ವಿಶ್ವಕಪ್ ಟೂರ್ನಿಯಲ್ಲಿ ಆಟವಾಡುವ 11 ರ ಬಳಗದಲ್ಲಿ ಬಹುತೇಕ ಸ್ಥಾನ ಕಳೆದುಕೊಂಡಿರುವ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ??
ವಿಶ್ವಕಪ್ ಟೂರ್ನಿಯಲ್ಲಿ ಆಟವಾಡುವ 11 ರ ಬಳಗದಲ್ಲಿ ಬಹುತೇಕ ಸ್ಥಾನ ಕಳೆದುಕೊಂಡಿರುವ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ??
ಆಸ್ಟ್ರೇಲಿಯಾ ಆತಿಥ್ಯದಲ್ಲಿ ಮುಂದಿನ ತಿಂಗಳು ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲಿದೆ. ಇದರಲ್ಲಿ ಅಕ್ಟೋಬರ್ 23ರಂದು ಭಾರತದ ಮೊದಲ ಪಂದ್ಯ ನಡೆಯಲಿದ್ದು, ಪಾಕಿಸ್ತಾನ್ ವಿರುದ್ಧ ನಡೆಯಲಿದೆ. ಸೆಪ್ಟೆಂಬರ್ 12ರ ಸಂಜೆ ಬಿಸಿಸಿಐ ವಿಶ್ವಕಪ್ ನಲ್ಲಿ ಪಾಲ್ಗೊಳ್ಳುವ 15 ಸದಸ್ಯರು ಹಾಗೂ 4 ಹೆಚ್ಚುವರಿ ಆಟಗಾರರ ತಂಡವನ್ನು ಘೋಷಣೆ ಮಾಡಿದೆ. ಆದರೆ ಪ್ಲೇಯಿಂಗ್ 11 ಹೇಗಿರುತ್ತದೆ ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿದೆ, ಜೊತೆಗೆ ಆಡುವ ಒಳ್ಳೆಯ ಸಾಮರ್ಥ್ಯ ಇದ್ದರು ಸಹ, ಮೂವರು ಆಟಗಾರರು ಪ್ಲೇಯಿಂಗ್ 11 ಇಂದ ಸ್ಥಾನ ಕಳೆದುಕೊಂಡಿದ್ದಾರೆ. ಆ ಮೂವರು ಆಟಗಾರರು ಯಾರು ಎಂದು ತಿಳಿಸುತ್ತೇವೆ ನೋಡಿ..
ಆರ್ಷದೀಪ್ ಸಿಂಗ್ :- ವಿಶ್ವಕಪ್ ಗೆ ಭಾರತ ತಂಡಕ್ಕೆ ಜಸ್ಪ್ರೀತ್ ಬುಮ್ರ ಹಾಗೂ ಹರ್ಷಲ್ ಪಟೇಲ್ ಮರಳಿ ಬಂದಿದ್ದಾರೆ. ಹಾಗಾಗಿ ತಂಡದಲ್ಲಿ ಈಗ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರ ಅಂತಹ ಆಕ್ರಮಣಕಾರಿ ಬೌಲರ್ ಗಳು ಇದ್ದು, ಅವರ ಎದುರು ಅರ್ಷದೀವ್ ಸಿಂಗ್ ಅವರ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆದುಕೊಳ್ಳುವುದು ಕಷ್ಟವಾಗಿದೆ. ಏಷ್ಯಾಕಪ್ ಪಂದ್ಯಗಳಲ್ಲಿ ಅರ್ಷದೀಪ್ ಸಿಂಗ್ ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದರು ಸಹ, ಆ ಅವಕಾಶಗಳನ್ನು ಅರ್ಷದೀಪ್ ಸಿಂಗ್ ಅವರು ಸರಿಯಾಗಿ ಬಳಸಿಕೊಳ್ಳಲಿಲ್ಲ, ಏಷ್ಯಾಕಪ್ ನಲ್ಲಿ ಕೇವಲ 4 ವಿಕೆಟ್ಸ್ ಪಡೆದರು. ಆ ಕಾರಣದಿಂದ ಅರ್ಷದೀಪ್ ಸಿಂಗ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಸ್ಥಾನ ಸಿಗುವುದು ಕಷ್ಟವಾಗುತ್ತದೆ.
ದೀಪಕ್ ಹೂಡಾ :- ಭಾರತ ತಂಡದಲ್ಲಿ ಪ್ರತಿಭೆ ಇರುವ ಆಲ್ ರೌಂಡರ್ ಆಗಿ ದೀಪಕ್ ಹೂಡಾ ಅವರು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ದೀಪಕ್ ಹೂಡಾ ಅವರು ಅತ್ಯುತ್ತಮವಾದ ಫಾರ್ಮ್ ನಲ್ಲಿದ್ದಾರೆ, ದೀಪಕ್ ಅವರು ಈವರೆಗೂ ಉತ್ತಮವಾದ ಪ್ರದರ್ಶನವನ್ನೇ ನೀಡಿದ್ದಾರೆ. ಆದರೆ ದೀಪಕ್ ಹೂಡಾ ಅವರಿಗೆ ಪ್ಲೇಯಿಂಗ್ 11 ನಲ್ಲಿ ಸ್ಥಾನ ಸಿಗುವುದು ಕಷ್ಟವಾಗಿದೆ. ಏಕೆಂದರೆ ಭಾರತ ತಂಡದಲ್ಲಿ ಈಗಾಗಲೇ ದೀಪಕ್ ಹೂಡಾ ಅವರಿಗಿಂತ ಉತ್ತಮವಾದ ಆಟಗಾರರು, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್ ಅವರು ಇರುವ ಕಾರಣ ದೀಪಕ್ ಹೂಡಾ ಅವರಿಗೆ ಸ್ಥಾನ ಸಿಗುವುದು ಕಷ್ಟ ಎನ್ನುವ ಹಾಗಾಗಿದೆ.
ರವಿಚಂದ್ರನ್ ಅಶ್ವಿನ್ :- ಆಫ್ ಸ್ಪಿನ್ನರ್ ಅಶ್ವಿನ್ ಅವರಿಗೂ ಸಹ ವಿಶ್ವಕಪ್ ಪಂದ್ಯಗಳಲ್ಲಿ ಒಂದು ಪಂದ್ಯವನ್ನಾದರು ಸರಿ ಆಡುವ ಅವಕಾಶ ಸಿಗುವುದು ಕಷ್ಟವೆ ಆಗಿದೆ. ಯಾಕೇಂದರೆ ಈಗಾಗಲೇ ಭಾರತ ತಂಡದಲ್ಲಿ ಯುಜವೇಂದ್ರ ಚಾಹಲ್ ಮತ್ತು ಅಕ್ಷರ್ ಪಟೇಲ್ ಇದ್ದಾರೆ. ಇವರು ಪ್ಲೇಯಿಂಗ್ 11 ಗೆ ಆಯ್ಕೆಯಾಗುವುದು ಪಕ್ಕಾ ಆಗಿದ್ದು, ಈ ಯುವ ಆಟಗಾರರ ಎದುರು ರವಿಚಂದ್ರನ್ ಅಶ್ವಿನ್ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗುವುದು ಸಹ ಬಹಳ ಕಷ್ಟ ಎನ್ನಲಾಗುತ್ತಿದೆ.