ದಿನೇಶ್ ಕಾರ್ತಿಕ್ ರವರನ್ನು ತಂಡದಲ್ಲಿ ಇರಿಸಲು ಹೊಸ ಪ್ಲಾನ್ ನೀಡಿದ ಪೂಜಾರ: ತಂಡಕ್ಕೆ ಅದೆಂತ ಸಲಹೆ ನೀಡಿದ್ದಾರೆ ಗೊತ್ತೇ??

ದಿನೇಶ್ ಕಾರ್ತಿಕ್ ರವರನ್ನು ತಂಡದಲ್ಲಿ ಇರಿಸಲು ಹೊಸ ಪ್ಲಾನ್ ನೀಡಿದ ಪೂಜಾರ: ತಂಡಕ್ಕೆ ಅದೆಂತ ಸಲಹೆ ನೀಡಿದ್ದಾರೆ ಗೊತ್ತೇ??

ಏಷ್ಯಾಕಪ್ 2022 ಟೂರ್ನಿ ಇಂದು ಮುಕ್ತಾಯಗೊಳ್ಳಲಿದೆ. ಇಂದಿನ ಫೈನಲ್ಸ್ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಶ್ರೀಲಂಕಾ ತಂಡಗಳು ಸೆಣೆಸಾಡಲಿದೆ. ಭಾರತ ಮತ್ತು ಅಫ್ಘಾನಿಸ್ತಾನ್ ತಂಡ 3 ಹಾಗೂ 4ನೇ ಸ್ಥಾನದಲ್ಲಿದೆ. ಇನ್ನು ಮುಂದಿನ ತಿಂಗಳು ಶುರುವಗಲಿರುವ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡದಲ್ಲಿ ಯಾರೆಲ್ಲಾ ಇರುತ್ತಾರೆ ಎನ್ನುವ ಚರ್ಚೆ ಈಗಾಗಲೇ ಶುರುವಾಗಿದೆ. ರವೀಂದ್ರ ಜಡೇಜಾ ಅವರ ವೈಫಲ್ಯತೆ ಏಷ್ಯಾಕಪ್ ನಲ್ಲಿ ಭಾರಿ ಕಷ್ಟ ಆಗುವ ಹಾಗೆ ಮಾಡಿತು. ಕೆಲವು ಬ್ಯಾಟ್ಸ್ಮನ್ ಗಳು ಹಾಗೂ ಬೌಲರ್ ಗಳು ಫಾರ್ಮ್ ಕಳೆದುಕೊಂಡಿದ್ದಾರೆ. ಹಾಗಾಗಿ ಟಿ20 ಪಂದ್ಯಗಳಿಗೆ ಉತ್ತಮವಾದ ತಂಡವನ್ನು ಆಯ್ಕೆ ಮಾಡಬೇಕಿದೆ.

ಇದೀಗ ಭಾರತ ತಂಡ ಬ್ಯಾಟಿಂಗ್ ಸಂಯೋಜನೆ ಹೇಗಿರಬೇಕು ಎಂದು ಚೇತೇಶ್ವರ್ ಪೂಜಾರಿ ಅವರು ಮಾತನಾಡಿದ್ದಾರೆ. “ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಅವರು ಬ್ಯಾಟಿಂಗ್ ಮಾಡುವುದನ್ನು ನೋಡಲು ಬಯಸುತ್ತೇನೆ..” ಎಂದಿದ್ದಾರೆ. ಭಾರತ ತಂಡದ 5, 6 ಹಾಗೂ 7ನೇ ಕ್ರಮಾಂಕದ ಬ್ಯಾಟಿಂಗ್ ಗೆ ನಾನು ಏಷ್ಯಾಕಪ್ ನಲ್ಲಿದ್ದವರೇ ಇರಲಿ ಎಂದು ಬಯಸುತ್ತೇನೆ. 5ನೇ ಕ್ರಮಾಂಕಕ್ಕೆ ರಿಷಬ್ ಪಂತ್ ಅವರೇ ಇದ್ದರೆ ಒಳ್ಳೆಯದು. 6ನೇ ಕ್ರಮಾಂಕಕ್ಕೆ ಹಾರ್ದಿಕ್ ಪಾಂಡ್ಯ ಅವರು ಸೂಕ್ತವಾಗಿದ್ದಾರೆ. 7ನೇ ಕ್ರಮಾಂಕಕ್ಕೆ ದಿನೇಶ್ ಕಾರ್ತಿಕ್ ಅವರು ಸೂಕ್ತವಾಗಿದ್ದಾರೆ…” ಎಂದಿದ್ದಾರೆ.

ಜೊತೆಗೆ, “ದಿನೇಶ್ ಕಾರ್ತಿಕ್ ಹಾಗೂ ರಿಷಬ್ ಪಂತ್ ಇಬ್ಬರನ್ನು ಆಡಿಸುವುದು ಒಳ್ಳೆಯದು. ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್ ಮೊದಲ 4 ಕ್ರಮಾಂಕದಲ್ಲಿ ಆಕ್ರಮಿಸುವುದಕ್ಕೆ ಸೂಕ್ತವಾಗಿದ್ದಾರೆ. ಭಾರತ ತಂಡ ಆರಂಭಿಕ ಕ್ರಮಾಂಕದ ಬ್ಯಾಟ್ಸ್ಮನ್ ಗಳನ್ನು ಸ್ಥಿರಗೊಳಿಸದೆ. ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಗಳನ್ನು ಬೇಡಿಕೆಗೆ ಅನುಗುಣವಾಗಿ ಹೊಂದಿಸಿದೆ. ಈಗ ಅಕ್ಷರ್ ಪಟೇಲ್ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಇಲ್ಲ. ಒಂದು ವೇಕೆ ದೀಪಕ್ ಹೂಡಾ ಅವರು ಬೌಲಿಂಗ್ ಮಾಡಿದರೆ ರಿಷಬ್ ಪಂತ್ ಅವರನ್ನು ತಂಡದಿಂದ ಹೊರಗೆ ಇಡುವ ಹಾಗೆ ಆಗಬಹುದು..” ಎಂದು ಚೇತೇಶ್ವರ್ ಪೂಜಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.