೆಕ್ಟ್ ಮಾಡಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಆಡಲಿದೆಯೇ ಎಂಬ ಚರ್ಚೆಗಳು ಜೋರಾಗಿ ನಡೆದಿದ್ದವು. ಇಷ್ಟೇ ಅಲ್ಲದೆ ಇಂಜುರಿ ಯಾಗಿದ್ದ ಹರ್ಷಲ್ ಪಟೇಲ್ ಹಾಗೂ ಜಸ್ಪಿತ್ ಬುಮ್ರಾ ರವರು ಕೂಡ ವಾಪಸ್ಸು ಬರುತ್ತಾರೆಯೇ ಇಲ್ಲವೋ ಎಂಬ ಆತಂಕ ಅಭಿಮಾನಿಗಳನ್ನು ಕಾಡಿತ್ತು.

ಕೊನೆಗೂ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಎಲ್ಲಾ ಚರ್ಚೆಗಳಿಗೂ ಬ್ರೇಕ್ ಹಾಕಿದ್ದು ಗಡುವಿಗೆ ಇನ್ನೂ ನಾಲ್ಕು ದಿನ ಇರುವ ಸಮಯದಲ್ಲಿ ಭಾರತ ಕ್ರಿಕೆಟ್ ತಂಡ ಟಿ 20 ವಿಶ್ವಕಪ್ ಗೆ ಬಲಿಷ್ಟ 15 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೆಲವು ಆಟಗಾರರು ನಿರೀಕ್ಷೆ ಮಾಡದಂತೆ ಸ್ಥಾನ ಪಡೆದರೇ ಇನ್ನು ಕೆಲವರು ಬಹುತೇಕ ಸ್ಥಾನ ಫಿಕ್ಸ್ ಮಾಡಿಕೊಂಡು ಎಂದಿನಂತೆ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ತಂಡದ ಸಂಯೋಜನೆ ಹೇಗಿದೆ ಹಾಗೂ ಯಾವ ಯಾವ ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂಬುದರ ಸಂಪೂರ್ಣ ವಿವರಣೆ ನಾವು ಕೊಡುತ್ತೇವೆ ನೋಡಿ.

ಸ್ನೇಹಿತರೇ ಮೊದಲನೆಯದಾಗಿ ಭಾರತ ಕ್ರಿಕೆಟ್ ತಂಡ ಆರಂಭಿಕರಾಗಿ ಮೊದಲೇ ಊಹೆ ಮಾಡಿದಂತೆ ರೋಹಿತ್ ಶರ್ಮ ಹಾಗೂ ರಾಹುಲ್ ರವರನ್ನು ಆಯ್ಕೆ ಮಾಡಿದೆ, ಶಿಖರ್ ಧವನ್ ರವರು ಉತ್ತಮ ಫಾರ್ಮ್ ನಲ್ಲಿ ಇದ್ದು ರಾಹುಲ್ ರವರು ಇತ್ತೀಚೆಗೆ ಪದೇ ಪದೇ ವಿಫಲವಾಗಿದ್ದರೂ ಕೂಡ ರಾಹುಲ್ ರವರು ಉಪ ನಾಯಕನಾಗಿ ಹಾಗೂ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ, ಇನ್ನು ಮೂರನೇ ಹಾಗೂ ನಾಲ್ಕನೇ ಸ್ಥಾನದಲ್ಲಿ ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಹಾಗೂ ಸೂರ್ಯ ಕುಮಾರ್ ಯಾದವ್ ರವರು ಸ್ಥಾನ ಪಡೆದಿದ್ದಾರೆ.

ಇನ್ನು ಐದನೇ, ಆರನೇ, 7 ನೇ ಕ್ರಮಾಂಕದಲ್ಲಿ ಭಾರತ ಕ್ರಿಕೆಟ್ ತಂಡ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದು ನಿಮಗೆಲ್ಲರಿಗೂ ತಿಳಿದ ಇದೆ. ಯಾಕೆಂದರೆ ಕೊನೆಯ ಓವರ್ ಗಳಲ್ಲಿ ಅತ್ಯದ್ಭುತ ಬ್ಯಾಟಿಂಗ್ ಮಾಡಲು ಹಾಗೂ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವ ಆಟಗಾರರ ಕೊರತೆ ಭಾರತ ತಂಡದಲ್ಲಿ ಎದ್ದು ಕಾಣುತ್ತಿದೆ. ಇಂತಹ ಸಮಯದಲ್ಲಿ ದೀಪಕ್ ಹೂಡಾ, ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಹಾಗೂ ಆಲ್ರೌಂಡರ್ ಆಗಿ ಹಾರ್ಧಿಕ್ ಪಾಂಡ್ಯ, ಆರ್ ಅಶ್ವಿನ್ ರವರನ್ನು ಆಯ್ಕೆ ಮಾಡಲಾಗಿದೆ. ಈ 5 ಜನಕ್ಕೂ ಒಟ್ಟಾರೆಯಾಗಿ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಆದರೆ ಐದು ಆಟಗಾರರಲ್ಲಿ ಖಚಿತವಾಗಿ ಮೂರು ಜನ ಸ್ಥಾನ ಪಡೆಯುತ್ತಾರೆ.

ಇನ್ನುಳಿದಂತೆ ಆರು ಸಂಪೂರ್ಣ ಬೌಲರ್ ಗಳನ್ನೂ ಹೆಸರಿಸಿರುವ ಆಯ್ಕೆ ಸಮಿತಿ ಸ್ಪಿನ್ನರ್ ಗಳ ಕೋಟಾದಲ್ಲಿ ಯಜುವೇಂದ್ರ ಚಾಹಲ್ ಹಾಗೂ ಅಕ್ಷರ್ ಪಟೇಲ್ ರವರನ್ನು ಆಯ್ಕೆ ಮಾಡಿದೆ, ಇನ್ನು ಬಹು ಮುಖ್ಯವಾದ ಬೌಲಿಂಗ್ ವಿಭಾಗದಲ್ಲಿ ಭಾರತ ತಂಡ ಅತ್ಯದ್ಭುತ ಆಯ್ಕೆಯನ್ನು ಮಾಡಿದ್ದು ಜಸ್ಪಿತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಹಾಗೂ ಹರ್ಷದೀಪ್ ಸಿಂಗ್ ರವರು ಸ್ಥಾನ ಪಡೆದಿದ್ದಾರೆ. ವಿಶೇಷ ಏನು ಎಂದರೆ ಈ ನಾಲ್ಕು ಜನ ಬೌಲರ್ ಗಳು ಕೂಡ ಕೊನೆಯ ಓವರ್ ಗಳಲ್ಲಿ ಬೌಲಿಂಗ್ ಮಾಡುವುದರಲ್ಲಿ ಎತ್ತಿದ ಕೈ . ಒಟ್ಟಾರೆಯಾಗಿ 15ರ ಬಳಗ ಈ ಕೆಳಗಿನಂತೆ ಗೆದ್ದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ

ICC ಪುರುಷರ T20 ವಿಶ್ವಕಪ್ 2022 ಗಾಗಿ ಭಾರತ ತಂಡ: ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್ (ವಿಸಿ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (ಡಬ್ಲ್ಯುಕೆ), ದಿನೇಶ್ ಕಾರ್ತಿಕ್ (ಡಬ್ಲ್ಯುಕೆ), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ವೈ ಚಾಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಬಿ. ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್