ಏನೇನೋ ಮಾಡಲು ಹೋಗಿ ಕೈ ಸುಟ್ಟುಕೊಳ್ಳುತ್ತಿರುವ ರೋಹಿತ್: ವಿಶ್ವಕಪ್ ಗೂ ಮುನ್ನವೇ ನಾಯಕನಿಗೆ ಶಾಕ್ ಕಾದಿದೆಯೇ?? ಕೇಳಿ ಬರುತ್ತಿರುವ ಚರ್ಚೆ ಏನು ಗೊತ್ತೇ??
ಏನೇನೋ ಮಾಡಲು ಹೋಗಿ ಕೈ ಸುಟ್ಟುಕೊಳ್ಳುತ್ತಿರುವ ರೋಹಿತ್: ವಿಶ್ವಕಪ್ ಗೂ ಮುನ್ನವೇ ನಾಯಕನಿಗೆ ಶಾಕ್ ಕಾದಿದೆಯೇ?? ಕೇಳಿ ಬರುತ್ತಿರುವ ಚರ್ಚೆ ಏನು ಗೊತ್ತೇ??
ಭಾರತ ಕ್ರಿಕೆಟ್ ತಂಡವು ಈಗ ಏಷ್ಯಾಕಪ್ ಪಂದ್ಯಗಳಿಂದ ಹೊರಬಂದಿದೆ. ಏಷ್ಯಾಕಪ್ ನ ಸೂಪರ್ 4 ಹಂತದ ಎರಡು ಪಂದ್ಯಗಳಲ್ಲಿ ಭಾರತ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಹ ವೈಫಲ್ಯತೆ ಅನುಭವಿಸಿದ ಕಾರಣ ಸೋಲು ಕಾಣುವ ಹಾಗೆ ಆಯಿತು. ಮ್ಯಾಚ್ ಸಮಯದಲ್ಲಿ ರೋಹಿತ್ ಶರ್ಮಾ ಅವರು ತೆಗೆದುಕೊಂಡಿರುವ ನಿರ್ಧಾರಗಳು ತಪ್ಪಾಗುತ್ತಿದೆ ಎನ್ನುವುದು ಹಲವರ ಅಭಿಪ್ರಾಯ ಆಗಿದೆ. ಪ್ರಸ್ತುತ ಈಗ ಎಲ್ಲರ ಕಣ್ಣು ಟಿ20 ವಿಶ್ವಕಪ್ ಪಂದ್ಯದ ಮೇಲೆ ಇದ್ದು, ವಿಶ್ವಕಪ್ ನಲ್ಲಿ ಏನೆಲ್ಲಾ ಬದಲಾವಣೆ ಆಗಬೇಕ್ ಎನ್ನುವ ಚರ್ಚೆ ಸಹ ಈಗ ಶುರುವಾಗಿದೆ. ಅವುಗಳು ಏನು ಎಂದು ತಿಳಿಸುತ್ತೇವೆ ನೋಡಿ..
