ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿರಾಟ್ ಕೊಹ್ಲಿ ಅನುಭವಿಸಿದ ಮಾನಸಿಕ ತೊಂದರೆಗೆ ಕಾರಣವಾದವರು ಯಾರು ಗೊತ್ತೇ?? ಬಾಲಿವುಡ್ ನಟ ಮಾಡಿದ್ದೇನು ಗೊತ್ತೇ??

893

Get real time updates directly on you device, subscribe now.

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಕಿಂಗ್ ಕೋಹ್ಲಿ ಅವರು ಕಳಪೆ ಫಾರ್ಮ್ ಇಂದ ಹೊರಬರಲು ಬಹಳ ಪ್ರಯತ್ನ ಮಾಡುತ್ತಿರುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ವಿರಾಟ್ ಕೋಹ್ಲಿ ಅವರು 2019ರ ಬಳಿಕ ಶತಕ ಸಿಡಿಸಿಲ್ಲ, ಕಿಂಗ್ ಕೋಹ್ಲಿ ಅವರು ಫಾರ್ಮ್ ಗೆ ಬರುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕೋಹ್ಲಿ ಅವರು ಈವರೆಗೂ 70 ಸೆಂಚುರಿ ಭಾರಿಸಿದ್ದು, 71ನೇ ಸೆಂಚುರಿ ನೋಡಲು ಅವರ ಅಭಿಮಾನಿಗಳು ಕಾಯುತ್ತಲಿದ್ದಾರೆ.

ಕಳೆದ ವರ್ಷದ ವರೆಗೂ ವಿರಾಟ್ ಅವರು ಅರ್ಧ ಶತಕ ಭಾರಿಸುತ್ತಿದ್ದರು, ಆದರೆ ಈ ವರ್ಷ ಅದು ಕೂಡ ಇಲ್ಲದ ಹಾಗೆ ಆಗಿದೆ, ರನ್ ಗಳಿಸಲು ವಿರಾಟ್ ಅವರು ಕಷ್ಟಪಡುತ್ತಿರುವುದನ್ನು ನೋಡಬಹುದು. ವಿರಾಟ್ ಅವರು ಇಂಗ್ಲೆಂಡ್ ಸರಣಿ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಒಂದು ತಿಂಗಳು ಬ್ರೇಕ್ ಪಡೆದು, ಏಷ್ಯಾಕಪ್ ಪಂದ್ಯದ ಮೂಲಕ ಕಂಬ್ಯಾಕ್ ಮಾಡಿದ್ದಾರೆ, ಮೊದಲ ಪಾಕಿಸ್ತಾನ್ ವಿರುಧ್ಧದ ಪಂದ್ಯದಲ್ಲಿ 34 ಬಾಲ್ ಗಳಲ್ಲಿ 35 ರನ್ ಗಳಿಸಿ ಔಟ್ ಆದರು ವಿರಾಟ್, ನಿನ್ನೆ ನಡೆದ ಹಾಂಗ್ ಕಾಂಗ್ ವಿರುದ್ಧ ಪಂದ್ಯದಲ್ಲಿ 44 ಬಾಲ್ ಗಳಲ್ಲಿ 59 ರನ್ ಗಳಿಸಿದರು, ಇದು ಉತ್ತಮ ಪ್ರದರ್ಶನವೇ ಆಗಿದೆ..ಆದರೆ ಬಾಲಿವುಡ್ ವಿಮರ್ಶಕ ಕೆ.ಆರ್.ಕೆ ವಿರಾಟ್ ಕೋಹ್ಲಿ ಅವರನ್ನು ಟೀಕೆ ಮಾಡುತ್ತಿದ್ದಾರೆ.

ವಿರಾಟ್ ಅವರು ಫಾರ್ಮ್ ಕಳೆದುಕೊಂಡು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರುವುದಕ್ಕೆ ಕಾರಣ ಅನುಷ್ಕಾ ಶರ್ಮಾ ಅವರು ಎಂದು ಕೆ.ಆರ್.ಕೆ ಟ್ವೀಟ್ ಮಾಡಿದ್ದಾರೆ, ಅಷ್ಟೇ ಅಲ್ಲದೆ, ಸಿನಿಮಾ ನಟಿಯರನ್ನು ಮದುವೆ ಆದರೆ ಇದೇ ರೀತಿ ಆಗುತ್ತದೆ ಎಂದು ಟ್ವೀಟ್ ಮಾಡಿದ್ದು, ಕೆ.ಆರ್.ಕೆ ಅವರ ಟ್ವೀಟ್ ನೋಡಿ ಅಭಿಮಾನಿಗಳು ಅವರನ್ನು ತರಾಟೆಗೆ ತೆಗೆದುಕೊಂಡರು, ಹೀಗಾದ ಕೆಲವೇ ಸಮಯದಲ್ಲಿ ಕೆ.ಆರ್.ಕೆ ಆ ಟ್ವೀಟ್ ಡಿಲೀಟ್ ಮಾಡಿದರು ಸಹ, ಅಭಿಮಾನಿಗಳು ಅದರ ಸ್ಕ್ರೀನ್ ಶಾಟ್ ತೆಗೆದು, ಕೆ.ಆರ್.ಕೆ ಅವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

Get real time updates directly on you device, subscribe now.