ಒಂದಲ್ಲ ಎರಡಲ್ಲ ಎಂಟು ವರ್ಷಗಳಿಂದ ಪ್ರೀತಿ: ಮದುವೆ ದಿನಾಂಕ ಕೂಡ ಫಿಕ್ಸ್ ಆಯಿತು: ಆದರೆ ಹುಡುಗಿಯ ಪರಿಸ್ಥಿತಿ ಏನಾಗಿದೆ ಗೊತ್ತೇ??
ಒಂದಲ್ಲ ಎರಡಲ್ಲ ಎಂಟು ವರ್ಷಗಳಿಂದ ಪ್ರೀತಿ: ಮದುವೆ ದಿನಾಂಕ ಕೂಡ ಫಿಕ್ಸ್ ಆಯಿತು: ಆದರೆ ಹುಡುಗಿಯ ಪರಿಸ್ಥಿತಿ ಏನಾಗಿದೆ ಗೊತ್ತೇ??
ಪ್ರೀತಿ ಪ್ರೇಮದ ವಿಚಾರದಲ್ಲಿ ಅನೇಕ ರೀತಿಯ ಘಟನೆಗಳು ಈ ಪ್ರಪಂಚದಲ್ಲಿ ನಡೆಯುತ್ತವೆ, ಅವುಗಳಲ್ಲಿ ಕೆಲವು ಘಟನೆಗಳು ಮನಸ್ಸಿಗೆ ಬೇಸರ ತರಿಸುತ್ತದೆ. ಇಂದು ಅಂಥದ್ದೇ ಒಂದು ವಿಚಾರದ ಬಗ್ಗೆ ಹೇಳುತ್ತೇವೆ.. ಕೇರಳದ ಮಲಪ್ಪುರಂ ನಲ್ಲಿ ಈ ಘಟನೆ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಆಗಿ ಹೊಸ ಜೀವನ ಆರಂಭಿಸಬೇಕಿದ್ದ ಹುಡುಗಿ, ಮದುವೆಗೆ ಕೆಲವೇ ಸಮಯ ಇದೆ ಎನ್ನುವಾಗಲೇ, ಆತ್ಮಹತ್ಯೆಗೆ ಶರಣಾಗಿ ಪ್ರಾಣ ಕಳೆದುಕೊಂಡಳು. ಘಟನೆ ನಡೆದ ಎರಡು ತಿಂಗಳ ಬಳಿಕ ಆಕೆಯ ಸಾವಿಗೆ ಕಾರಣ ಏನು ಎಂದು ಗೊತ್ತಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಹುಡುಗಿ ವಿಚಾರದಲ್ಲಿ ಅಷ್ಟಕ್ಕೂ ನಡೆದಿದ್ದೇನು ಎಂದು ತಿಳಿಸುತ್ತೇವೆ ನೋಡಿ..
ಆತ್ಮಹತ್ಯೆ ಮಾಡಿಕೊಂಡ ಹುಡುಗಿಯ ಹೆಸರು ಮಾನ್ಯ, ಈಕೆಯ ವಯಸ್ಸು 22, ಥ್ರಿಕ್ಕಾಲಯೂರ್ ಊರಿಗೆ ಸೇರಿದವರು. ಕಳೆದ 8 ವರ್ಷಗಳಿಂದ ಅಶ್ವಿನ್ ಎನ್ನುವ ಹುಡುಗನನ್ನು ಪ್ರೀತಿಸುತ್ತಿದ್ದಳು, ಅಶ್ವಿನ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ. ಹೇಗೋ ಮಾಡಿ, ಮನೆಯವರನ್ನು ಒಪ್ಪಿಸಿ, ಆತನ ಜೊತೆಗೆ ಮದುವೆ ಆಗುವ ನಿರ್ಧಾರ ಮಾಡಿ, ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಇಬ್ಬರಿಗೂ ನಿಶ್ಚಿತಾರ್ಥವು ನಡೆಯಿತು. ಎಲ್ಲವೂ ಚೆನ್ನಾಗಿಯೇ, ಇನ್ನೇನು ಮಗಳ ಮದುವೆ ನಡೆಯುತ್ತದೆ ಎಂದುಕೊಳ್ಳುವಷ್ಟರಲ್ಲೇ ಈ ವರ್ಷ ಜೂನ್ ತಿಂಗಳಿನಲ್ಲಿ ಮಾನ್ಯ ಪ್ರಾಣ ಕಳೆದುಕೊಂಡು ತಂದೆ ತಾಯಿಗೆ ಶಾಕ್ ನೀಡಿದ್ದಾಳೆ. ತಮ್ಮ ಮಗಳ ಸಾವಿನ ಬಗ್ಗೆ ಅನುಮಾನ ಇದೆ ತನಿಖೆ ಆಗಬೇಕು ಎಂದು ಮಾನ್ಯ ತಂದೆ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ತನಿಖೇ ನಡೆಸಿದ ಬಳಿಕ, ಮಾನ್ಯ ಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದು, ಅಶ್ವಿನ್ ಎಂದು ಗೊತ್ತಾಗಿದೆ. ಇಬ್ಬರು 8 ವರ್ಷಗಳಿಂದ ಪ್ರೀತಿಸುತ್ತಿದ್ದು, ಅಶ್ವಿನ್ ವಿದೇಶಕ್ಕೆ ಹೋದ ಬಳಿಕ ಪ್ರೀತಿಯಲ್ಲಿ ಸಾಕಷ್ಟು ಏರುಪೇರುಗಳು ನಡೆದಿದೆ. ಮದುವೆ ಆಗಲು ಇಷ್ಟವಿಲ್ಲದ ಅಶ್ವಿನ್ ಮದುವೆಯಿಂದ ದೂರ ಉಳಿಯಲು ಆಕೆಗೆ ಮಾನಸಿಕ ಹಿಂಸೆ ನೀಡಿದ್ದು, ಅಶ್ವಿನ್ ಮದುವೆಗೆ ನಿರಾಕರಿಸಿದ ಕಾರಣ ಬೇಸತ್ತ ಮಾನ್ಯ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಅದೆಲ್ಲವೂ ಆಕೆಯ ಮೊಬೈಲ್ ರೆಕಾರ್ಡ್ಸ್ ಹಾಗೂ ಮೆಸೇಜ್ ಗಳ ಮೂಲಕ ಬೆಳಕಿಗೆ ಬಂದಿದೆ. ಆರೋಪಿ ಅಶ್ವಿನ್ ಎಂದು ಗೊತ್ತಾದ ಬಳಿಕ, ಆತ ವಿದೇಶದಲ್ಲಿದ್ದ ಕಾರಣ ಪೊಲೀಸರಿಗೆ ಬಂಧಿಸಲು ಸಾಧ್ಯವಾಗಿರಲಿಲ್ಲ. ಆದರೆ ಎರಡು ತಿಂಗಳ ಬಳಿಕ ಅಶ್ವಿನ್ ವಿದೇಶದಿಂದ ಬಂದ ತಕ್ಷಣವೇ ಅರಿಕೋಡ್ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.