ಓಪನಿಂಗ್ ಬ್ಯಾಟ್ಸ್ಮನ್ ಗಳಲ್ಲಿ ಬದಲಾವಣೆ :- ಇಷ್ಟು ಮ್ಯಾಚ್ ಗಳಲ್ಲಿ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಅವರು ಓಪನರ್ ಗಳಾಗಿ ಬರುತ್ತಿದ್ದರು, ಆದರೆ ಏಷ್ಯಾಕಪ್ ಪಂದ್ಯಗಳಲ್ಲಿ ಈ ಜೋಡಿ ಹೇಳಿಕೊಳ್ಳುವ ಹಾಗೆ ಉತ್ತಮ ಪ್ರದರ್ಶನ ಕೊಡಲಿಲ್ಲ. ಅಫ್ಘಾನಿಸ್ತಾನ್ ವಿರುದ್ಧದ ಕೊನೆಯ ಪಂದ್ಯದಲ್ಲಿ ರಾಹುಲ್ ಹಾಗೂ ವಿರಾಟ್ ಕೋಹ್ಲಿ ಓಪನರ್ ಗಳಾಗಿ ಕಣಕ್ಕೆ ಇಳಿದರು, ರಾಹುಲ್ ವಿರಾಟ್ ಜೋಡಿ ಓಪನರ್ ಗಳಾಗಿ ಅದ್ಭುತವಾದ ಪ್ರದರ್ಶನ ನೀಡಿದರು. ಇವರಿಬ್ಬರ ಜೊತೆಯಾಟದಲ್ಲಿ 119 ರನ್ ಗಳಿಸಿದರು. ತಂಡಕ್ಕೆ ಇದು ಸಹಾಯವಾಯಿತು ಎನ್ನುವ ಕಾರಣಕ್ಕೆ, ವಿಶ್ವಕಪ್ ನಲ್ಲಿ ಸಹ ಇವರಿಬ್ಬರೇ ಓಪನರ್ ಗಳಾದರೆ ಒಳ್ಳೆಯದು ಎನ್ನಲಾಗುತ್ತಿದೆ.
ಫಾರ್ಮ್ ಗೆ ಮರಳಿರುವ ವಿರಾಟ್ ಕೋಹ್ಲಿ :- ಏಷ್ಯಾಕಪ್ ಪಂದ್ಯಗಳಲ್ಲಿ ಭಾರತ ತಂಡ ಸೋಲನ್ನು ಕಂಡು, ಮನೆಗೆ ಮರಳಿದೆ. ಆದರೆ ವಿರಾಟ್ ಕೋಹ್ಲಿ ಅವರು ವಿಶ್ವಕಪ್ ಪಂದ್ಯಗಳು ಶುರುವಾಗುವ ಮೊದಲೇ ಫಾರ್ಮ್ ಗೆ ಮರಳಿರುವುದು ಭಾರತ ತಂಡಕ್ಕೆ ಒಳ್ಳೆಯ ವಿಚಾರ ಆಗಿದೆ. ಏಷ್ಯಾಕಪ್ ಟೂರ್ನಿಯಲ್ಲಿ ವಿರಾಟ್ ಅವರು 1 ಶತಕ, 2 ಅರ್ಧಶತಕದ ಜೊತೆಗೆ 254 ರನ್ ಗಳಿಸಿದ್ದಾರೆ.
ವಿಶ್ವಕಪ್ ಪಂದ್ಯಗಳಿಗೆ ಸೆಪ್ಟೆಂಬರ್ 16ರಂದು ಟೀಮ್ ಇಂಡಿಯಾ 15 ಸದಸ್ಯರ ತಂಡವನ್ನು ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿ ಈಗ ಸಿಕ್ಕಿದೆ. ಹಾಗಾಗಿ ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್ ಬುಮ್ರ ಅವರು ಬೇಗ ಹುಷಾರಾಗಿ ಬರಲಿ ಎನ್ನುವುದು ಎಲ್ಲರ ಆಶಯ ಆಗಿದೆ. ಜಡೇಜಾ ಅವರಿಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ಆಗಿದ್ದು, ಅವರು ವಿಶ್ವಕಪ್ ಇಂದ ಹೊರಗುಳಿಯುವ ಹಾಗಿದೆ. ಜಸ್ಪ್ರೀತ್ ಬುಮ್ರ ಅವರು ಬೆನ್ನುನೋವಿನಿಂದ ತೊಂದರೆಗೆ ಒಳಗಾಗಿದ್ದಾರೆ. ಇವರು ಕೂಡ ವಿಶ್ವಕಪ್ ಆಡುತ್ತಾರೋ ಇಲ್ಲವೋ ಎನ್ನುವ ಅನುಮಾನ ಶುರುವಾಗಿದೆ. ಅಕ್ಟೋಬರ್ 16ರಂದ್ ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲಿದ್ದು, ನವೆಂಬರ್ 13ರಂದು ಫಿನಾಲೆ ನಡೆಯಲಿದೆ.