ಬಹಳ ನಿರೀಕ್ಷೆ ಮೂಡಿಸಿರುವ ಭರವಸೆಯ ಬೌಲರ್ ಶಮಿ ರವರು ವಿಶ್ವಕಪ್ ನಲ್ಲಿ ಆಡುವುದು ಅನುಮಾನ. ಯಾಕೆ ಗೊತ್ತೇ??
ಬಹಳ ನಿರೀಕ್ಷೆ ಮೂಡಿಸಿರುವ ಭರವಸೆಯ ಬೌಲರ್ ಶಮಿ ರವರು ವಿಶ್ವಕಪ್ ನಲ್ಲಿ ಆಡುವುದು ಅನುಮಾನ. ಯಾಕೆ ಗೊತ್ತೇ??
ಭಾರತ ತಂಡದ ಪ್ರಮುಖ ಬೌಲರ್ ಗಳಲ್ಲಿ ಒಬ್ಬರಾದ ಮೊಹಮ್ಮದ್ ಶಮಿ ಅವರನ್ನು ಏಷ್ಯಾಕಪ್ ಗೆ ಯಾಕೆ ಆಯ್ಕೆ ಮಾಡಿಕೊಳ್ಳಲಿಲ್ಲ ಎನ್ನುವ ಬಗ್ಗೆ ಸಾಕಷ್ಟು ಹಿರಿಯ ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವರ್ಷ ಐಪಿಎಲ್ ನಲ್ಲಿ ಶಮಿ ಅವರು ಉತ್ತಮ ಪ್ರದರ್ಶನ ನೀಡಿದ್ದರು ಸಹ, ಅವರನ್ನು ಏಷ್ಯಾಕಪ್ ಟೂರ್ನಿಗೆ ಆಯ್ಕೆಮಾಡಿಕೊಳ್ಳಲಿಲ್ಲ. ಗುಜರಾತ್ ಟೈಟನ್ಸ್ ಕೋಚ್ ನೆಹ್ರಾ ಅವರು ಸಹ ತಮ್ಮ ಟಿ20 ತಂಡದಲ್ಲಿ ಶಮಿ ಅವರ ಹೆಸರನ್ನು ತೆಗೆದುಕೊಳ್ಳಲಿಲ್ಲ. ಇದೆಲ್ಲದರ ನಡುವೆ ಈಗ ಮೊಹಮ್ಮದ್ ಶಮಿ ಅವರು ಈ ವರ್ಷ ಟಿ20 ವಿಶ್ವಕಪ್ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಅದಕ್ಕೆ ಕೆಲವು ಕಾರಣಗಳು ಸಹ ತಿಳಿದುಬಂದಿದೆ.
ಮೊಹಮ್ಮದ್ ಶಮಿ ಅವರು ಈ ವರ್ಷ ಜುಲೈ ಬಳಿಕ ಯಾವುದೇ ಪಂದ್ಯ ಆಡಿಲ್ಲ. ಜುಲೈನಲ್ಲಿ ಮ್ಯಾಂಚೆಸ್ಟರ್ ನಲ್ಲಿ ನಡೆದ ಪಂದ್ಯದಲ್ಲಿ ಶಮಿ ಅವರು ದುಬಾರಿಯಾಗಿದ್ದರು, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶಮಿ ಅವರು, 38 ರನ್ ಬಿಟ್ಟುಕೊಟ್ಟಿದ್ದರು. ಅದಾದ ಬಳಿಕ ಅವರು ಟೀಮ್ ಇಂಡಿಯಾ ಇಂದ ಹೊರಗೆ ಉಳಿದಿದ್ದಾರೆ. ಏಷ್ಯಾಕಪ್ ಗು ಸಹ ಶಮಿ ಅವರು ಆಯ್ಕೆಯಾಗಲಿಲ್ಲ. ಆಸ್ಟ್ರೇಲಿಯಾದಲ್ಲಿ ಶಮಿ ಅವರು ಆಡಿರುವ ಪಂದ್ಯಗಳ ದಾಖಲೆ ನೋಡಿದರೆ, ಬಹುಶಃ ಅವರು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವುದು ಅನುಮಾನ ಎನ್ನಿಸುತ್ತಿದೆ. 2 ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಕ್ಯಾನ್ ಬೆರಾದಲ್ಲಿ ನಡೆದ ಪಂದ್ಯದಲ್ಲಿ ಶಮಿ ಅವರು ಉತ್ತಮ ಪ್ರದರ್ಶನ ನೀಡದೆ ದುಬಾರಿಯಾಗಿದ್ದರು. 4 ಓವರ್ ಗಳಲ್ಲಿ 46 ರನ್ಸ್ ನೀಡಿದ್ದರು. ಅಂದು ವಿಕೆಟ್ ಸಹ ಪಡೆಯಲಿಲ್ಲ.
ಆಸ್ಟ್ರೇಲಿಯಾದಲ್ಲಿ ಇವರು ಆಡಿರುವ ಒಂದೇ ಇನ್ನಿಂಗ್ಸ್ ಇದಾಗಿದೆ. ಅದೇ ಪಿಚ್ ನಲ್ಲಿ ಯುಜವೆಂದ್ರ ಚಾಹಲ್ ಹಾಗೂ ಟಿ ನಟರಾಜನ್ ಇಬ್ಬರು ತಲಾ ಮೂರು ವಿಕೆಟ್ಸ್ ಪಡೆದರು. ಶಮಿ ಅವರು ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದು 2014ರಲ್ಲಿ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ. ಈ ಪಂದ್ಯದ ಬಳಿಕ ಅವರಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. 8 ವರ್ಷಗಳ ಸಮಯದಲ್ಲಿ ಶಮಿ ಅವರು ಕೇವಲ 17 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 18 ವಿಕೆಟ್ಸ್ ಮಾತ್ರ ಪಡೆದಿದ್ದಾರೆ. ಒನ್ ಡೇ ಕ್ರಿಕೆಟ್ ನಲ್ಲಿ, ಆಸ್ಟ್ರೇಲಿಯಾ ಆತಿಥ್ಯದಲ್ಲಿ ಶಮಿ ಅವರು 8 ಪಂದ್ಯಗಳಲ್ಲಿ 10 ವಿಕೆಟ್ಸ್ ಪಡೆದಿದ್ದಾರೆ. ದೇಶೀಯ ಪಂದ್ಯದಲ್ಲಿ 8 ಟೆಸ್ಟ್ ಪಂದ್ಯಗಳಲ್ಲಿ 31 ವಿಕೆಟ್ಸ್ ಪಡೆದಿದ್ದಾರೆ. ಆಸ್ಟ್ರೇಲಿಯಾದ ಪಿಚ್ ನಲ್ಲಿ ಟಿ20 ಮಾದರಿಯ ಪಂದ್ಯದಲ್ಲಿ ಶಮಿ ಅವರು ಈ ಹಿಂದೆ ಒಳ್ಳೆಯ ಪ್ರದರ್ಶನ ನೀಡದ ಕಾರಣ ಹಾಗೂ ಜುಲೈ ನಲ್ಲಿ ನಡೆದ ಪಂದ್ಯದಲ್ಲಿ ದುಬಾರಿಯಾಗಿ ಕಾಣಿಸಿಕೊಂಡ ಕಾರಣ ಶಮಿ ಅವರನ್ನು ಟಿ20 ಪಂದ್ಯಕ್ಕೆ ಆಯ್ಕೆ ಮಾಡುವುದು ಕಷ್ಟವಿದೆ.