ವಿಶ್ವಕಪ್ ನಲ್ಲಿ ಭಾರತದ ಬೌಲಿಂಗ್ ವಿಭಾಗದಲ್ಲಿ ಈ 5 ಬೌಲರ್ ಗಳು ಫಿಕ್ಸ್. ಇವರು ಇದ್ದರೇ ಸಾಕು, ಗೆಲುವು ನಮ್ಮದೇ. ಯಾರ್ಯಾರು ಗೊತ್ತೇ??
ವಿಶ್ವಕಪ್ ನಲ್ಲಿ ಭಾರತದ ಬೌಲಿಂಗ್ ವಿಭಾಗದಲ್ಲಿ ಈ 5 ಬೌಲರ್ ಗಳು ಫಿಕ್ಸ್. ಇವರು ಇದ್ದರೇ ಸಾಕು, ಗೆಲುವು ನಮ್ಮದೇ. ಯಾರ್ಯಾರು ಗೊತ್ತೇ??
ಐಸಿಸಿ ಟಿ20 ವರ್ಲ್ಡ್ ಕಪ್ ಶುರುವಾಗಲು ಹೆಚ್ಚಿನ ಸಮಯ ಇಲ್ಲ. ಸೆಪ್ಟೆಂಬರ್ 16ರಂದು, ಐಸಿಸಿಐ ಟಿ20 ಪಂದ್ಯಗಳಿಗೆ ಭಾರತ ತಂಡದ ಸ್ಕ್ವಾಡ್ ಅನ್ನು ಬಿಸಿಸಿಐ ಸೆಲೆಕ್ಟ್ ಮಾಡಲಿದೆ. ಈಗಾಗಲೇ ಹಲವರು ವಿಶ್ವಕಪ್ ಪಂದ್ಯಗಳಲ್ಲಿ ಭಾರತ ತಂಡದಲ್ಲಿ ಆಗಬೇಕಿರುವ ಬದಲಾವಣೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಹಾಗೂ ಯಾವ ಆಟಗಾರರು ಭಾರತ ತಂಡದಿಂದ ಹೊರಹೋಗಬಹುದು ಎನ್ನುವುದನ್ನು ಸಹ ಚರ್ಚೆ ಮಾಡಲಾಗಿದೆ. ಇಂದು ನಾವು ನಿಮಗೆ ಯಾವ 5 ಬೌಲರ್ ಗಳು ತಪ್ಪದೆ, ತಂಡಕ್ಕೆ ಸೇರ್ಪಡೆಯಾಗುತ್ತಾರೆ ಎಂದು ತಿಳಿಸುತ್ತೇವೆ.. ಆ 5 ಬೌಲರ್ ಗಳು ಯಾರ್ಯಾರು ಎಂದು ನೋಡಿ..
ಅರ್ಷದೀಪ್ ಸಿಂಗ್ :- ಇವರು ಬಹಳ ಕಡಿಮೆ ಸಮಯದಲ್ಲಿ ಚೆಂಡನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಕಲಿತುಕೊಂಡಿದ್ದಾರೆ. ಎರಡು ಬಾರಿ ಭಾರತ ತಂದಕ್ಕಾಗಿ 7 ರನ್ಸ್ ಗಳನ್ನು ಡಿಫೆಂಡ್ ಮಾಡಿಕೊಂಡಿದ್ದಾರೆ. ಎದುರಾಳಿ ತಂಡದ ಬ್ಯಾಟ್ಸ್ಮನ್ ರನ್ನು ಹೇಗೆ ಆಟವಾದಿಸಬೇಕು ಎಂದು ಇವರಿಗೆ ಗೊತ್ತಿದೆ. ಹಾಗಾಗಿ ಅರ್ಷದೀಪ್ ಸಿಂಗ್ ಅವರು ಟಿ20 ವಿಶ್ವಕಪ್ ಗೆ ಸೆಲೆಕ್ಟ್ ಆಗುವುದು ಪಕ್ಕಾ ಆಗಿದೆ.
