ಹಾಂಗ್ ಕಾಂಗ್ ವಿರುದ್ಧ ಪಂದ್ಯದಲ್ಲಿ ವಿರಾಟ ರೂಪ ತಾಳಿದ ಸೂರ್ಯ ಕುಮಾರ್ ಗೆ ವಿರಾಟ್ ಕೊಹ್ಲಿ ಪಂದ್ಯ ಮುಗಿದ ಬಳಿಕ ಮಾಡಿದ್ದೇನು ಗೊತ್ತೇ?? ವೈರಲ್ ಆಯಿತು ವಿಡಿಯೋ

ಹಾಂಗ್ ಕಾಂಗ್ ವಿರುದ್ಧ ಪಂದ್ಯದಲ್ಲಿ ವಿರಾಟ ರೂಪ ತಾಳಿದ ಸೂರ್ಯ ಕುಮಾರ್ ಗೆ ವಿರಾಟ್ ಕೊಹ್ಲಿ ಪಂದ್ಯ ಮುಗಿದ ಬಳಿಕ ಮಾಡಿದ್ದೇನು ಗೊತ್ತೇ?? ವೈರಲ್ ಆಯಿತು ವಿಡಿಯೋ

ಬುಧವಾರ ನಡೆದ ಭಾರತ ವರ್ಸಸ್ ಹಾಂಗ್ ಕಾಂಗ್ ಪಂದ್ಯದಲ್ಲಿ ಭಾರತ ತಂಡ ಅದ್ಭುತವಾದ ಪ್ರದರ್ಶನ ನೀಡಿ, ಹಾಂಗ್ ಕಾಂಗ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೂಪರ್ 4 ಹಂತಕ್ಕೆ ಭಾರತ ತಂಡ ಸೆಲೆಕ್ಟ್ ಆಗಿದೆ. ಮೊನ್ನೆಯ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಪ್ರದರ್ಶನ ಅದ್ಭುತವಾಗಿತ್ತು. ಅದರಲ್ಲೂ ಸೂರ್ಯಕುಮಾರ್ ಯಾದವ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನಕ್ಕೆ ಮೈದಾನದಲ್ಲಿದ್ದವರು ಹಾಗೂ ಕ್ರಿಕೆಟ್ ಪ್ರಿಯರು ಶ್ಲಾಘಿಸಿದ್ದಾರೆ. ಪಂದ್ಯ ಮುಗಿದ ಬಳಿಕ ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನಕ್ಕೆ ವಿರಾಟ್ ಕೋಹ್ಲಿ ಅವರು ನೀಡಿದ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿರುವ ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಲು ಬರುವವರು ರನ್ ಗಳಿಸಲು ಕಷ್ಟಪಡುತ್ತಾರೆ, ಆದರೆ ಮೊನ್ನೆಯ ಪಂದ್ಯದಲ್ಲಿ ಅದು ವಿರುದ್ಧವಾಗಿತ್ತು. ರೋಹಿತ್ ಶರ್ಮಾ ಅವರು ಉತ್ತಮವಾಗಿಯೇ ಆಟ ಶುರು ಮಾಡಿದರು ಸಹ, 21 ರನ್ ಗಳಿಸಿ, ಔಟ್ ಆದರು. ಕೆ.ಎಲ್.ರಾಹುಲ್ ಅವರು ಮಂದಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಾ, ಕಡಿಮೆ ರನ್ ಗಳಿಸಿದರು, 39 ಬಾಲ್ ಗಳಲ್ಲಿ 36 ರನ್ ಗಳಿಸಿದರು. ಬಳಿಕ ವಿರಾಟ್ ಅವರಿಗೆ ಸಾಥ್ ನೀಡಲು ಸೂರ್ಯಕುಮಾರ್ ಯಾದವ್ ಬಂದರು, ಹಾಂಗ್ ಕಾಂಗ್ ಬೌಲರ್ ಗಳಿಗೆ ರನ್ ಸಿಡಿಸಿ ಗೂಸಾ ಕೊಟ್ಟರು ಎಂದರೆ ತಪ್ಪಾಗುವುದಿಲ್ಲ. ಫೋರ್ಸ್ ಹಾಗೂ ಸಿಕ್ಸ್ ಗಳನ್ನು ಸಿಡಿಸಿ, ಕೇವಲ 22 ಬಾಲ್ ಗಳಲ್ಲಿ ಅರ್ಧಶತಕದವರೆಗೂ ಬಂದರು.

ಸೂರ್ಯಕುಮಾರ್ ಅವರು ಒಟ್ಟಾಗಿ ಗಳಿಸಿದ್ದು, 26 ಬಾಲ್ ಗಳಲ್ಲಿ ಬರೋಬ್ಬರಿ 68 ರನ್ ಗಳು. ಅಬ್ಬರದ ಆಟವಾಡಿ, ಕೊನೆಯವರೆಗು ಔಟ್ ಆಗದೆ ಉಳಿದರು, ವಿರಾಟ್ ಕೋಹ್ಲಿ ಅವರು ಸಹ 59 ರನ್ ಗಳಿಸಿದರು. ಇವರಿಬ್ಬರ ಜೊತೆಯಾಟ ಭಾರತ ತಂಡಕ್ಕೆ 98 ರನ್ ಗಳನ್ನು ತಂದುಕೊಟ್ಟಿದೆ. ಕೊನೆಯ ಓವರ್ ನಲ್ಲಿ ಸೂರ್ಯಕುಮಾರ್ ಯಾದವ್ 26 ರನ್ ಗಳನ್ನು ಸಿಡಿಸಿದರು, 20ನೇ ಓವರ್ ನಲ್ಲಿ 4 ಸಿಕ್ಸ್ ಗಳನ್ನು ಭಾರಿಸಿದರು. ಇವರಿಬ್ಬರ ಜೊತೆಯಾಟದಲ್ಲಿ ಭಾರತ ತಂಡ 192 ರನ್ ಗಳನ್ನು ಗಳಿಸಲು ಸಾಧ್ಯವಾಯಿತು. ಸೂರ್ಯಕುಮಾರ್ ಯಾದವ್ ಅವರ ಈ ಪ್ರದರ್ಶನ ನೋಡಿ ವಿರಾಟ್ ಕೋಹ್ಲಿ ಅವರು ಶಿರಬಾಗಿ ನಮಿಸಿದ್ದಾರೆ, ವಿರಾಟ್ ಅವರ ಈ ಜೆಶ್ಚರ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೀವು ಕೂಡ ಈ ವಿಡಿಯೋ ನೋಡಿ..