ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನೆನಪಿಡಿ, ರೋಹಿತ್ ಅಲ್ಲ, ಸೂರ್ಯ ಅಲ್ಲ, ಆತನೇ ಭಾರತಕ್ಕೆ ವಿಶ್ವಕಪ್ ತಂದು ಕೊಡುತ್ತಾನೆ, ಆ ಬ್ಯಾಟ್ಸ್ಮನ್ ಹೇ ಅಸಲಿ ಕಿಂಗ್ ಎಂದ ರಿಕ್ಕಿ ಪಾಂಟಿಂಗ್: ಯಾರಂತೆ ಗೊತ್ತೇ??

667

Get real time updates directly on you device, subscribe now.

ಭಾರತ ಕ್ರಿಕೆಟ್ ತಂಡವು ಈಗ ಏಷ್ಯಾಕಪ್ 2022 ಪಂದ್ಯಗಳಲ್ಲಿ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದು, ಮುಂದಿನ ತಿಂಗಳು ಶುರುವಾಗಲಿರುವ ಟಿ20 ವಿಶ್ವಕಪ್ ಪಂದ್ಯಗಳಿಗೆ ಭಾರತ ತಂಡ ಸಿದ್ಧತೆಯಲ್ಲಿದೆ. ಏಷ್ಯಾಕಪ್ ನ ಭಾಗವಾದ ಎರಡು ಪಂದ್ಯಗಳಲ್ಲಿ ಭಾರತ ತಂಡ ಉತ್ತಮವಾದ ಪ್ರದರ್ಶನ ನೀಡಿ ಗೆದ್ದಿದೆ. ಅದರಲ್ಲೂ ವಿರಾಟ್ ಕೋಹ್ಲಿ ಅವರು ಒಂದೂವರೆ ತಿಂಗಳ ಬಳಿಕ ತಂಡಕ್ಕೆ ಮರಳಿ ಬಂದಿದ್ದು, ಅವರ ಮೇಲೆ ಎಲ್ಲರಿಗು ಬಹಳ ನಿರೀಕ್ಷೆ ಇತ್ತು. ವಿರಾಟ್ ಅವರು ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ 36 ರನ್ ಗಳಿಸಿ ಔಟ್ ಆದರು, ಆದರೆ ಬುಧವಾರ ನಡೆದ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಅರ್ಧಶತಕ ಭಾರಿಸಿ, ಅಭಿಮಾನಿಗಳಿಗೆ ಸಂತೋಷ ತಂದರು.

ಇದೀಗ ಇಂತಹ ಒಳ್ಳೆಯ ಪ್ರದರ್ಶನ ನೀಡಿರುವ ವಿರಾಟ್ ಕೋಹ್ಲಿ ಅವರ ಬಗ್ಗೆ ಆಸ್ಟ್ರೇಲಿಯಾದ ಲೆಜೆಂಡರಿ ಆಟಗಾರ ರಿಕ್ಕಿ ಪಾಂಟಿಂಗ್ಸ್ ಭವಿಷ್ಯ ನುಡಿದಿದ್ದಾರೆ. ವಿರಾಟ್ ಕೋಹ್ಲಿ ಅವರು ಟಿ20 ವಿಶ್ವಕಪ್ ನಲ್ಲಿ ಉತ್ತಮವಾದ ಪ್ರದರ್ದನ ನೀಡುತ್ತಾರೆ ಎಂದು ಹೇಳಿದ್ದಾರೆ, ಬುಧವಾರದ ಮ್ಯಾಚ್ ಬಳಿಕ ಸಂದರ್ಶನ ಒಂದರಲ್ಲಿ ಮಾತನಾಡಿದ ರಿಕ್ಕಿ ಅವರು ವಿರಾಟ್ ಕೋಹ್ಲಿ ಅವರ ಬಗ್ಗೆ ಹೇಳಿದ್ದು ಹೀಗೆ, “ವಿರಾಟ್ ಕೋಹ್ಲಿ ಅವರು ರನ್ ಗಳಿಸುವುದನ್ನು ನೋಡಲು ಬಹಳ ಚೆನ್ನಾಗಿತ್ತು, ಚೇಸಿಂಗ್ ಸಮಯದಲ್ಲಿ ಗಳಿಸಿದ್ದು ಅಚ್ಚರಿಯನ್ನುಂಟು ಮಾಡಲಿಲ್ಲ. ಈಗಾಗಲೇ ಅವರ ಹೆಸರಲ್ಲಿರುವ ಎಲ್ಲಾ ದಾಖಲೆಗಳು ಕೂಡ ತಂಡ ರನ್ ಚೇಸ್ ಮಾಡುವಾಗ ಅವರು ಉತ್ತಮವಾಗಿ ಆಡುತ್ತಾರೆ ಎಂದು ತೋರಿಸಿದೆ. ವಿಶ್ವಕಪ್ ಪಂದ್ಯಗಳಲ್ಲಿ ವಿರಾಟ್ ಕೋಹ್ಲಿ ಅವರ ಅತ್ಯುತ್ತಮವಾದ ಪ್ರದರ್ಶನವನ್ನು ನಾವೆಲ್ಲರೂ ನೋಡಲಿದ್ದೇವೆ ಎಂದು ನಾನು ಭಾವಿಸುತ್ತೇನೆ..” ಎಂದು ವಿರಾಟ್ ಅವರನ್ನು ಹೊಗಳಿದ್ದಾರೆ ರಿಕ್ಕಿ ಪಾಂಟಿಂಗ್ಸ್.

ಆಸ್ಟ್ರೇಲಿಯಾದ ಮೈದಾನದಲ್ಲಿ ಹೆಚ್ಚಿನ ಗಳಿಸಿ, ಟಿ20 ವಿಶ್ವಕಪ್ ನಲ್ಲಿ ವಿರಾಟ್ ಅವರು ಪ್ರಮುಖವಾದ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾಗಬೇಕು ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ ರಿಕ್ಕಿ. ಇನ್ನು ವಿರಾಟ್ ಅವರ ಫಾರ್ಮ್ ಬಗ್ಗೆ ಮಾತನಾಡಿ, “ಪ್ರತಿಯೊಬ್ಬ ಆಟಗಾರನು ತನ್ನ ವೃತ್ತಿ ಜೀವನದಲ್ಲಿ ಈ ದಾರಿಯಲ್ಲಿ ಸಾಗುತ್ತಾನೆ, ವಿಚಾರಗಳು ಅಂದುಕೊಂಡ ಹಾಗೆ ನಡೆಯದೆ ಇದ್ದಾಗ, ರನ್ ಗಳಿಸಲು ಕಷ್ಟವಾದಾಗ, ಎಲ್ಲವೂ ಕಠಿಣ ಎನ್ನಿಸುತ್ತದೆ. ನಾನು ಕೂಡ ನನ್ನ ವೃತ್ತಿಜೀವನದ ಕೊನೆಯ ವರ್ಷಗಳಲ್ಲಿ ಇದನ್ನು ಎದುರಿಸಿದ್ದೇನೆ. ನನ್ನ ವೃತ್ತಿಜೀವನ ಬೇಗ ಇಳಿಮುಖದ ಕಡೆಗೆ ಸಾಗುತ್ತಿತ್ತು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿರಲಿಲ್ಲ..” ಎಂದು ತಮ್ಮ ಬಗ್ಗೆ ಸಹ ಹೇಳಿದ್ದಾರೆ. ನಮ್ಮ ವಿರಾಟ್ ಕೋಹ್ಲಿ ಅವರು ಇತ್ತೀಚಿನ ಸಂದರ್ಶನ ದಲ್ಲಿ ಮಾತನಾಡಿ, ಫಾರ್ಮ್ ಗೆ ಬರಲು ಪರಿಶ್ರಮ ಪಡುತ್ತಿರುವ ಬಗ್ಗೆ ಹೇಳಿದ್ದರು. ಮುಂದಿನ ತಿಂಗಳು ಟಿ20 ವರ್ಲ್ಡ್ ಕಪ್ ನಲ್ಲಿ ವಿರಾಟ್ ಕೋಹ್ಲಿ ಅವರ ಪ್ರದರ್ಶನ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.