ಭುವನೇಶ್ವರ್ ಕುಮಾರ್ :- ಒಂದೆರಡು ಪಂದ್ಯಗಳಲ್ಲಿ ಇವರಿಂದ ತಪ್ಪು ನಡೆದರು ಸಹ, ಆ ತಪ್ಪನ್ನು ಹೇಗೆ ಸರಿಮಾಡಿಕೊಳ್ಳಬೇಕು ಎಂದು ಭುವನೇಶ್ವರ್ ಕುಮಾರ್ ಅವರಿಗೆ ಚೆನ್ನಾಗಿದೆ ಗೊತ್ತಿದೆ. ಮುಂದಿನ ಪಂದ್ಯದಲ್ಲೇ ಒಳ್ಳೆಯ ಪ್ರದರ್ಶನದ ಮೂಲಕ ಕಂಬ್ಯಾಕ್ ಮಾಡಿದ್ದರು. ಅಫ್ಗಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಪಡೆದುಕೊಂಡರು. ಇವರು ಐಸಿಸಿ ಟಿ20 ವರ್ಲ್ಡ್ ಕಪ್ ಗೆ ಸೆಲೆಕ್ಟ್ ಆಗುವುದು ಪಕ್ಕಾ ಎನ್ನಲಾಗುತ್ತಿದೆ.
ಜಸ್ಪ್ರೀತ್ ಬುಮ್ರ :- ಭಾರತ ತಂಡದ ಪ್ರಮುಖ ವೇಗಿ, ಮ್ಯಾಚ್ ವಿನ್ನಿಂಗ್ ಬೌಲರ್ ಇವರು. ಬುಮ್ರ ಅವರು ಇಂಜುರಿ ಕಾರಣ ಟೀಮ್ ಇಂದ ಹೊರಗೆ ಉಳಿದಿದ್ದಾರೆ. ಒಂದು ವೇಳೆ ಟಿ20 ವಿಶ್ವಕಪ್ ಶುರು ಆಗುವುದರ ಒಳಗೆ ಬುಮ್ರ ಅವರು ಫಿಟ್ ಆದರೆ, ಅವರು ಕೂಡ ವರ್ಲ್ಡ್ ಕಪ್ ತಂಡಕ್ಕೆ ಆಯ್ಕೆಯಾಗುವುದು ಖಂಡಿತ.
ಹರ್ಷ ಪಟೇಲ್ :- ಇಂಜುರಿ ಇಂದಾಗಿ ಹೊರಗಿರುವ ಹರ್ಷಲ್ ಪಟೇಲ್ ಅವರು, ವರ್ಲ್ಡ್ ಕಪ್ ಶುರು ಆಗುವುದರ ಒಳಗೆ ಫಿಟ್ ಆಗಿ ವರ್ಲ್ಡ್ ಕಪ್ ತಂಡಕ್ಕೆ ಆಯ್ಕೆಯಾಗುವುದು ಪಕ್ಕ ಆಗಿದೆ. ಇವರು ಎಕನಾಮಿಕಲ್ ಓವರ್ ಗಳಲ್ಲಿ ಹಾಗೂ ಡೆತ್ ಓವರ್ ಗಳಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಾರೆ. ಸ್ಲೋ ಬೌನ್ಸರ್ಸ್, ಯಾರ್ಕರ್, ಆಫ್ ಕಟರ್ಸ್ ಗಳನ್ನು ಅದ್ಭುತವಾಗಿ ಹಾಕುತ್ತಾರೆ.
ಯುಜವೇಂದ್ರ ಚಾಹಲ್ :- ಟಿ20 ಪಂದ್ಯಗಳಿಗೆ ಅದ್ಭುತವಾದ ಸ್ಪಿನ್ನರ್ ಇವರು. ಏಷ್ಯಾಕಪ್ ನಲ್ಲಿ ಇವರ ಪ್ರದರ್ಶನ ಅಷ್ಟೇನು ಚೆನ್ನಾಗಿಲ್ಲದೆ ಹೋದರು ಸಹ, ವರ್ಲ್ಡ್ ಕಪ್ ಗೆ ಇವರು ಆಯ್ಕೆ ಆಗುವುದು ಖಚಿತ. ಇವರನ್ನು ಸೆಲೆಕ್ಟ್ ಮಾಡದೆ ಹೋದರೆ ಭಾರತ ತಂಡ ಕಷ್ಟಕ್ಕೆ ಸಿಲುಕುವುದು ಖಂಡಿತ. ಭುವನೇಶ್ವರ್ ಕುಮಾರ್ ಅವರ ನಂತರ ಚಾಹಲ್ ಅವರು ಭಾರತ ತಂಡದಲ್ಲಿ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಯಶಸ್ಸು ಪಡೆದಿರುವ 2ನೇ ಬೌಲರ್ ಆಗಿದ್ದಾರೆ.