ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪಂದ್ಯ ಗೆಲ್ಲಿಸಿಕೊಟ್ಟವರೇ ಔಟ್: ಏಷ್ಯಾ ಕಪ್ ನಲ್ಲಿ ಭಾರತಕ್ಕೆ ಮತ್ತೊಂದು ಶಾಕ್; ಮತ್ತೊಬ್ಬ ಪ್ರಮುಖ ಆಲ್ ರೌಂಡರ್ ಔಟ್: ಬದಲಿ ಆಟಗಾರ ಯಾರು ಗೊತ್ತೇ??

11,307

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡ ಈ ಬಾರಿಯ ಏಷ್ಯಾ ಕಪ್ ನಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಕೆಲವೊಂದು ಆಟಗಾರರು ಸಮಸ್ಯೆ ಎದುರಿಸುತ್ತಿದ್ದರೂ ಕೂಡ ಹಲವು ಜನ ಉತ್ತಮ ಆಟವಾಡುತ್ತಿರುವ ಕಾರಣ ಭಾರತ ಕ್ರಿಕೆಟ್ ತಂಡ ಆಟವಾಡಿರುವ ಎರಡು ಕ್ರಿಕೆಟ್ ಪಂದ್ಯಗಳನ್ನು ಗೆದ್ದು ಮುಂದಿನ ಹಂತದಲ್ಲಿ ಗೆದ್ದು ಬೀಗುವ ವಿಶ್ವಸವನ್ನು ಮೂಡಿಸಿದೆ. ಆದರೆ ಇಂತಹ ಸಮಯದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಟೂರ್ನಿ ಆರಂಭಕ್ಕೂ ಮುನ್ನವೇ ಹಲವಾರು ಕ್ರಿಕೆಟ್ ಆಟಗಾರರು ಇಂಜುರಿ ಸಮಸ್ಯೆಗೆ ಒಳಗಾಗಿದ್ದು ನಿಮಗೆಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಟೂರ್ನಿ ಆರಂಭವಾದ ಮೇಲೆ ಇದೀಗ ಮತ್ತೊಬ್ಬ ಆಟಗಾರ ತಂಡದಿಂದ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಅದರಲ್ಲಿಯೂ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಬಹಳ ಜವಾಬ್ದಾರಿಯುತ ಆಟವಾಡಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸುವ ಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಮುಖ ಆಲ್ ರೌಂಡರ್, ಭಾರತದ ತಂಡದಿಂದ ಇಂಜುರಿ ಸಮಸ್ಯೆಯಿಂದ ಹೊರ ಹೋಗುತ್ತಿದ್ದಾರೆ.

ಹೌದು ಸ್ನೇಹಿತರೆ, ನಾವು ಮಾತನಾಡುತ್ತಿರುವುದು ರವೀಂದ್ರ ಜಡೇಜಾ ರವರ ಬಗ್ಗೆ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ರವರು ಏಷ್ಯಾ ಕಪ್ ನಿಂದ ಉಳಿದ ಪಂದ್ಯಗಳಿಂದ ಹೊರ ಹೋಗುವುದು ಖಚಿತವಾಗಿದ್ದು ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದಾರೆ ಎಂಬುದು ಖಚಿತಗೊಂಡಿದೆ. ಇನ್ನು ಈ ಸಮಯದಲ್ಲಿ ಬಹಳ ಬೇಗವಾಗಿ ಪ್ರಕ್ರಿಯೆ ಆರಂಭಿಸಿ ಬಿಸಿಸಿಐ ಜಡೇಜಾ ಅವರ ಬದಲಿ ಆಟಗಾರನಾಗಿ ಅಕ್ಷರ ಪಟೇಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ, ಇನ್ನು ಕೆಲವೇ ದಿನಗಳಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದು ಖಚಿತವಾಗಿದೆ. ಪ್ರಸ್ತುತವಾಗಿ ಬಿಸಿಸಿಐ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವ ಜಡೇಜಾ ರವರು ಇಲ್ಲದಿರುವುದು ನಿಜಕ್ಕೂ ಭಾರತ ತಂಡಕ್ಕೆ ಒಂದು ಕಹಿ ವಿಷಯ.

Get real time updates directly on you device, subscribe now.