ಕೆಎಲ್ ರಾಹುಲ್ ರವರನ್ನು ಹೊರಗಿಡುವ ಜೊತೆಗೆ ಈ 5 ಬದಲಾವಣೆ ಮಾಡಿದರೆ ಭಾರತಕ್ಕೆ ಮುಂದೆ ಗೆಲುವು ಫಿಕ್ಸ್. ಯಾವ್ಯಾವ ಬದಲಾವಣೆ ಮಾಡಬೇಕು ಗೊತ್ತೇ??
ಕೆಎಲ್ ರಾಹುಲ್ ರವರನ್ನು ಹೊರಗಿಡುವ ಜೊತೆಗೆ ಈ 5 ಬದಲಾವಣೆ ಮಾಡಿದರೆ ಭಾರತಕ್ಕೆ ಮುಂದೆ ಗೆಲುವು ಫಿಕ್ಸ್. ಯಾವ್ಯಾವ ಬದಲಾವಣೆ ಮಾಡಬೇಕು ಗೊತ್ತೇ??
ರೋಹಿತ್ ಶರ್ಮಾ ಅವರು ನಾಯಕನಾಗಿರುವ ಟೀಮ್ ಇಂಡಿಯಾ ಏಷ್ಯಾಕಪ್ ಸರಣಿಯಲ್ಲಿ ಹೀನಾಯ ಸೋಲಿನ ಮೂಲಕ, ಟೂರ್ನಿಯಿಂದ ಹೊರಬಂದಿತು. ಈ ಸೋಲು ಭಾರತ ತಂಡಕ್ಕೆ ದೊಡ್ಡ ಪಾಠವನ್ನೇ ಕಲಿಸಿದೆ, ಈಗ ಭಾರತದ ಮುಂದಿರುವುದು ಟಿ20 ವಿಶ್ವಕಪ್, ಇದಕ್ಕಾಗಿ ತಂಡ ಬಹಳ ಎಚ್ಚರಿಕೆಯಿಂದ ತಯಾರಿ ನಡೆಸಿ, ಗೆಲ್ಲಬೇಕಿದೆ. ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಕೆಲವು ಬದಲಾವಣೆಗಳನ್ನು ತರಬೇಕು, ಇಲ್ಲದೆ ಹೋದರೆ ತಂಡ ಕಷ್ಟಕ್ಕೆ ಸಿಲುಕುವುದು ಖಂಡಿತ. ಕೆ.ಎಲ್.ರಾಹುಲ್ ಅವರನ್ನು ಪ್ಲೇಯಿಂಗ್ 11 ಇಂದ ಹೊರಗಿಡಬೇಕು ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದೆ, ಆದರೆ ಜೊತೆಗೆ ಇನ್ನು 5 ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡರೆ ಮಾತ್ರ, ಭಾರತಕ್ಕೆ ಒಳ್ಳೆಯದು. ಆ ಐದು ಬದಲಾವಣೆಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..
