ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿಶ್ವಕಪ್ ಗಾಗಿ ಭಾರತ ಕ್ರಿಕೆಟ್ ತಂಡವನ್ನು ಘೋಷಣೆ ಮಾಡಿದ ಮಾಜಿ ವೇಗಿ RP ಸಿಂಗ್. ಸ್ಥಾನ ಪಡೆದ ಹನ್ನೊಂದು ಆಟಗಾರರು ಯಾರ್ಯಾರು ಗೊತ್ತೇ??

2,204

Get real time updates directly on you device, subscribe now.

ಪ್ರಸ್ತುತ ಎಲ್ಲಾ ಕ್ರಿಕೆಟ್ ಪ್ರಿಯರ ಕಣ್ಣು ಭಾರತ ಮ್ಯಾನೇಜ್ಮೆಂಟ್ ಟಿ20 ವಿಶ್ವಕಪ್ ತಂಡವನ್ನು ಯಾವಾಗ ಪ್ರಕಟಿಸುತ್ತದೆ, ಅದರಲ್ಲಿ ಯಾರೆಲ್ಲಾ ಸದಸ್ಯರು ಆಯ್ಕೆಯಾಗುತ್ತಾರೆ ಎನ್ನುವುದರ ಮೇಲಿದೆ. ಸೆಪ್ಟೆಂಬರ್ 16ರಂದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಟಿ20 ವಿಶ್ವಕಪ್ ನಲ್ಲಿ ಆಡಲಿರುವ 15 ಸದಸ್ಯರ ತಂಡವನ್ನು ಪ್ರಕಟಿಸಲಿದೆ. ಅದಕ್ಕಿಂತ ಮೊದಲು ಭಾರತದ ಕೆಲವು ಮಾಜಿ ಆಟಗಾರರು, ತಮ್ಮ ಮೆಚ್ಚಿನ 15 ಸದಸ್ಯರ ಟಿ20 ವಿಶ್ವಕಪ್ ತಂಡವನ್ನು ಘೋಷಿಸುತ್ತಿದ್ದು, ಇದೀಗ ಭಾರತದ ಮಾಜಿ ವೇಗಿ ಆರ್.ಪಿ.ಸಿಂಗ್ ಅವರು ಸಹ 15 ಆಟಗಾರರನ್ನು ಸೆಲೆಕ್ಟ್ ಮಾಡಿದ್ದಾರೆ.

ಆರ್.ಪಿ.ಸಿಂಗ್ ಅವರು ಮೊಹಮ್ಮದ್ ಶಮಿ ಮತ್ತು ಹರ್ಷಲ್ ಪಟೇಲ್ ಅವರನ್ನು ತಮ್ಮ ಲಿಸ್ಟ್ ಗೆ ಹಾಕಿಕೊಂಡಿದ್ದಾರೆ. 2021ರ ಐಸಿಸಿ ವರ್ಲ್ಡ್ ಕಪ್ ಪಂದ್ಯದ ಬಳಿಕ ಮೊಹಮ್ಮದ್ ಶಮಿ ಅವರು ಒಂದು ಪಂದ್ಯವನ್ನು ಆಡಿಲ್ಲದೆ ಹೋದರು ಸಹ, ಅವರನ್ನು ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾ ಪಿಚ್ ಅವರಿಗೆ ಬೌನ್ಸ್ ನೀಡುತ್ತದೆ ಎಂದು ನಂಬಿಕೆಯಿಂದ ಸೆಲೆಕ್ಟ್ ಮಾಡಿದ್ದಾರೆ. ರವಿಚಂದ್ರನ್ ಅಶ್ವಿನ್ ಹಾಗೂ ರವಿ ಬಿಶ್ನೋಯ್ ಅವರ ಬದಲಾಗಿ ಕುಲದೀಪ್ ಯಾದವ್ ಅವರನ್ನು ಆಯ್ಕೆಮಾಡಿದ್ದಾರೆ. ಕುಲದೀಪ್ ಯಾದವ್ ಅವರಿಗೆ ಆಸ್ಟ್ರೇಲಿಯಾ ಪಿಚ್ ಟ್ರಿಕಿ ಆಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್.ಪಿ.ಸಿಂಗ್ ಅವರು ಒಟ್ಟಾರೆಯಾಗಿ ಸೆಲೆಕ್ಟ್ ಮಾಡಿರುವ ತಂಡ ಹೀಗಿದೆ..
ಬ್ಯಾಟ್ಸ್ಮನ್ ಗಳು :- ರೋಹಿತ್ ಶರ್ಮಾ (ಕ್ಯಾಪ್ಟನ್), ಕೆಎಲ್ ರಾಹುಲ್ (ವೈಸ್ ಕ್ಯಾಪ್ಟನ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್ (ಆಲ್ ರೌಂಡರ್ )
ಬೌಲರ್ ಗಳು :- ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್, ದೀಪಕ್ ಚಹಾರ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್.
ಇದು ಆರ್.ಪಿ.ಸಿಂಗ್ ಅವರು ಪ್ರಕಟಿಸಿರುವ ತಂಡ ಆಗಿದೆ.

Get real time updates directly on you device, subscribe now.