ಭಾರತಕ್ಕೆ ವಿಶ್ವಕಪ್ ತಂಡ ಕಟ್ಟಲು ಚಿಂತೆ ಇಲ್ಲ, ಬಹುತೇಕ 13 ಸ್ಥಾನ ಫಿಕ್ಸ್; ವಿಶ್ವಕಪ್ ಗೆ ಬಹುತೇಕ ಆಯ್ಕೆಯಾಗಿರುವ 13 ಆಟಗಾರರು ಯಾರು ಗೊತ್ತೇ??
ಭಾರತಕ್ಕೆ ವಿಶ್ವಕಪ್ ತಂಡ ಕಟ್ಟಲು ಚಿಂತೆ ಇಲ್ಲ, ಬಹುತೇಕ 13 ಸ್ಥಾನ ಫಿಕ್ಸ್; ವಿಶ್ವಕಪ್ ಗೆ ಬಹುತೇಕ ಆಯ್ಕೆಯಾಗಿರುವ 13 ಆಟಗಾರರು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಐಸಿಸಿ ಟಿ 20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಸುದ್ದಿ ನಿಮಗೆಲ್ಲಾ ತಿಳಿದೇ ಇದೆ. ಹಲವಾರು ವರ್ಷಗಳಿಂದ ಐಸಿಸಿ ಟ್ರೋಫಿಯ ಬರ ಎದುರಿಸುತ್ತಿರುವ ಭಾರತ ತಂಡ ಈ ಭಾರಿ ಶತಾಯಗತಾಯ ಕಪ್ ಗೆಲ್ಲಲೇಬೆಕೆಂದು ಪಣ ತೊಟ್ಟು ನಿಂತಿದೆ. ಐಸಿಸಿ ಟಿ 20 ವಿಶ್ವಕಪ್ ಗೆ ಪೂರ್ವಭಾವಿ ಸಿದ್ಧತೆಯಂತೆ ಭಾರತ ತಂಡ ಪ್ರಸ್ತುತ ಏಷ್ಯಾ ಟಿ 20 ಕಪ್ ಆಡುತ್ತಿದ್ದು, ಈ ಸರಣಿಯಾದ ನಂತರ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡದ ವಿರುದ್ಧ ಟಿ 20 ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ಐಸಿಸಿ ಟಿ 20 ವಿಶ್ವಕಪ್ ಗೆ ಸೆಪ್ಟೆಂಬರ್ 15ರೊಳಗೆ ಭಾರತ ತಂಡವನ್ನು ಪ್ರಕಟಿಸಬೇಕಿದೆ.ಇನ್ನು ಈ ಬಗ್ಗೆ ಮಾತನಾಡಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಐಸಿಸಿ ಟಿ 20 ವಿಶ್ವಕಪ್ ಗೆ ಈಗಾಗಲೇ ಭಾರತ ತಂಡ 13 ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದರರ್ಥ ಇನ್ನು ಇಬ್ಬರು ಆಟಗಾರರು ಅಂದರೇ ಭಾರತ ತಂಡದ ಟಿ 20 ತಂಡದ ಸ್ಟಾರ್ ವೇಗಿಗಳಾಗಿರುವ ಜಸಪ್ರಿತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಿಲ್ಲ.
ಹಾಗಾಗಿ ಅವರಿಬ್ಬರ ಆಯ್ಕೆಯನ್ನು ಕಾದು ನೋಡುತ್ತಿದೆ. ಇನ್ನು ಮೀಸಲು ಆಟಗಾರರಾಗಿ ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಹಾಗೂ ಶ್ರೇಯಸ್ ಅಯ್ಯರ್ ರವರು ಆಯ್ಕೆಯಾಗುವ ಸಾಧ್ಯತೆ ಇದೆ. ಭಾರತ ತಂಡದಲ್ಲಿ ಸದ್ಯ ಖಚಿತ ಸ್ಥಾನ ಪಡೆದಿರುವ 13 ಆಟಗಾರರು ಯಾರು ಎಂಬುದನ್ನು ತಿಳಿಯೋಣ. ತಂಡ : ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ರಿಷಭ್ ಪಂತ್, ದೀಪಕ್ ಹೂಡಾ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಆರ್ಷದೀಪ್ ಸಿಂಗ್, ಯುಜವೇಂದ್ರ ಚಾಹಲ್.