ಮೊಹಮ್ಮದ್ ಶಮಿ ಅವರನ್ನು ತಂಡಕ್ಕೆ ಕರೆತರಬೇಕು :- ಶಮಿ ಅವರನ್ನು ಏಷ್ಯಾಕಪ್ ಗೆ ಆಯ್ಕೆ ಮಾಡದೆ ಮ್ಯಾನೇಜ್ಮೆಂಟ್ ಈಗಾಗಲೇ ತಪ್ಪು ಮಾಡಿದೆ, ಈ ವೇಗಿ ಆಟಗಾರನನ್ನು ತಂಡಕ್ಕೆ ಕರೆತಂದು ಅವಕಾಶ ಕೊಡಬೇಕು. ಮುಂಬರುವ ಎರಡು ಚುಟುಕು ಸರಣಿಗಳಲ್ಲಿ ಇವರಿಗೆ ಅವಕಾಶ ನೀಡಿದರೆ, ಉತ್ತಮವಾದ ಪ್ರದರ್ಶನ ನೀಡುವುದು ಖಚಿತ. ರವಿಶಾಸ್ತ್ರಿ ಅವರು ಹೇಳಿದ ಹಾಗೆ, ಮೊಹಮ್ಮದ್ ಶಮಿ ಅವರಂತಹ ಆಟಗಾರರು ಮನೆಯಲ್ಲಿರುವುದನ್ನು ನೋಡಲು ಬೇಸರ ಆಗುತ್ತದೆ. ಟಿ20 ವಿಶ್ವಕಪ್ ಪಂದ್ಯಗಳಿಗೆ ಶಮಿ ಅವರು ತಂಡದಲ್ಲಿರಬೇಕು ಅಸ್ಟ್ರೇಲಿಯಾ ಪಿಚ್ ನಲ್ಲಿ ಆಡುವ ಅವಕಾಶ ಅವರಿಗೆ ಸಿಗಬೇಕು ಎನ್ನುವ ಅಭಿಪ್ರಾಯ ಇದೆ.
ವಿರಾಟ್ ಕೋಹ್ಲಿ ಅವರು ಓಪನರ್ ಆಗಬೇಕು :- ಕೋಹ್ಲಿ ಅವರನ್ನು ಮೂರನೆಯ ಕ್ರಮಾಂಕಕ್ಕೆ ಇಡುವುದರ ಬದಲಾಗಿ, ಅವರಿಗೆ ರೋಹಿತ್ ಅವರೊಡನೆ ಓಪನರ್ ಆಗಿ ಕಣಕ್ಕೆ ಇಳಿಸಬೇಕು. ಹಾಗಿದ್ದರೆ ರಾಹುಲ್ ಅವರ ಸ್ಥಾನ ಹೇಗೆ ಎನ್ನುವುದರ ಬಗ್ಗೆ ಮುಂದೆ ತಿಳಿಸುತ್ತೇವೆ. ವಿರಾಟ್ ಕೋಹ್ಲಿ ಅವರು ಓಪನರ್ ಆಗಿ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಅವರನ್ನು ಓಪನರ್ ಆಗಿ ಕಳಿಸುವುದರಿಂದ ಮುಂದಿನ ಕ್ರಮಾಂಕದ ಬ್ಯಾಟ್ಸ್ಮನ್ ಗಳಿಗೆ ಒತ್ತಡ ಕಡಿಮೆ ಆಗುತ್ತದೆ ಎನ್ನುವ ಅಭಿಪ್ರಾಯ ಇದೆ.
ರಾಹುಲ್ ಅವರನ್ನು ತಂಡದಿಂದ ಹೊರಗಿಡಬೇಕು :- ರಾಹುಲ್ ಅವರು ಅದ್ಭುತವಾದ ಬ್ಯಾಟ್ಸ್ಮನ್ ಎನ್ನುವುದರಲ್ಲಿ ಸಂಶಯ ಇಲ್ಲ, ಆದರೆ ಅಫ್ಘಾನಿಸ್ತಾನ್ ಪಂದ್ಯವನ್ನು ಹೊರತುಪಡಿಸಿ, ಬೇರೆ ಪಂದ್ಯಗಳಲ್ಲಿ ರಾಹುಲ್ ಅವರು ಕಡಿಮೆ ಸ್ಟ್ರೈಕ್ ರೇಟ್ ನಲ್ಲಿ ಉತ್ತಮವಾದ ಪ್ರದರ್ಶನ ನೀಡಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಈಗಾಗಲೇ ಉತ್ತಮವಾದ ಪ್ರದರ್ಶನ ನೀಡುವ ಪ್ರತಿಭೆ ಇರುವ ಆಟಗಾರರು ಇದ್ದಾರೆ. ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಮೂವರು ಒಂದೇ ರೀತಿಯ ಬ್ಯಾಟ್ಸ್ಮನ್ ಗಳಾಗಿದ್ದು, ಇಂತಹ ಸಮಯದಲ್ಲಿ ಏಷ್ಯಾಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಕೆ.ಎಲ್.ರಾಹುಲ್ ಅವರನ್ನು ತಂಡದಿಂದ ಹೊರಗಿಡುವುದು ಒಳ್ಳೆಯದು.
