ಭಾರತಕ್ಕೆ ರೋಹಿತ್ ನಂತರದ ನಾಯಕ ಸಿಕ್ಕಿಬಿಟ್ಟನೇ?? ಭಾರತದ ಭವಿಷ್ಯದ ಸಮರ್ಥ ನಾಯಕನನ್ನು ಹೆಸರಿಸಿದ ಹರ್ಭಜನ್. ಹೇಳಿದ್ದೇನು ಗೊತ್ತೇ??

ಭಾರತಕ್ಕೆ ರೋಹಿತ್ ನಂತರದ ನಾಯಕ ಸಿಕ್ಕಿಬಿಟ್ಟನೇ?? ಭಾರತದ ಭವಿಷ್ಯದ ಸಮರ್ಥ ನಾಯಕನನ್ನು ಹೆಸರಿಸಿದ ಹರ್ಭಜನ್. ಹೇಳಿದ್ದೇನು ಗೊತ್ತೇ??

ರೋಹಿತ್ ಶರ್ಮಾ ಅವರ ನಂತರ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗುವವರು ಯಾರು, ಆ ಸಾಮರ್ಥ್ಯ ಯಾರಿಗಿದೆ ಎನ್ನುವ ಪ್ರಶ್ನೆ ಈಗ ಶುರುವಾಗಿದೆ. ಇದರ ಬಗ್ಗೆ ಭಾರತ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರು ಮಾತನಾಡಿದ್ದು, ಹಾರ್ದಿಕ್ ಪಾಂಡ್ಯ ಅವರಿಗೆ ಆ ಸಾಮರ್ಥ್ಯ ಇದೆ ಎಂದು ಹೇಳಿದ್ದಾರೆ. ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಅದ್ಭುತವಾದ ಆಲ್ ರೌಂಡರ್ ಇನ್ನಿಂಗ್ಸ್ ನೀಡಿದ ಬಳಿಕ ಹರ್ಭಜನ್ ಸಿಂಗ್ ಅವರು ಈ ಮಾತುಗಳನ್ನಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಮೆಚ್ಚುಗೆ ಸೂಚಿಸಿ, ಅವರನ್ನು ನೋಡಿದರೆ ಎಂ.ಎಸ್.ಧೋನಿ ಅವರ ನೆನಪಾಗುತ್ತದೆ ಎಂದು ಹೇಳಿದ್ದಾರೆ ಹರ್ಭಜನ್ ಸಿಂಗ್.

ಹಾರ್ದಿಕ್ ಪಾಂಡ್ಯ ಅವರು ಕಳೆದ ವರ್ಷ ಟಿ20 ವರ್ಲ್ಡ್ ಕಪ್ ಬಳಿಕ ಫಿಟ್ನೆಸ್ ಸಮಸ್ಯೆಯಿಂದ ಭಾರತ ತಂಡದಿಂದ ದೂರ ಉಳಿದಿದ್ದರು, ಈ ವರ್ಷ ಐಪಿಎಲ್ ನಲ್ಲಿ ನೀಡಿದ ಅತ್ಯುನ್ನತ ಪ್ರದರ್ಶನದಿಂದ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಪಾಕಿಸ್ತಾನ್ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಅದ್ಭುತವಾದ ಪ್ರದರ್ಶನ ನೀಡಿದರು, ಬೌಲಿಂಗ್ ನಲ್ಲಿ ಕೇವಲ 26 ರನ್ ನೀಡಿ, 3 ವಿಕೆಟ್ಸ್ ಪಡೆದರು, ಬ್ಯಾಟಿಂಗ್ ನಲ್ಲಿ 17 ಎಸೆತಗಳಲ್ಲಿ 37 ರನ್ ಸಿಡಿಸಿ, ಭಾರತ ತಂಡ ಗೆಲ್ಲುವ ಹಾಗೆ ಮಾಡಿದರು. ಒಟ್ಟಿನಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಉನ್ನತವಾದ ಫಿನಿಷರ್ ರೋಲ್ ಪ್ಲೇ ಮಾಡುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇದೀಗ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಕೆಲವು ಮಾತುಗಳನ್ನಾಡಿದ್ದಾರೆ..

“ಪಾಂಡ್ಯ ಕ್ಯಾಪ್ಟನ್ ಆಗಬೇಕು, ನನ್ನ ಪ್ರಕಾರ ಆಗ್ತಾನೆ, ಇತ್ತೀಚೆಗೆ ಅವರ ಬೇರೆ ಬೇರೆ ವ್ಯಕ್ತಿತ್ವವನ್ನು ನಾವು ನೋಡಿದ್ದೇವೆ. ಪಂದ್ಯ ನಡೆಯುವಾಗ, ತಾಳ್ಮೆ ಮತ್ತು ಶಾಂತ ಸ್ವಭಾವ ಎಂ.ಎಸ್.ಧೋನಿ ಅವರನ್ನು ನೆನೆಪಿಸುತ್ತದೆ. ಅದ್ಭುತವಾದ ಬ್ಯಾಟಿಂಗ್ ಮೂಲಕ, ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ..ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಮುಂದಿನ ಕ್ಯಾಪ್ಟನ್ ಆಗುವುದನ್ನು ನಾನು ನೋಡುತ್ತೇನೆ. ಪಾಕಿಸ್ತಾನ್ ವಿರುದ್ಧದ ಪಂದ್ಯ ಹಾಗೂ ಐಪಿಎಲ್ ನಲ್ಲಿ ಪಾಂಡ್ಯ ತಮ್ಮ ಮನೋಧರ್ಮ ತೋರಿಸಿದ ಬಗೆ ಅದ್ಭುತವಾಗಿತ್ತು. ನ್ಯಾಷನಲ್ ಟೀಮ್ ಗೆ ಕ್ಯಾಪ್ಟನ್ ಆಗುವ ಸಾಮರ್ಥ್ಯ ಅವರಲ್ಲಿದೆ ಎನ್ನುವ ನಂಬಿಕೆ ನನಗಿದೆ..” ಎಂದು ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಮಾತನಾಡಿದ್ದಾರೆ ಹರ್ಭಜನ್ ಸಿಂಗ್. ಇವರ ಮಾತಿನ ಹಾಗೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗುತ್ತಾರಾ ಎಂದು ಕಾದು ನೋಡಬೇಕಿದೆ.