ತನ್ನದೇ ಲೆಕ್ಕಾಚಾರದ ಮೂಲಕ ವಿಶ್ವಕಪ್ ಗೆ ತಂಡ ಘೋಷಣೆ ಮಾಡಿದ ನೆಹ್ರಾ: ತಂಡ ಹೀಗಿದ್ದರೆ ವಿಶ್ವಕಪ್ ಪಕ್ಕ ಅಂತೇ: ಆದರೆ ಸ್ಟಾರ್ ಪ್ಲೇಯರ್ಸ್ ಔಟ್. ಯಾರ್ಯಾರು ಇದ್ದಾರೆ ಗೊತ್ತೇ??

ತನ್ನದೇ ಲೆಕ್ಕಾಚಾರದ ಮೂಲಕ ವಿಶ್ವಕಪ್ ಗೆ ತಂಡ ಘೋಷಣೆ ಮಾಡಿದ ನೆಹ್ರಾ: ತಂಡ ಹೀಗಿದ್ದರೆ ವಿಶ್ವಕಪ್ ಪಕ್ಕ ಅಂತೇ: ಆದರೆ ಸ್ಟಾರ್ ಪ್ಲೇಯರ್ಸ್ ಔಟ್. ಯಾರ್ಯಾರು ಇದ್ದಾರೆ ಗೊತ್ತೇ??

ಏಷ್ಯಾಕಪ್ 2022ರಲ್ಲಿ ಭಾರತ ತಂಡದ ವೈಫಲ್ಯದಿಂದ, ಸೂಪರ್ 4 ಹಂತದ ಎರಡು ಪಂದ್ಯಗಳನ್ನು ಸೋತು, ಕೊನೆಯ ಅಫ್ಘಾನಿಸ್ತಾನ್ ಪಂದ್ಯದಲ್ಲಿ ಗೆದ್ದು ಟೂರ್ನಿಯಿಂದ ಹೊರಬಂದಿದೆ. ಇನ್ನೊಂದು ವಾರದ ಬಳಿಕ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡದ ವಿರುದ್ಧ ಭಾರತ ತಂಡ ಸರಣಿ ಪಂದ್ಯಗಳನ್ನು ಆಡಲಿದೆ. ಜೊತೆಗೆ ಮುಂದಿನ ತಿಂಗಳು ಆಸ್ಟ್ರೇಲಿಯಾ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ಸಹ ಶುರುವಾಗುತ್ತದೆ. ಅದೇ ನಿಟ್ಟಿನಲ್ಲಿ ಸೆಪ್ಟೆಂಬರ್ 16ರಂದು ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಕ್ಕೆ 15 ಜನರ ತಂಡವನ್ನು ಪ್ರಕಟಣೆ ಮಾಡಲಿದೆ.

ಟಿ20 ವಿಶ್ವಕಪ್ ಗೆ ಮಾಜಿ ಆಟಗಾರರು ಸಹ ಭಾರತ ತಂಡಕ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ಭಾರತ ತಂಡದ ಮಾಜಿ ಆಟಗಾರ ಆಶಿಸ್ ನೆಹ್ರಾ ಅವರು ಸಹ 15 ಪ್ಲೇಯರ್ ಗಳ ತಮ್ಮ ಇಷ್ಟದ ತಂಡವನ್ನು ಆಶಿಸ್ ನೆಹ್ರಾ ಅವರು ಪ್ರಕಟಣೆ ಮಾಡಿದ್ದು, ತಂಡ ಹೀಗಿದ್ದರೆ ವಿಶ್ವಕಪ್ ಗೆಲ್ಲುವುದು ಫಿಕ್ಸ್ ಎಂದಿದ್ದಾರೆ. ಇವರು ಆಯ್ಕೆಮಾಡಿರುವ ಕೆಲವು ಆಟಗಾರರ ಹೆಸರು ಅಚ್ಚರಿ ಮೂಡಿಸಿದೆ. ನೆಹ್ರಾ ಅವರು ಆಯ್ಕೆ ಮಾಡಿರುವ ಆಟಗಾರರು ಯಾರು ಎಂದು ತಿಳಿಸುತ್ತೇವೆ ನೋಡಿ.. ಕೆ.ಎಲ್.ರಾಹುಲ್, ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡಾ ಅವರನ್ನು ಬ್ಯಾಟ್ಸ್ಮನ್ ಗಳ ಲಿಸ್ಟ್ ಗೆ ಆಯ್ಕೆ ಮಾಡಿಕೊಂಡಿದ್ದಾರೆ.

ದಿನೇಶ್ ಕಾರ್ತಿಕ್ ಹಾಗೂ ರಿಷಬ್ ಪಂತ್ ಅವರಿಗೆ ವಿಕೆಟ್ ಕೀಪರ್ ಸ್ಥಾನ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಅವರನ್ನು ಆಲ್ ರೌಂಡರ್ ಆಗಿ ಆಯ್ಕೆ ಮಾಡಿದ್ದಾರೆ, ಜಡೇಜಾ ಅವರಿಗೆ ಶಸ್ತ್ರ ಚಿಕಿತ್ಸೆ ಆಗಿದ್ದರು ಸಹ, ಅವರನ್ನು ಆಯ್ಕೆ ಮಾಡಿರುವುದು ಶಾಕ್ ಆಗಿದೆ. ವಿಶ್ವಕಪ್ ಶುರುವಾಗಲು 6 ವಾರ ಇದ್ದು, ಅಷ್ಟರೊಳಗೆ ರವೀಂದ್ರ ಜಡೇಜಾ ಅವರು ಚೇತರಿಸಿಕೊಳ್ಳುತ್ತಾರೆ ಎಂದು ನೆಹ್ರಾ ಅವರು ನಂಬಿರುವುದು ಆಶ್ಚರ್ಯವಾಗಿದೆ. ಯುಜವೇಂದ್ರ ಚಾಹಲ್ ಹಾಗೂ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆಮಾಡಿದ್ದು, ರವಿ ಬಿಶ್ನೋಯ್ ಅವರಿಗೆ ತಮ್ಮ ತಂಡಕ್ಕೆ ಆಯ್ಕೆ ಮಾಡಿಲ್ಲ .

ಜಸ್ಪ್ರೀತ್ ಬುಮ್ರ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಹಾಗೂ ಅರ್ಷದೀಪ್ ಸಿಂಗ್ ಅವರನ್ನು ತಂಡಕ್ಕೆ ವೇಗಿಗಳಾಗಿ ಆಯ್ಕೆ ಮಾಡಿದ್ದಾರೆ. ಇನ್ನು ಮೊಹಮ್ಮದ್ ಶಮಿ ಅವರನ್ನು ಸಹ ಆಯ್ಕೆ ಮಾಡದೆ ಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ಈ ಟೀಮ್ ನಲ್ಲಿ ರೋಹಿತ್ ಶರ್ಮಾ ತಂಡಕ್ಕೆ ಕ್ಯಾಪ್ಟನ್ ಸ್ಥಾನ ನೀಡಿದ್ದಾರೆ. ಕೆಎಲ್ ರಾಹುಲ್, ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅಶ್ವಿನ್, ಬುಮ್ರಾ, ಚಾಹಲ್, ಅರ್ಶ್ ದೀಪ್ ಸಿಂಗ್ ತಂಡದಲ್ಲಿದ್ದಾರೆ.