ರಿಷಬ್ ಪಂತ್ ಬದಲಾಗಿ ದಿನೇಶ್ ಕಾರ್ತಿಕ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಕೊಡಬೇಕು :- ದಿನೇಶ್ ಕಾರ್ತಿಕ್ ಅವರು ಐಪಿಎಲ್ ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿ ಟೀಮ್ ಇಂಡಿಯಾಗೆ ಮರಳಿ ಬಂದಿದ್ದಾರೆ. ಆದರೆ ಇವರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ, ರಿಷಬ್ ಪಂತ್ ಅವರಿಗೆ ಅವಕಾಶಗಳನ್ನು ನೀಡಿ, ಅದರಿಂದ ಆಗಿದ್ದೆಲ್ಲವು ತಿಳಿದಿದೆ. ಹಾಗಾಗಿ ಫಾರ್ಮ್ ನಲ್ಲಿರುವ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ಕೊಡಬೇಕು. 2019ರಲ್ಲಿ ಸಹ ದಿನೇಶ್ ಕಾರ್ತಿಕ್ ಅವರು ತಂಡದಲ್ಲಿದ್ದರು ಸಹ ಅವರಿಗೆ ಸರಿಯಾಗಿ ಅವಕಾಶ ಕೊಡದೆ ಟೀಮ್ ಇಂಡಿಯಾ ತಪ್ಪು ಮಾಡಿತ್ತು, ಈಗ ಮತ್ತೆ ಅದೇ ತಪ್ಪನ್ನು ಮಾಡಬಾರದು.
ಸೂರ್ಯಕುಮಾರ್ ಯಾದವ್ 3ನೇ ಕ್ರಮಾಂಕದಲ್ಲಿ ಆಡಬೇಕು :- ಸೂರ್ಯಕುಮಾರ್ ಅವರು 360 ಬ್ಯಾಟ್ಸ್ಮನ್ ಎಂದೇ ಖ್ಯಾತಿ ಪಡೆದಿದ್ದಾರೆ. ಇವರು ಸಾಮಾನ್ಯವಾಗಿ 4ನೇ ಕ್ರಮಾಂಕದಲ್ಲಿ ಬರುತ್ತಾರೆ. ಆದರೆ ಮುಂದಿನ ಪಂದ್ಯಗಳಲ್ಲಿ ರೋಹಿತ್ ಅವರೊಡನೆ ವಿರಾಟ್ ಓಪನಿಂಗ್ ಮಾಡಿದರೆ 3ನೇ ಕ್ರಮಾಂಕ ನೀಡಿದರೆ, ಇವರು ಹೆಚ್ಚು ಬಾಲ್ ಗಳನ್ನು ಫೇಸ್ ಮಾಡಿ, ಉತ್ತಮ ರನ್ ಗಳನ್ನು ಕಲೆಹಾಕಲು ಸಹಾಯ ಮಾಡುತ್ತದೆ. ರೋಹಿತ್, ರಾಹುಲ್, ವಿರಾಟ್ ಹೀಗಿದ್ದ ಟಾಪ್ 3 ಕ್ರಮಾಂಕವನ್ನು ಬದಲಾಯಿಸಿದ ಹಾಗೂ ಆಗುತ್ತದೆ. ಸೂರ್ಯಕುಮಾರ್ ಯಾದವ್ ವಿಭಿನ್ನವಾದ ಬ್ಯಾಟ್ಸ್ಮನ್ ಆಗಿದ್ದು, ಭಾರತ ತಂಡದ ಸ್ಕೋರ್ ಜಾಸ್ತಿ ಮಾಡಲು ಇದು ಸಹಾಯ ಮಾಡುತ್ತದೆ.