ಸುಖಾಸುಮ್ಮನೆ ಕೊಹ್ಲಿ ಅಭಿಮಾನಿಗಳನ್ನು ಕೆಣಕಿದ ಅಫ್ರಿದಿ: ಕೊಹ್ಲಿ ನಿವೃತ್ತಿ ತೆಗೆದುಕೊಳ್ಳಬೇಕು ಎಂದಿದ್ದು ಯಾಕೆ ಗೊತ್ತೇ?? ಅಫ್ರಿದಿ ನೀಡಿದ ಕಾರಣವೇನು ಗೊತ್ತೇ?

ವಿರಾಟ್ ಕೋಹ್ಲಿ ಅವರು ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು. ಇವರ ಹೆಸರಲ್ಲಿ ಬಹಳಷ್ಟು ದಾಖಲೆಗಳಿವೆ. ಭಾರತ ತಂಡಕ್ಕೆ ಪ್ಲೇಯರ್ ಆಗಿ ಮತ್ತು ಕ್ಯಾಪ್ಟನ್ ಆಗಿ ಹಲವಾರು ಗೆಲ್ಲುವ ಇನ್ನಿಂಗ್ಸ್ ನೀಡಿದ್ದಾರೆ. ಆದರೆ ಒಂದೆರಡು ವರ್ಷಗಳಿಂದ ವಿರಾಟ್ ಕೋಹ್ಲಿ ಅವರು ಫಾರ್ಮ್ ಕಳೆದುಕೊಂಡಿದ್ದರು. ಇದುವರೆಗೂ 70 ಸೆಂಚುರಿಗಳನ್ನು ಭಾರಿಸಿದ ವಿರಾಟ್ ಅವರಿಂದ 3 ವರ್ಷಗಳ ಕಾಲ ಸೆಂಚುರಿ ಬಂದಿರಲಿಲ್ಲ. ಆದರೆ ಈಗ ಏಷ್ಯಾಕಪ್ ಪಂದ್ಯಗಳಲ್ಲಿ ವಿರಾಟ್ ಕೋಹ್ಲಿ ಅವರು ಫಾರ್ಮ್ ಗೆ ಮರಳಿ ಬಂದಿದ್ದಾರೆ. ಏಷ್ಯಾಕಪ್ ನ ಕೊನೆಯ ಪಂದ್ಯದಲ್ಲಿ 71ನೇ ಸೆಂಚುರಿ ಭಾರಿಸಿದರು ಕೋಹ್ಲಿ.

ಈ ಮೂಲಕ ವಿರಾಟ್ ಕೋಹ್ಲಿ ಅವರು ಫಾರ್ಮ್ ಗೆ ಮರಳಿ ಬಂದಿದ್ದಾರೆ. ವಿಶ್ವಕಪ್ ಪಂದ್ಯಗಳಲ್ಲಿ ವಿರಾಟ್ ಕೋಹ್ಲಿ ಅವರು ಮತ್ತೊಮ್ಮೆ ಅದ್ಭುತವಾದ ಇನ್ನಿಂಗ್ಸ್ ಗಳನ್ನು ನೀಡುತ್ತಾರೆ ಎಂದು ಎಲ್ಲರೂ ನಿರೀಕ್ಷೆ ಮಾಡುತ್ತಿರುವ ಸಮಯದಲ್ಲಿ, ಪಾಕಿಸ್ತಾನ್ ಆಟಗಾರ ಶಾಹಿದ್ ಅಫ್ರಿದಿ ಅವರು ವಿರಾಟ್ ಕೋಹ್ಲಿ ಅವರು ಅಂತಾರಾಷ್ಟ್ರೀಯ ಪಂದ್ಯಗಳಿಂದ ರಿಟೈರ್ ಆಗಬೇಕು ಎಂದು ಕೋರಿಕೆ ವ್ಯಕ್ತಪಡಿಸಿದ್ದಾರೆ. ಅಫ್ರಿದಿ ಅವರು ಈ ರೀತಿ ಹೇಳಿರುವುದಕ್ಕೆ ಕಾರಣ, ವಿರಾಟ್ ಕೋಹ್ಲಿ ಅವರನ್ನು ತಂಡದಿಂದ ಹೊರಹಾಕಬಾರದು ಎಂದು ಈ ರೀತಿ ಹೇಳಿದ್ದಾರೆ ಶಾಹಿದ್ ಆಫ್ರಿದಿ, ಆದರೆ ಈ ಮಾತಿನಿಂದ ವಿರಾಟ್ ಕೋಹ್ಲಿ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. “ವಿರಾಟ್ ಕೋಹ್ಲಿ ಅವರು ವೃತ್ತಿ ಜೀವನ ಆರಂಭಿಸಿದಾಗ, ಬಹಳ ಕಷ್ಟಪಟ್ಟಿದ್ದಾರೆ, ಅವರು ಆಡುತ್ತಿದ್ದ ರೀತಿ ಎಲ್ಲವೂ ಅದ್ಭುತವಾಗಿದೆ. ವಿರಾಟ್ ಕೋಹ್ಲಿ ಅವರು ಚಾಂಪಿಯನ್ ಆಗಿದ್ದಾರೆ.

ಆದರೆ ಅವರು ನಿವೃತ್ತಿ ಪಡೆಯುವ ಸಮಯ ಹತ್ತಿರ ಬರುತ್ತಿದೆ ಎಂದು ನನಗೆ ಅನ್ನಿಸುತ್ತಿದೆ. ಆದರೆ ಈಗ ಉನ್ನತ ಸ್ಥಾನಕ್ಕೆ ಹೋಗುವುದು ಮುಖ್ಯ…” ಎಂದಿದ್ದಾರೆ ಅಫ್ರಿದಿ. ಇನ್ನು ಮಾತನಾಡಿ, “ನೀವು ನಿಮ್ಮ ಉತ್ತುಂಗದಲ್ಲಿ ಇರುವಾಗ, ತಂಡದಿಂದ ನಿಮ್ಮನ್ನು ಕೈಬಿಡುವ ಹಾಗೆ ಇರಬಾರದು. ಈ ರೀತಿಯ ಘಟನೆ ಅಪರೂಪಕ್ಕೆ ನಡೆಯುತ್ತದೆ. ಕೆಲವು ಶ್ರೇಷ್ಠ ಆಟಗಾರರು ಮಾತ್ರ ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕೋಹ್ಲಿ ಅವರು ಕೂಡ ಅದೇ ರೀತಿ ಮಾಡುತ್ತಾರೆ ಎಂದು ನನಗೆ ಅನ್ನಿಸುತ್ತದೆ. ವಿರಾಟ್ ಅವರು ವೃತ್ತಿ ಜೀವನ ಶುರು ಮಾಡಿದ ರೀತಿಯಲ್ಲೇ ಮುಗಿಸುತ್ತಾರೆ ಎಂದು ನನಗೆ ಅನ್ನಿಸುತ್ತದೆ .” ಎಂದು ಹೇಳಿದ್ದಾರೆ ಶಾಹಿದ್ ಅಫ್ರಿದಿ. ಆದರೆ ಶಾಹಿದ್ ಅಫ್ರಿದಿ ಅವರ ಮಾತುಗಳ ಬಗ್ಗೆ ಕೋಹ್ಲಿ ಅವರ ಅಭಿಮಾನಿಗಳು ಭಾರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಹ ಇದರ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ.