ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮೇಲ್ನೋಟಕ್ಕೆ ಬಲಿಷ್ಠವಾಗಿರುವ ಭಾರತ ತಂಡಕ್ಕೆ ಕಾಡುತ್ತಿರುವ ಸಮಸ್ಯೆಗಳೇನು ಗೊತ್ತೇ?? ಎರಡು ಪಂದ್ಯ ಗೆದ್ದರೂ ತೀರಿಲ್ಲ ಸಂಕಷ್ಟ: ಯಾವ್ಯಾವು ಗೊತ್ತೇ??

ಮೇಲ್ನೋಟಕ್ಕೆ ಬಲಿಷ್ಠವಾಗಿರುವ ಭಾರತ ತಂಡಕ್ಕೆ ಕಾಡುತ್ತಿರುವ ಸಮಸ್ಯೆಗಳೇನು ಗೊತ್ತೇ?? ಎರಡು ಪಂದ್ಯ ಗೆದ್ದರೂ ತೀರಿಲ್ಲ ಸಂಕಷ್ಟ: ಯಾವ್ಯಾವು ಗೊತ್ತೇ??

161

ಆಗಸ್ಟ್ 27ರಂದು ಶುರುವಾದ ಏಷ್ಯಾಕಪ್ ಪಂದ್ಯಗಳಲ್ಲಿ ಭಾರತ ತಂಡ ಆಡಿದ 2 ಪಂದ್ಯಗಳಲ್ಲಿ ಜಯ ಸಾಧಿಸಿ, ಸೂಪರ್ 4 ಹಂತಕ್ಕೆ ತಲುಪಿದೆ, ಆದರೆ ಪಂದ್ಯಗಳನ್ನು ಗೆದ್ದಿದ್ದರು ಸಹ, ಭಾರತ ತಂಡ ಪರಿಪೂರ್ಣವಾಗಿಲ್ಲ, ತಂಡದಲ್ಲಿ ಕೆಲವು ನೂನ್ಯತೆಗಳಿವೆ. ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಉತ್ತಮವಾದ ಪ್ರದರ್ಶನ ನೀಡಿದರು ಸಹ, ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ಕಳಪೆ ಪ್ರದರ್ಶನ ನೀಡಿತು, ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ ಪಂದ್ಯಗಳು ಹಾಗು ಮುಂದಿನ ದಿನಗಳಲ್ಲಿ ಬರುವ ಟಿ20 ವಿಶ್ವಕಪ್ ಪಂದ್ಯಗಳು ಭಾರತ ತಂಡಕ್ಕೆ ಬಹಳ ಮುಖ್ಯವಾದ ಪಂದ್ಯಗಳಾಗಿದೆ. ಇದೀಗ ಭಾರತ ತಂಡದಲ್ಲಿ ಸಧ್ಯಕ್ಕೆ ನಾಲ್ಕು ನೂನ್ಯತೆಗಳಿವೆ, ಅವುಗಳನ್ನು ಸರಿಪಡಿಸಿಕೊಂಡರೆ ಮುಂಬರುವ ಪಂದ್ಯಗಳನ್ನು ಒಳ್ಳೆಯ ಅಂತರದಲ್ಲಿ ಗೆಲ್ಲಬಹುದು. ಆ ನೂನ್ಯತೆಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

Follow us on Google News

*ಆರಂಭಿಕ ಬ್ಯಾಟ್ಸ್ಮನ್ ಗಳ ಸಮಸ್ಯೆ :- ಟೀಮ್ ಇಂಡಿಯಾದ ಓಪನಿಂಗ್ ಬ್ಯಾಟ್ಸ್ಮನ್ ಗಳು ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್, ಇವರಿಬ್ಬರು ಸಹ ನಿರೀಕ್ಷೆಯ ಮಟ್ಟದಲ್ಲಿ ಬ್ಯಾಟಿಂಗ್ ಮಾಡದೆ ಇರುವುದು ಭಾರತ ತಂಡಕ್ಕೆ ಸಮಸ್ಯೆಯೇ ಆಗಿದೆ. ಪಾಕಿಸ್ತಾನ್ ಮತ್ತು ಹಾಂಗ್ ಕಾಂಗ್ ಎರಡರ ವಿರುದ್ಧದ ಪಂದ್ಯದಲ್ಲು ಇವರಿಬ್ಬರ ಜೊತೆಯಾಟ ಉತ್ತಮವಾಗಿ ಇರಲಿಲ್ಲ. ಇಬ್ಬರಲ್ಲಿ ಒಬ್ಬರು ಕೂಡ ಕ್ಲಿಕ್ ಆಗದೆ ಇರುವುದು ಭಾರತ ತಂಡಕ್ಕೆ ಸಮಸ್ಯೆಯೇ ಆಗಿದೆ.
*ಬ್ಯಾಟಿಂಗ್ ನಲ್ಲಿ ಮಂದಗತಿ :- ಆರಂಭಿಕ ಬ್ಯಾಟ್ಸ್ಮನ್ ಗಳು ವೇಗವಾಗಿ ರನ್ ಕಲೆಹಾಕುತ್ತಿಲ್ಲ. ವಿರಾಟ್ ಕೋಹ್ಲಿ ಅವರು ಹಾಂಗ್ ಕಾಂಗ್ ಪಂದ್ಯದಲ್ಲಿ 59 ರನ್ ಗಳಿಸಿದರು, ಆದರೆ ಅರ್ಧಶತಕ ಗಳಿಸಲು ಅವರು 44 ಬಾಲ್ ಗಳನ್ನು ತೆಗೆದುಕೊಂಡರು, ಅದೇ ಕೆ.ಎಲ್.ರಾಹುಲ್ ಮತ್ತು ವಿರಾಟ್ ಅವರ ಜೊತೆಯಾಟದಲ್ಲಿ ಕಲೆಹಾಕಿದ್ದು ಕೇವಲ 56ರನ್ ಗಳು. ಆರಂಭಿಕ ಬ್ಯಾಟ್ಸ್ಮನ್ ಗಳು ಹೆಚ್ಚಾಗಿ ಕ್ರೀಸ್ ನಲ್ಲಿ ಇರುತ್ತಿದ್ದಾರೆ, ಹಾಗಾಗಿ ರನ್ ಗಳು ವೇಗವಾಗಿ ಬರದೆ ಇದ್ದರೆಜ್ ಮಧ್ಯ ಕ್ರಮಾಂಕದ ಬ್ಯಾಟ್ಸ್ಮನ್ ಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ.

*ಮೂರನೆಯ ಕ್ರಮಾಂಕದ ವೇಗಿ ಬೌಲರ್ ಕೊರತೆ :- ಪ್ರಸ್ತುತ ಆವೇಶ್ ಖಾನ್ ಅವರು ಪಂದ್ಯಗಳನ್ನು ಆಡಿದ್ದು, ಎರಡು ಪಂದ್ಯಗಳಲ್ಲಿ ಅವರ ಪ್ರದರ್ಶನ ಚೆನ್ನಾಗಿರಲಿಲ್ಲ, ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಆವೇಶ್ ಖಾನ್ ಅವರು 4 ಓವರ್ ಗಳಲ್ಲಿ 53 ರನ್ ಗಳನ್ನು ನೀಡಿ, ದುಬಾರಿಯಾದರು. ಭಾರತ ತಂಡಕ್ಕೆ ಮೂರನೇ ಬೌಲರ್ ಇಲ್ಲದೆ ಇರುವುದು ಕೂಡ ಸಮಸ್ಯೆ ಆಗಿದೆ.
*ಬೌಲರ್ ಗಳ ಲಯ ತಪ್ಪಿದೆ :- ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಆವೇಶ್ ಖಾನ್ 54 ರನ್ ಗಳು, ಅರ್ಷದೀಪ್ ಸಿಂಗ್ 44 ರನ್ ಗಳನ್ನು ಕೊಟ್ಟಿದ್ದಾರೆ. ಸೂಪರ್ 4 ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಆಡುವ ಸಾಧ್ಯತೆ ಇದೆ. ಹಾಗಾಗಿ ಇದೆ ಬೌಲರ್ ಗಳು ಆ ಸೂಪರ್ 4 ಪಂದ್ಯದಲ್ಲೂ ಬೌಲಿಂಗ್ ಮಾಡುವುದರಿಂದ ಟೀಮ್ ಗೆ ಚಿಂತೆ ಹೆಚ್ಚಾಗಿದೆ.

ಸೂಪರ್ 4 ಹಂತದಲ್ಲಿ ಮ್ಯಾಚ್ ನಡೆಯುವುದು ರಾಬಿಟ್ ಫಾರ್ಮೇಟ್ ನಲ್ಲಿ, ಇಲ್ಲಿ ಯಾವ ತಂಡ ಹೆಚ್ಚು ಪಾಯಿಂಟ್ಸ್ ಗಳಿಸುತ್ತದೆಯೋ ಅದೇ ತಂಡ ಫೈನಲ್ ಗೆ ಪ್ರವೇಶ ಮಾಡುತ್ತದೆ. ಹಾಗಾಗಿ ಕೊನೆಯ ಕ್ಷಣದಲ್ಲಿ ಟೀಮ್ ಮಾಡುವ ಸಣ್ಣ ಪುಟ್ಟ ತಪ್ಪುಗಳು ಸಹ ಇಲ್ಲಿ ತೊಂದರೆ ತರಬಹುದು. ಹಾಗಾಗಿ ಭಾರತ ತಂಡ ಇನ್ನುಮುಂದೆ ಬಹಳ ಎಚ್ಚರಿಕೆಯಿಂದ ಒಂದೊಂದು ಹೆಜ್ಜೆಯನ್ನು ಇಡಬೇಕು, ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು